World Gratitude Day 2024 : ಕೃತಜ್ಞತೆ ಸಲ್ಲಿಸುವುದರಿಂದ ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2024 | 10:32 AM

ಸಹಾಯ ಮಾಡಿದವರನ್ನು ನೆನಪಿನಲ್ಲಿಟ್ಟುಕೊಂಡರೆ ಮನುಷ್ಯ ದೊಡ್ಡವನಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಹೌದು, ಎಲ್ಲರ ಬದುಕಿನಲ್ಲಿ ಒಬ್ಬ ವ್ಯಕ್ತಿಯ ಪಾತ್ರವು ಅಗಾಧವಾಗಿರುತ್ತದೆ. ಹೀಗಾಗಿ ನಮ್ಮ ಸುತ್ತಮುತ್ತಲಿನ ಜನರಿಗೆ ಕೃತಜ್ಞರಾಗಿರಲು ವಿಶ್ವ ಕೃತಜ್ಞತಾ ದಿನವನ್ನು ಮೀಸಲಿಡಲಾಗಿದೆ. 1965ರಲ್ಲಿ ಹವಾಯಿಯಲ್ಲಿ ಮೊದಲ ಬಾರಿಗೆ ನಡೆದ ಪ್ರಥಮ ಸಭೆಯ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 21 ರಂದು 'ವಿಶ್ವ ಕೃತಜ್ಞತಾ ದಿನ'ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Gratitude Day 2024 : ಕೃತಜ್ಞತೆ ಸಲ್ಲಿಸುವುದರಿಂದ ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್
ಸಾಂದರ್ಭಿಕ ಚಿತ್ರ
Follow us on

ಕೃತಜ್ಞತಾ ಮನೋಭಾವ ಎಲ್ಲರಲ್ಲೂ ಇರಬೇಕು. ಆದರೆ ಕೆಲವರಿಗೆ ಈ ಭಾವನೆ ಇರುವುದೇ ಇಲ್ಲ. ಮಾಡಿದ ಸಹಾಯಕ್ಕೆ ಕೃತಜ್ಞತಾ ಭಾವವನ್ನು ತೋರುವುದಿಲ್ಲ. ಆದರೆ ಮೊದಲಿಗೆ ತಮಗೆ ತಾವೇ ಧನ್ಯವಾದ ತಿಳಿಸುವುದು ಮುಖ್ಯ. ಜೀವನದಲ್ಲಿ ನೀವು ಸಾಧನೆ ಮಾಡಿದರೆ ಆದರಿಂದ ನಿಜಕ್ಕೂ ಖುಷಿಯಾಗಿರುತ್ತೀರಿ. ಆ ವೇಳೆಯಲ್ಲಿ ನಿಮಗೆ ನೀವೇ ಕೃತಜ್ಷತೆ ಸಲ್ಲಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹೀಗಾಗಿ ನಿಮಗೆ ನೀವು ಹಾಗೂ ನಿಮ್ಮ ಸುತ್ತಮುತ್ತಲಿನವರಿಗೆ ಕೃತಜ್ಞತೆ ಸಲ್ಲಿಸಲೇಂದು ಸೆಪ್ಟೆಂಬರ್ 21 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಕೃತಜ್ಞತಾ ದಿನದ ಇತಿಹಾಸ ಹಾಗೂ ಮಹತ್ವ

ವಿಶ್ವ ಕೃತಜ್ಞತಾ ದಿನವನ್ನು 1965ರಲ್ಲಿ ಹವಾಯಿಯಲ್ಲಿ ಮೊದಲು ಆರಂಭಿಸಲಾಯಿತು. ವಿಶ್ವಸಂಸ್ಥೆಯ ಧ್ಯಾನ ಕೊಠಡಿಯಲ್ಲಿ ಪ್ರಪಂಚದಾದ್ಯಂತ ಬಂದ ಜನರು ಸಭೆ ಸೇರಿದ್ದ ವೇಳೆಯಲ್ಲಿ ಕೃತಜ್ಞತೆಗೆ ಅಂತಾರಾಷ್ಟ್ರೀಯ ದಿನವನ್ನು ನಿಗದಿ ಮಾಡುವ ಸಲಹೆಯನ್ನು ನೀಡಲಾಯಿತು. ತದನಂತರದಲ್ಲಿ 1966ರಲ್ಲಿ, ಮೊದಲ ವಿಶ್ವ ಕೃತಜ್ಞತಾ ದಿನವನ್ನು ಸೆಪ್ಟೆಂಬರ್ 21 ರಂದು ಕೃತಜ್ಞತಾ ದಿನವನ್ನು ಆಚರಿಸಲಾಯಿತು.

ಅಂದಿನಿಂದ ಪ್ರತಿ ವರ್ಷ ವಿಶ್ವ ಕೃತಜ್ಞತಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಮುದಾಯ, ಕೆಲಸದ ಸ್ಥಳ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೃತಜ್ಞತೆಯ ಸಂಸ್ಕೃತಿಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದಾಗಿದೆ.

ಕೃತಜ್ಞತೆ ಸಲ್ಲಿಸುವುದರಿಂದ ಆಗುವ ಪ್ರಯೋಜನಗಳು:

  • ಮಾನಸಿಕ ಆರೋಗ್ಯದಲ್ಲಿ ಬದಲಾವಣೆ : ಕೃತಜ್ಞತೆಯು ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ. ದುಃಖ ಮತ್ತು ಆತಂಕದ ಭಾವನೆಗಳನ್ನು ಕಡಿಮೆ ಮಾಡಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
  • ದೈಹಿಕ ಆರೋಗ್ಯ ಸುಧಾರಣೆ : ಕೃತಜ್ಞತೆಯು ನಿಮ್ಮ ನಿದ್ರೆಯನ್ನು ಸುಧಾರಿಸುವುದಲ್ಲದೆ ಹೃದಯವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.
  • ಸಾಮಾಜಿಕ ಸಂಬಂಧಗಳುಗಟ್ಟಿಗೊಳ್ಳುವುದು : ಕೃತಜ್ಞತೆಯು ಇತರರೊಂದಿಗೆ ಆಳವಾದ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ. ಹಾಗೂ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಸಂತೋಷವನ್ನು ಹೆಚ್ಚಿಸುತ್ತದೆ : ಕೃತಜ್ಞತೆಯು ಸಂತೋಷ ಮತ್ತು ಸಕಾರಾತ್ಮಕ ಭಾವನೆಗಳೊಂದಿಗೆ ಸಂಬಂಧಿಸಿದೆ. ಕಷ್ಟದ ಸಮಯದಲ್ಲೂ ಜನರು ಹೆಚ್ಚು ತೃಪ್ತಿ ಮತ್ತು ಸಂತೋಷವನ್ನು ಅನುಭವಿಸಲು ಈ ಪದವು ಸಹಾಯ ಮಾಡುತ್ತದೆ.
  • ನಕಾರಾತ್ಮಕ ಭಾವನೆ ದೂರವಾಗಿಸಲು ಸಹಕಾರಿ : ಕೃತಜ್ಞತೆಯು ಹತಾಶೆ, ಅಸೂಯೆ, ಕೋಪದಂತಹ ನಕಾರಾತ್ಮಕ ಭಾವನೆಯನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ