
ಕಣ್ಣು ಇಲ್ಲದ ಮನುಷ್ಯನ ಜೀವನ ತುಂಬಾ ಕಷ್ಟ. ದೃಷ್ಟಿ ವಿಶೇಷ ಚೇತನ ಜನರಿಗೆ ದಿನನಿತ್ಯದ ಚಟುವಟಿಕೆಗೆಳನ್ನು ಮಾಡುವುದರ ಜೊತೆಗೆ ಓದಲು ಬರೆಯಲು ಸಹ ಕಷ್ಟಕರವಾಗುತ್ತದೆ. ಇಂತಹ ಜನರಿಗೆ ಓದಲು, ಬರೆಯಲು ಸಹಾಯವಾಗಲೆಂದು ಲೂಯಿಸ್ ಬ್ರೈಲ್ ಎಂಬವರು ಬ್ರೈಲ್ (Braille)ಲಿಪಿಯನ್ನು ಕಂಡು ಹಿಡಿದರು. ದೃಷ್ಟಿಹೀನ ಜನರಿಗಾಗ ಜಾಗತಿಕವಾಗಿ ಸಾರ್ವತ್ರಿಕ ಭಾಷೆಯನ್ನು ರೂಪಿಸಿದರು. ಇವರ ಈ ಕೊಡುಗೆಯಿಂದಾಗಿ ದೃಷ್ಟಿಹೀನ ಜನರು ಜಹ ಓದುತ್ತಿದ್ದಾರೆ, ತಮ್ಮ ಕಾಲಿನ ಮೇಲೆ ನಿಂತಿದ್ದಾರೆ. ಅಂಧರ ಪಾಲಿಗೆ ಬೆಳಕಾಗಿರುವ ಈ ಬ್ರೈಲ್ ಲಿಪಿಯನ್ನು ಪರಿಚಯಿಸಿದ ಲೂಯಿಸ್ ಬ್ರೈಲ್ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಜನವರಿ 4 ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ಆಚರಣೆಯಲ್ಲ, ಬದಲಾಗಿ ಸ್ವಾತಂತ್ರ್ಯ, ಶಿಕ್ಷಣ ಮತ್ತು ದೃಷ್ಟಿ ವಿಶೇಷ ಚೇತನರ ಗೌರವದ ಸಂಕೇತವಾಗಿದೆ.
2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 4 ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸುವುದಾಗಿ ಘೋಷಿಸಿತು. ನಂತರ 2019ರ ಜನವರಿ 4 ರಂದು ಮೊದಲ ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಯಿತು. ಅಂಧರು ಹಾಗೂ ಕಡಿಮೆ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನದ ಉದ್ದೇಶವಾಗಿತ್ತು.
ಸಾಮಾನ್ಯವಾಗಿ ಜನರು ಬ್ರೈಲ್ ಒಂದು ಭಾಷೆ ಎಂದು ಭಾವಿಸುತ್ತಾರೆ, ಆದರೆ ಬ್ರೈಲ್ ಒಂದು ಭಾಷೆಯಲ್ಲ, ಬದಲಿಗೆ ಒಂದು ಸಂಕೇತವಾಗಿದೆ.
ಇದನ್ನೂ ಓದಿ: ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ