Sign In

By signing in or creating an account, you agree with Associated Broadcasting Company's Terms & Conditions and Privacy Policy.

World Alzheimer’s Day: ಅಲ್ಜೈಮರ್​ ಖಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಗಮನಕೊಡಿ

ವಿಶ್ವ ಅಲ್ಜೈಮರ್​ ದಿನ: ಅಲ್ಜೈಮರ್ ಖಾಯಿಲೆಯ ಆರಂಭಿಕ ಹಂತಗಳಲ್ಲಿ ವ್ಯಕ್ತಿಯ ಸ್ಮರಣೆ, ನಡವಳಿಕೆ ಮತ್ತು ಸಂವಹನ ಕೌಶಲ್ಯಗಳಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇಂತಹ ಲಕ್ಷಣಗಗಳು ಕಂಡು ಬರುತ್ತಿದ್ದರೆ ನರವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

World Alzheimer's Day: ಅಲ್ಜೈಮರ್​ ಖಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಗಮನಕೊಡಿ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Sep 21, 2021 | 11:27 AM

ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬರುವ ಅಲ್ಜೈಮರ್ ಖಾಯಿಲೆಯು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಈ ಖಾಯಿಲೆಯು ವ್ಯಕ್ತಿಯಲ್ಲಿ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ, ಆಲ್ಝೈಮರ್ ಖಾಯಿಲೆ ಹೊಂದಿರುವ ವ್ಯಕ್ತಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ವಯಸ್ಸಾದವರಲ್ಲಿ ಅಲ್ಜೈಮರ್ ಆರಂಭಿಕ ಲಕ್ಷಣಗಳಿಗೆ ಗಮನ ಕೊಡುವುದು ಮುಖ್ಯ. ವ್ಯಕ್ತಿಯ ನಡುವಳಿಕೆಗೆ ಮುಖ್ಯವಾದ ನರಗಳ ಕ್ಷೀಣತೆಯಿಂದಾಗಿ ಅಲ್ಜೈಮರ್ ಸಂಭವಿಸುತ್ತದೆ.

ಅಲ್ಜೈಮರ್ ಖಾಯಿಲೆಯ ಆರಂಭಿಕ ಹಂತಗಳಲ್ಲಿ ವ್ಯಕ್ತಿಯ ಸ್ಮರಣೆ, ನಡವಳಿಕೆ ಮತ್ತು ಸಂವಹನ ಕೌಶಲ್ಯಗಳಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇಂತಹ ಲಕ್ಷಣಗಗಳು ಕಂಡು ಬರುತ್ತಿದ್ದರೆ ನರವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.

ನರಶಸ್ತ್ರಚಿಕಿತ್ಸಕ ಡಾ.ರಾಜ್ ಅಗರ್​ಬತ್ತಿವಾಲಾ ಅವರು ಹೇಳಿದ ಮಾಹಿತಿಯಂತೆ ಹಿಂದುಸ್ತಾನ್ ಟೈಮ್ಸ್ ಈ ಖಾಯಿಲೆಯ ಆರಂಭಿಕ ಲಕ್ಷಣದ ಕುರಿತಾಗಿ ವರದಿ ಮಾಡಿದೆ. ವೈದ್ಯರು ಸೂಚಿಸಿರುವ ಕೆಲವು ಅಂಶಗಳು ಈ ಕೆಳಗಿನಂತಿದೆ.

ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ ಅಲ್ಜೈಮರ್ ಖಾಯಿಲೆಯ ಪ್ರಮುಖ ಲಕ್ಷಣವೆಂದರೆ ನೆನಪಿನ ಶಕ್ತಿ ಕುಂಠಿತಗೊಳ್ಳುವುದು. ಸಾಮಾನ್ಯವಾಗಿ ಮರೆವು ಒಂದು ರೋಗವಲ್ಲ. ಆದರೆ ಅಲ್ಜೈಮರ್ ರೋಗಕ್ಕೆ ತುತ್ತಾದವರಲ್ಲಿ ನೆನಪಿನ ಶಕ್ತಿ ತುಂಬಾ ಕುಂಠಿತಗೊಳ್ಳುತ್ತದೆ. ಉದಾಹರಣೆಗೆ ಓರ್ವ ವ್ಯಕ್ತಿ ಒಂದು ಸ್ಥಲಕ್ಕೆ ಭೇಟಿ ನೀಡಿದ್ದರೆ, ಒಂದರೆಡು ದಿನಗಳಲ್ಲಿಯೇ ಆತ ಸಂಪೂರ್ಣವಾಗಿ ವಿಷಯವನ್ನು ಮರೆತುಬಿಡುತ್ತಾನೆ. ಕೆಲವು ಬಾರಿ ತಿಂದ ಆಹಾರವೇ ಆತನಿಗೆ ನೆನಪಿರುವುದಿಲ್ಲ. ಇಂತಹ ಲಕ್ಷಣಗಳು ಅಲ್ಜೈಮರ್ ಖಾಯಿಲೆಯ ಅರಂಭಿಕ ಲಕ್ಷಣಗಳಾಗಿವೆ.

ಹಣವನ್ನು ಎಣಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ತೊಂದರೆ ಈ ರೋಗದ ಮತ್ತೊಂದು ಆರಂಭಿಕ ಲಕ್ಷಣವೆಂದರೆ, ವ್ಯಕ್ತಿಯು ಸಾಮಾನ್ಯ ಲೆಕ್ಕಾಚಾರ ಮಾಡುವಲ್ಲಿಯೂ ಗೊಂದಲಕ್ಕೊಳಗಾಗುತ್ತಾನೆ. ಹಣದ ಲೆಕ್ಕಾಚಾರಗಳನ್ನು ಮಾಡುವುದು ಆತನಿಗೆ ಕಷ್ಟವಾಗುತ್ತದೆ. ಹಣವನ್ನು ನಿರ್ವಹಿಸುವಲ್ಲಿ ಅಥವಾ ಬಿಲ್ ಪಾವತಿಸುವಲ್ಲಿ ಗೊಂದಲಕ್ಕೊಳಗಾಗುತ್ತಾನೆ.

ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆಗಳು ಅಲ್ಜೈಮರ್​ನಿಂದ ಬಳಲುತ್ತಿರುವ ವ್ಯಕ್ತಿಯು ಮನಸ್ಥಿತಿಯ ಬದಲಾವಣೆಗಳನ್ನು ಎದುರಿಸಬಹುದು. ಈ ಸಂದರ್ಭದಲ್ಲಿ ವ್ಯಕ್ತಿಗೆ ಖಿನ್ನತೆ ಕಾಡುತ್ತದೆ. ಮಾನಸಿಕವಾಗಿ ಆತನ ಚಿಂತೆನೆ, ಯೋಚನೆಗಳೆಲ್ಲ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಏಕಾಗ್ರತೆ ಮತ್ತು ಸಂವಹನದಲ್ಲಿ ತೊಂದರೆ ವ್ಯಕ್ತಿಯು ತನ್ನ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೆಚ್ಚು ಕಷ್ಟಪಡುತ್ತಾನೆ. ಯಾವುದೇ ವಿಷಯ ಅಥವಾ ಕೆಲಸದಲ್ಲಿ ಆತ ತನ್ನ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು. ಮಾತನಾಡುವಾಗ ವಾಕ್ಯಗಳಲ್ಲಿ ಸರಿಯಾದ ಪದಗಳನ್ನು ರೂಪಿಸಲು ಕಷ್ಟ ಪಡುತ್ತಾನೆ. ನೆನಪಿನ ಶಕ್ತಿಯ ತೊಂದರೆಯಿಂದ ಸರಿಯಾದ ಪದ ಬಳಕೆಯಿಂದ ವಾಕ್ಯ ರಚಿಸಲು ತೊಂದರೆಗಳಾಗಬಹುದು.

ಸಾಮಾನ್ಯವಾಗಿ ವ್ಯಕ್ತಿ ಯಾವುದೇ ಸಂಗತಿಗಳ ನೆನಪು ಕಂಠಿತಗೊಳ್ಳಬಹುದು. ಈ ಕುರಿತಂತೆ ಮನೆಯವರು ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಸ್ನೇಹಿತರಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಲ್ಲಿ ಪರೀಕ್ಷೆಗೆ ಕರೆದೊಯ್ಯುವುದು ಉತ್ತಮ. ಅಲ್ಜೈಮರ್ ಸಮಸ್ಯೆ ಪರಿಹಾರಕ್ಕೆ ಔಷಧಿ ಮತ್ತು ಚಿಕಿತ್ಸೆಯ ಹೊರತಾಗಿ ಕುಟುಂಬದ ಸದಸ್ಯರ ಬೆಂಬಲ ಅತಿ ಮುಖ್ಯವಾಗಿರುತ್ತದೆ. ಮನೆಯವರ ಆರೈಕೆ ಮತ್ತು ರಕ್ಷಣೆಯಿಂದ ವ್ಯಕ್ತಿಯ ಮನಸ್ಥಿತಿಯಲ್ಲಿ ಸುಧಾರಣೆಗಳು ಕಂಡು ಬರುತ್ತವೆ.

ಇದನ್ನೂ ಓದಿ:

ಖಾಯಿಲೆಗಳಿಂದ ದೂರವಿರಲು ಯಾವ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ?

Yoga Malike: ನಾನು ಯೋಗ ಮಾಡಲ್ಲ, ಏನಾದರೂ ತೊಂದರೆಯಾಗುತ್ತಾ?

(World alzheimer’s day know about Symptoms of the disease check in kannada)

Published On - 11:11 am, Tue, 21 September 21

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ