ವೀಕೆಂಡ್​ ಟ್ರಿಪ್​ಗೆ ಯೋಚಿಸುತ್ತಿದ್ದೀರಾ? ; ಬೆಂಗಳೂರು ಸಮೀಪವೇ ಇರುವ 10 ಅತ್ಯುತ್ತಮ ಸ್ಥಳಗಳ ವಿವರ ಇಲ್ಲಿದೆ

Trip: ವೀಕೆಂಡ್​ನಲ್ಲಿ ಸುತ್ತಾಡಬೇಕೆಂದು ಯೋಚಿಸುತ್ತಿದ್ದೀರಾ? ಬೆಂಗಳೂರಿನ ಸುತ್ತಮುತ್ತಲಿರುವ, ವಿವಿಧ ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಹೊಂದಿರುವ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನೀವಿನ್ನೂ ಈ ಸ್ಥಳಗಳಿಗೆ ಭೇಟಿ ನೀಡಿಲ್ಲವಾದರೆ, ಖಂಡಿತಾ ಭೇಟಿ ನೀಡಿ.

ವೀಕೆಂಡ್​ ಟ್ರಿಪ್​ಗೆ ಯೋಚಿಸುತ್ತಿದ್ದೀರಾ? ; ಬೆಂಗಳೂರು ಸಮೀಪವೇ ಇರುವ 10 ಅತ್ಯುತ್ತಮ ಸ್ಥಳಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: Sep 18, 2021 | 5:09 PM

ವೀಕೆಂಡ್ ಬಂತೆಂದರೆ ನಗರವಾಸಿಗಳಿಗೆ ಒಂದು ಸಂಭ್ರಮ. ಟ್ರಾಫಿಕ್, ಕೆಲಸ ಮೊದಲಾದ ತಲೆಬಿಸಿಗಳಿಂದ ಒಂದೆರಡು ದಿನ ಪ್ರಕೃತಿಯ ನಡುವೆ ಕಳೆದು ಮನಸ್ಸನ್ನು ಹಗುರ ಮಾಡಿಕೊಳ್ಳಲು ಸುಸಂದರ್ಭ ಇದು. ಆದರೆ ಬೆಂಗಳೂರಿನಲ್ಲಿರುವಾಗ ಒಂದು ದಿನ ಅಥವಾ ಎರಡು ದಿನದ ಮಟ್ಟಿಗೆ ಎಲ್ಲಿ ತಿರುಗಾಡಿ ಬರಬಹುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಯಾವ ಸ್ಥಳಗಳಿಗೆ ತೆರಳಬಹುದು ಎಂಬ ಗೊಂದಲವಿದೆಯೇ? ಇಲ್ಲಿದೆ ಮಾಹಿತಿ. ಈ ಸ್ಥಳಗಳನ್ನೊಮ್ಮೆ ನೋಡಿ, ನೀವಿನ್ನೂ ಭೇಟಿ ನೀಡಿಲ್ಲವಾದರೆ ಮಿಸ್ ಮಾಡಲೇಬೇಡಿ.

1. ಶಿವನಸಮುದ್ರ: ಬೆಂಗಳೂರಿನಿಂದ ಒಂದು ದಿನದ ಸಣ್ಣ ಪ್ರವಾಸಕ್ಕೆ‌ ಇದು ಹೇಳಿ‌ ಮಾಡಿಸಿದ ಸ್ಥಳ. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಾಗುತ್ತಾ, ಸುತ್ತಮುತ್ತಲಿನ ಪ್ರಕೃತಿ, ಹೊಲಗದ್ದೆಗಳ ಸೌಂದರ್ಯ ಸವಿಯುತ್ತಾ, ಶಿವನಸಮುದ್ರ ತಲುಪಬಹುದು. ಈ ಜಲಪಾತವು ಅದ್ಭುತವಾಗಿದ್ದು, ಸುತ್ತಮುತ್ತ ಸುತ್ತಾಡಲು, ಕುಟುಂಬದವರೊಂದಿಗೆ ಕುಳಿತು ಹರಟಲು ಒಳ್ಳೆಯ ಸ್ಥಳಾವಕಾಶವಿದೆ. ಇದು ಬೆಂಗಳೂರಿನಿಂದ 135 ಕಿಲೋ ಮೀಟರ್ ದೂರವಿದ್ದು, ಪ್ರಯಾಣಕ್ಕೆ ಸುಮಾರು 3 ತಾಸು ಹಿಡಿಯಬಹುದು. ಈ ಸ್ಥಳ ಟ್ರೆಕ್ಕಿಂಗ್, ಫೊಟೊಗ್ರಫಿ, ವಿಹಾರಕ್ಕೆ ಹೇಳಿಮಾಡಿಸಿದಂತಿದೆ.

ShivanaSamudra

ಶಿವನಸಮುದ್ರ

2. ರಾಮನಗರ: ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಈ ಜಾಗ ಕಂಡಿತಾ ಹೊಸದಲ್ಲ. ಕಾರಣ, ಅವರು ಶೋಲೆ ಚಿತ್ರದಲ್ಲಿ ಈ ಜಾಗದ ಸೌಂದರ್ಯ ಕಂಡು ಖಂಡಿತವಾಗಿ ಮಾರುಹೋಗಿರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 50ಕಿಮೀ ದೂರದಲ್ಲಿದ್ದು, 1 ಗಂಟೆ 40 ನಿಮಿಷದೊಳಗೆ ಸ್ಥಳವನ್ನು ತಲುಪಬಹುದು. ವೀಕೆಂಡ್ ನಲ್ಲಿ ಸಾಹಸಮಯ ಕ್ರೀಡೆಗಳನ್ನು ಆಡಿ ಸಮಯ ಕಳೆಯಲು ಯೋಚಿಸುವವರು ರಾಮನಗರದ ಸ್ಥಳಗಳಿಗೆ ಭೇಟಿ ನೀಡಬಹುದು. ರ್ಯಾಪ್ಲಿಂಗ್, ಟ್ರೆಕ್ಕಿಂಗ್, ಗುಹೆಗಳ ಹುಡುಕಾಟಕ್ಕೆ ಒಳ್ಳೆಯ ಸ್ಥಳಗಳಿವೆ.

3. ಮೈಸೂರು: ಬೆಂಗಳೂರಿನಿಂದ ಅರಮನೆಗಳ‌ ನಗರಿ ಮೈಸೂರು 150ಕಿಮೀ ದೂರವಿದೆ. ಅರಮನೆಗಳು, ಉದ್ಯಾನವನಗಳು, ಕೆರೆಗಳು, ಗ್ಯಾಲರಿಗಳು, ದೇವಸ್ಥಾನಗಳು.. ಏನುಂಟು ಏನಿಲ್ಲ… ಮೈಸೂರಿನಲ್ಲಿ ಎಲ್ಲವೂ ಇದೆ. ಆದ್ದರಿಂದಲೇ ಬೆಂಗಳೂರಿಗರು ವೀಕೆಂಡ್ ನಲ್ಲಿ ಮೈಸೂರಿನೆಡೆಗೆ ಮುಖಮಾಡುತ್ತಾರೆ. ಹಾ, ನೀವು‌ ಬೆಂಗಳೂರಿಗೆ ಹೊಸಬರು. ಮೈಸೂರಿಗೂ ಹೊಸಬರು ಎಂದಾದರೆ ಚಾಮುಂಡಿ ಬೆಟ್ಟವನ್ನು‌ ಮಿಸ್ ಮಾಡಲೇಬೇಡಿ.

Mysuru Palace

ಮೈಸೂರು ಅರಮನೆಯ ಒಂದು ಪಾರ್ಶ್ವ

4. ನಂದಿ ಹಿಲ್ಸ್: ಮೈಸೂರಿನ ಜನರಿಗೆ ಚಾಮುಂಡಿ‌ ಬೆಟ್ಟ ಇದ್ದ ಹಾಗೆ ಬೆಂಗಳೂರಿನ ಜನರಿಗೆ ಬಹಳ ನೆಚ್ಚಿನ ತಾಣ ನಂದಿ ಬೆಟ್ಟ. ನಗರದಿಂದ ಸುಮಾರು 62 ಕಿಮೀ‌ದೂರವಿರುವ ಈ‌ಜಾಗದಲ್ಲಿ ಸೂರ್ಯೋದಯವನ್ನು ವೀಕ್ಷಿಸುವುದು ಜೀವನದ ಅದ್ಭುತ ಕ್ಷಣಗಳಲ್ಲೊಂದು. ಹಾಗೆಯೇ ಟ್ರೆಕ್ಕಿಂಗ್, ಸೈಕ್ಲಿಂಗ್ ಪ್ರಿಯರಿಗೆ ಈ ಜಾಗ ಇಷ್ಟವಾಗೋದ ಖಂಡಿತಾ.

5. ಹೊಗೇನಕಲ್: ಪ್ರಕೃತಿಯ ಅದ್ಭುತ ಸೌಂದರ್ಯಕ್ಕೆ ಸಾಕ್ಷಿಯಾಗುವ ಅವಕಾಶ ಹೊಗೇನಕಲ್‌ನಲ್ಲಿದೆ. ತೆಪ್ಪದಲ್ಲಿ ಕುಳಿತು ಕಾವೇರಿ‌ನದಿಯಲ್ಲಿ ವಿಹಾರ ಮಾಡುತ್ತಾ, ನದಿಯ ಓಟದೊಂದಿಗೆ ನೀವೂ ಜೊತೆಯಾಗಿ, ನಗರದ ತಲ್ಲಣಗಳನ್ನು‌‌ ಮರೆಯಬಹುದು. ಬೆಂಗಳೂರಿನಿಂದ 180ಕಿಮೀ ದೂರದಲ್ಲಿ ಹೊಗೇನಕಲ್ ಇದೆ.

Hogenakal

ಹೊಗೇನಕಲ್

6. ಶಿವಗಂಗೆ: ಟ್ರೆಕ್ಕಿಂಗ್ ಮಾಡಲು, ಪ್ರಕೃತಿಯ ಸೌಂದರ್ಯ ಸವಿಯಲು ಮತ್ತೊಂದು ಸ್ಥಳ ಶಿವಗಂಗೆ. ಶಿವನ‌ ಲಿಂಗದಂತಿರುವ ಕಲ್ಲಿನಿಂದ ಈ ಬೆಟ್ಟಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಇದು ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿದ್ದು, ಒಂದೂವರೆ ಗಂಟೆಯಲ್ಲಿ ಸ್ಥಳ ತಲುಪಬಹುದು.

7. ಕಬಿನಿ: ಕಬಿನಿ ಬೆಂಗಳೂರಿನಿಂದ ಸುಮಾರು 216 ಕಿಮೀ ದೂರದಲ್ಲಿದೆ. ಆದರೂ ಒಂದು‌ ದಿನ‌ದ ಮಟ್ಟಿಗೂ ಹೋಗಿ ಬರಲು ಸಾಧ್ಯವಿದೆ. ಅಲ್ಲಿಯೇ ವಾಸ್ತವ್ಯ ಹೂಡಿ ರಜೆಯನ್ನು ಆರಾಮವಾಗಿ ಕಳೆಯಲೂ ಬಹಳಷ್ಟು ಅವಕಾಶಗಳಿವೆ. ನಾಗರಹೊಳೆ ಅರಣ್ಯದಲ್ಲಿ ಸಫಾರಿ, ಆನೆ ಸಫಾರಿ, ಬೋಟಿಂಗ್, ಕಯಾಕಿಂಗ್ ಮೊದಲಾದವುಗಳನ್ನು ಮಾಡುತ್ತಾ ಪ್ರಕೃತಿಯ ನಡುವೆ ಹಾಯಾಗಿರಬಹುದು. ಹಾಗೆಯೇ ಸಮೀಪದಲ್ಲಿ ಕಬಿನಿ ಅಣೆಕಟ್ಟೂ ಇದೆ. ಅದರ ಸೌಂದರ್ಯವನ್ನೂ ಸವಿಯಬಹುದು.

Kabini

ಕಬಿನಿ

8. ತಲಕಾಡು: ಬೆಂಗಳೂರಿನಿಂದ ತಲಕಾಡು ಸುಮಾರು 132 ಕಿಲೋಮೀಟರ್ ದೂರದಲ್ಲಿದೆ. ದೇವಾಲಯಗಳು, ಕಾವೇರಿ ನದಿ, ಮರಳಿನ ದಡದಲ್ಲಿ ಆಟ.. ಈ ಎಲ್ಲವುಗಳೂ ಸಾಧ್ಯವಾಗುವ ತಲಕಾಡು, ಕುಟುಂಬದವರೊಂದಿಗೆ ಸಮಯ ಕಳೆಯಲು ಉತ್ತಮ ಸ್ಥಳ. ವಾಸ್ತುಶಿಲ್ಪ ಪ್ರಿಯರಿಗೆ ಇಲ್ಲಿ ವೀಕ್ಷಿಸಲು ವೈದ್ಯನಾಥೇಶ್ವರ ದೇವಾಲಯ, ಮರುಳೇಶ್ವರ ದೇವಾಲಯ, ಪಾತಾಳೇಶ್ವರ ದೇವಾಲಯ, ಮುಡುತೊರೆ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿವೆ.

9. ಚನ್ನಪಟ್ಟಣ: ಕಲೆಯ ಕುರಿತು ಆಸಕ್ತಿ‌ ಉಳ್ಳವರು ಚನ್ನಪಟ್ಟಣದ ಹೆಸರನ್ನು ಕೇಳಿಯೇ ಇರುತ್ತಾರೆ. ಇದೂ ಕೂಡ ಬೆಂಗಳೂರಿನಿಂದ ಸುಮಾರು ಅರವತ್ತೇಳು ಕಿಲೋಮೀಟರ್ ದೂರದಲ್ಲಿದೆ. ಚನ್ನಪಟ್ಟಣದ ಬೊಂಬೆಗಳು ಬಹಳ ಹೆಸರುವಾಸಿ. ಅವುಗಳ ಸಂಗ್ರಹ, ಮಾಡುವ ವಿಧಾನಗಳ ಜೊತೆಗೆ ದೇವಸ್ಥಾನಗಳೂ ಇಲ್ಲಿ ಬಹಳಷ್ಟಿವೆ.

Channapattna Toys

ಚನ್ನಪಟ್ಟಣದ ಬೊಂಬೆಗಳು

10. ಬನ್ನೇರುಘಟ್ಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಬನ್ನೇರುಘಟ್ಟ ಬೆಂಗಳೂರು ನಗರಕ್ಕೆ ಹತ್ತಿರದಲ್ಲಿದೆ. ಬೋಟಿಂಗ್, ಸಫಾರಿ‌ ಮೊದಲಾದ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದ್ದು, ಮಕ್ಕಳು ಸಖತ್ ಎಂಜಾಯ್ ಮಾಡಲು ಉತ್ತಮ ಸ್ಥಳವಾಗಿದೆ. ಬೆಂಗಳೂರಿನಿಂದ ಸುಮಾರು 21ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ವನ್ಯಜೀವಿ ಪ್ರಿಯರಿಗೆ, ಫೋಟೋಗ್ರಫಿ ಪ್ರಿಯರಿಗೆ ಕಾಲ ಕಳೆಯಲು ಉತ್ತಮವಾಗಿದೆ.

(Best 10 places to spend weekend with family and friends around Bengaluru with details)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ