Yoga Malike: ನಾನು ಯೋಗ ಮಾಡಲ್ಲ, ಏನಾದರೂ ತೊಂದರೆಯಾಗುತ್ತಾ?

ಸೈಕಲ್ ತುಳಿಯುವುದು, ಬಾವಿಯಿಂದ ನೀರು ಎತ್ತುವುದು, ಬಟ್ಟೆ ತೊಳೆಯುವುದು ಹೀಗೆ ಎಲ್ಲವನ್ನೂ ಮಾಡುವುದರಿಂದ ಆಗಿನ ಕಾಲದವರು ಸದಾ ಕ್ರಿಯಾಶೀಲರಾಗಿದ್ದರು, ಆಲಸ್ಯವಿರಲಿಲ್ಲ. ಹಾಗಾಗಿ ರೋಗಗಳು ಅವರಿಂದ ದೂರವಿದ್ದವು.

Yoga Malike: ನಾನು ಯೋಗ ಮಾಡಲ್ಲ, ಏನಾದರೂ ತೊಂದರೆಯಾಗುತ್ತಾ?
ಯೋಗಾಯೋಗ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 19, 2021 | 6:56 AM

ಯೋಗಾಸನ, ಪ್ರಾಣಾಯಾಮ, ವ್ಯಾಯಾಮ ಮತ್ತು ಧ್ಯಾನಾದಿಗಳ ಪಾಲನೆ ಮಾಡಿದರೆ ಏನು ಉಪಯೋಗ ಎಂಬುದನ್ನು ಹಿಂದಿನ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ. ಹಾಗಾದರೆ ಇವುಗಳನ್ನು ಪಾಲಿಸದಿದ್ದರೆ ಏನಾಗುವುದು ಎಂಬುದನ್ನು ಈವಾರ ತಿಳಿಯೋಣ.

ಗಲ್ಲಿಗಲ್ಲಿಗಳಿಂದ ಹಿಡಿದು ದೇಶ ವಿದೇಶಗಳವರೆಗೂ ಈಗ ಯೋಗದ್ದೇ ಹವಾ.ಯೋಗ ಈಗ ಜನಸಾಮಾನ್ಯರ ಜೀವನದಲ್ಲಿಯೂ ಹಾಸುಹೊಕ್ಕಾದ ಅತ್ಯಂತ ಒಳ್ಳೆಯ ಆಚರಣೆ. ಯೋಗ ಭಾರತೀಯ ಮೂಲದ್ದು ಎಂಬುದು  ಪ್ರಚುರವಾದ ಸಂಗತಿ.   ದೂರದ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿರುವ ಉತ್ತರ ಕನ್ನಡದ ಸಿದ್ದಾಪುರದ ನಾಗೇಂದ್ರ ಗದ್ದೆಮನೆ ಅವರು ಬರೆಯುವ ‘ಬದುಕಿಗಾಗಿ ಯೋಗ’ ಸರಣಿಯನ್ನು ಟಿವಿ9 ಕನ್ನಡ ಡಿಜಿಟಲ್ ಪ್ರಸ್ತುತಪಡಿಸುತ್ತಿದೆ. ದಿನನಿತ್ಯದ ಆಚರಣೆಗಳಲ್ಲಿ ಕಾಡುವ ಪ್ರಶ್ನೆಗಳಿಗೆ ಅತ್ಯಂತ ಸರಳವಾಗಿ ಅವರು ಉತ್ತರಗಳನ್ನು ತಿಳಿಸಿಕೊಡಲಿದ್ದಾರೆ. ಮುಂದೆ ಓದುವ ‘ಸುಂದರ ಯೋಗ’ ನಿಮ್ಮದು.

ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯನ್ನು ಸಹ ಕಂಡಿದ್ದೇವೆ. ಅವರೆಷ್ಟು ದಷ್ಟಪುಷ್ಟರಿದ್ದರು? ಅವರು ಹೇಗೆ ಅವರವರ ಕೆಲಸಗಳನ್ನು ಅವರವರೇ ಹೇಗೆ ಮಾಡಿಕೊಳ್ಳುತ್ತಿದ್ದರುಎಂಬುದನ್ನೂ ನೋಡಿದ್ದೇವೆ. ಕಾಲವು ಬದಲಾದಂತೆ ಹಿಂದಿನ ಪೀಳಿಗೆಯಲ್ಲಿನ ಎಷ್ಟೋ ಉತ್ತಮ ಅಂಶಗಳು ಮುಂದಿನ ಪೀಳಿಗೆಯಲ್ಲಿ ಕ್ಷೀಣಿಸುತ್ತ ಬರುವುದು. ಹಿಂದಿನ ಪೀಳಿಗೆಯ ಜನರಲ್ಲಿದ್ದ ಶಕ್ತಿ, ದೇಹದಾರ್ಢ್ಯತೆ ಎಲ್ಲವೂ. ಆಗಿನ ಕಾಲಕ್ಕೆ 90 ರಿಂದ 100 ವರ್ಷಗಳ ಜೀವಿತಾವಧಿಯು ಸಾಮಾನ್ಯವಾಗಿತ್ತು. ಈಗಿನ ಕಾಲಕ್ಕೆ 60 ವರ್ಷ ಸುಖವಾಗಿ‌, ರೋಗಗಳಿಲ್ಲದೇ ಜೀವಿಸುವುದು ಬಹಳ ಕಷ್ಟ. ಅದಕ್ಕೆ ತಪಸ್ಸನ್ನೇ ಮಾಡಬೇಕು. ನಾನು ನಿನ್ನ ವಯಸ್ಸಿನಲ್ಲಿ ದೊಡ್ಡ ಕಲ್ಲನ್ನು ಕೂಡ ಹೊರುವಷ್ಟು ದಷ್ಟಪುಷ್ಟನಿದ್ದೆ ಎಂಬ ಹಲವಾರು ಉದಾಹರಣೆಗಳನ್ನು ನಮ್ಮ ಅಜ್ಜಂದಿರ ಬಾಯಲ್ಲಿ ಬಹಳ ಬಾರಿ ನಾವೆಲ್ಲರೂ ಕೇಳಿರುತ್ತೇವೆ. ಹಾಗಾದರೆ ಕಾಲ ಮುಂದುವರೆದಂತೆ ಪೀಳಿಗೆಯಲ್ಲಿ ಬದಲಾವಣೆಗಳಾಗಿದ್ದು ನಿಜವೇ? ಎಂದು ಪ್ರಶ್ನಿಸಿಕೊಂಡರೆ ಹೌದು ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ. ಹಾಗಾದರೆ ಅವರು ಹೇಗೆ ಅಷ್ಟು ದಷ್ಟಪುಷ್ಟವಾಗಿ ಆರೋಗ್ಯವಾಗಿದ್ದರು, ನಾವೇಕೆ 35-40 ರ ವಯಸ್ಸಿಗೇ ಸಕ್ಕರೆ ಖಾಯಿಲೆಯಂತಹ ರೋಗಗಳಿಂದ ಬಳಲುತ್ತೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು.

ಆಗಿನ ಕಾಲಕ್ಕೆ ವಿಜ್ಞಾನವು ಇಷ್ಟು ಮುಂದುವರೆದಿರಲಿಲ್ಲ. ಮನೆಯಲ್ಲಿ ಬಟ್ಟೆ ತೊಳೆಯಲು, ಅಕ್ಕಿ ರುಬ್ಬಲು, ಬಾವಿಯಿಂದ ನೀರು ತೆಗೆಯಲು ಯಾವುದಕ್ಕೂ ಸಹ ಯಂತ್ರಗಳಿರಲಿಲ್ಲ. ಸರಿಯಾಗಿ ಸಾರ್ವಜನಿಕ ವಾಹನಗಳು ಕೂಡ ಇರಲಿಲ್ಲ. ಎಲ್ಲಕಡೆ ನಡೆದೇ ಪ್ರಯಾಣಿಸುತ್ತಿದ್ದರು. ದುಡ್ಡಿದ್ದವರು ಸೈಕಲ್ ಬಳಸುತ್ತಿದ್ದರು. ಇದರಿಂದ ಅರ್ಥವಾಗುವುದೇನೆಂದರೆ, ಆಗಿನ ಆಹಾರ ಪದ್ಧತಿಯು ಒಳ್ಳೆಯದಿತ್ತು ಹಾಗೂ ಆಹಾರದಲ್ಲಿ ಕಲಬೆರಕೆಯಿರಲಿಲ್ಲ. ಪ್ರತಿಯೊಂದು ಕೆಲಸವನ್ನೂ ದೇಹ ಪರಿಶ್ರಮದಿಂದಲೇ ಪೂರೈಸುತ್ತಿದ್ದರು. ಪ್ರತಿದಿನ ಹಲವಾರು ಕಿ.ಮೀ ನಡೆಯುವುದು, ಸೈಕಲ್ ತುಳಿಯುವುದು, ಬಾವಿಯಿಂದ ನೀರು ಎತ್ತುವುದು, ಬಟ್ಟೆ ತೊಳೆಯುವುದು ಹೀಗೆ ಎಲ್ಲವನ್ನೂ ಮಾಡುವುದರಿಂದ ಆಗಿನ ಕಾಲದವರು ಸದಾ ಕ್ರಿಯಾಶೀಲರಾಗಿದ್ದರು, ಆಲಸ್ಯವಿರಲಿಲ್ಲ. ಹಾಗಾಗಿ ರೋಗಗಳು ಅವರಿಂದ ದೂರವಿದ್ದವು.

ಕಾಲ ಬದಲಾದಂತೆ, ವಿಜ್ಞಾನವು ಮುಂದುವರೆದಂತೆ, ಪ್ರತಿಯೊಂದು ಕೆಲಸಕ್ಕೂ ಯಂತ್ರಗಳ ಉಪಯೋಗ ಮಾಡಲಾರಂಭಿಸಿದೆವು. ಆಹಾರವು ಬಹುದೊಡ್ಡ ಉದ್ಯಮವಾಗಿ, ನಮಗೆ ತಿಳಿಯದೇ ರೋಗಗಳಿಗೆ ಎಡೆಯಾದವು. ದೇಹಶ್ರಮ ಕಡಿಮೆ, ಯೋಗ-ವ್ಯಾಯಾಮಾದಿಗಳೂ ಕೂಡ ಇಲ್ಲ, ಆಹಾರವೂ ಒಳ್ಳೆಯದಿದ್ದಾಗ ಮತ್ತೇನಾಗುವುದು? ನಮ್ಮಲ್ಲಿನ ಶಕ್ತಿ ಕ್ಷೀಣಿಸುವುದು. ಇದು ಸಾಲದು ಎಂಬಂತೆ ಆಧುನಿಕ ಶಿಕ್ಷಣಪದ್ಧತಿ, ಅದರಿಂದ ದೊರೆತ ಉದ್ಯೋಗ ಎಲ್ಲವೂ ಮಾನಸಿಕ ಒತ್ತಡ, ಕೋಪ ಇತ್ಯಾದಿ ಮನಸ್ಸಿನ ರೋಗಗಳಿಗೆ ಕಾರಣವಾಗುವುದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಸಾಮಾನ್ಯವಾಗಲಾರಂಭಿಸಿದವು.

ನಮಗೇ ತಿಳಿಯದೆ ನಾವು ಮಾನಸಿಕ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತೇವೆ. ಎಲ್ಲಿಯದೋ ಕೋಪವನ್ನು, ಇನ್ಯಾರ ಮೇಲೋ ತೋರಿಸುವುದು, ಸಮಸ್ಯೆ-ದು:ಖಗಳನ್ನು ಕುಟುಂಬದ ಜೊತೆಗೋ, ಮಿತ್ರರ ಜೊತೆಗೋ ಹೇಳಿಕೊಳ್ಳುವುದರ ಬದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು. ಹೀಗೆ ಹಲವಾರು ಸಮಸ್ಯೆಗಳು ಈಗಿನ ಪೀಳಿಗೆಯಲ್ಲಿ ಸರ್ವೇಸಾಮಾನ್ಯ. ಇವುಗಳಿಂದ ದೂರವಿರಲು ಯೋಗಾಸನ, ಪ್ರಾಣಾಯಾಮ, ಧ್ಯಾನ ಇವುಗಳ ಅವಶ್ಯಕತೆಯಿದೆ. ಒಳ್ಳೆಯ ಆಹಾರ ಸೇವನೆ, ಪ್ರತಿನಿತ್ಯ ಯೋಗಾಭ್ಯಾಸ, ಒಂದಷ್ಟು‌ ನಡೆಯುವುದು ಇವುಗಳೆಲ್ಲ ಮುಂದೆ ನಾವು ರೋಗಗಳಿಂದ ದೂರವಿರಲು, ರೋಗಗಳನ್ನು ಜಯಿಸಲು ಸಹಕಾರಿಯಾಗುವವು.

ಇದನ್ನೂ ಓದಿ: 

Yoga Malike: ಬದುಕಿಗಾಗಿ ಯೋಗ; ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯದ ರೂಢಿ ಕಲಿಸಿ

Yoga: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?

(Yoga malike series If I Did not practice yoga is any problem for my health)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್