ಬರಹಗಾರ, ಕವಿ, ವಿಜ್ಞಾನಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವವರು ತಮ್ಮ ಜ್ಞಾನದಿಂದಲೇ ಸ್ವಂತವಾಗಿ ಪುಸ್ತಕ, ಕಥೆ, ಸಂಗೀತ ಹಾಗೂ ಸಾಹಿತ್ಯವನ್ನು ಬರೆದರೆ ಅದು ಅವರ ಬೌದ್ಧಿಕ ಆಸ್ತಿಯಾಗಿರುತ್ತದೆ. ಇದಕ್ಕೆ ಮೂಲ ವ್ಯಕ್ತಿಯೇ ವಾರಸುದಾರನಾಗಿರುವ ಕಾರಣ ಈ ವ್ಯಕ್ತಿಯ ಅನುಮತಿಯಿಲ್ಲದೇ ಈ ವಿಚಾರಗಳನ್ನು ಬಳಕೆಮಾಡುವಂತಿಲ್ಲ. ಈ ಬೌದ್ಧಿಕ ಆಸ್ತಿಯ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಜಗತ್ತಿನಾದ್ಯಂತದ ಎಪ್ರಿಲ್ 26ರಂದು ವಿಶ್ವ ಬೌದ್ಧಿಕ ಆಸ್ತಿ ದಿನವೆಂದು ಪರಿಗಣಿಸಲಾಗುತ್ತದೆ.
ವಿಶ್ವ ಬೌದ್ಧಿಕ ಆಸ್ತಿ ದಿನದ ಇತಿಹಾಸವನ್ನು ನೋಡುವುದಾದರೆ, ಅಕ್ಟೋಬರ್ 3, 1999ರಲ್ಲಿ, ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯು ಸಾಮಾನ್ಯ ಸಭೆಯಲ್ಲಿ ಒಂದು ನಿರ್ದಿಷ್ಟ ದಿನವನ್ನು ವಿಶ್ವ ಬೌದ್ಧಿಕ ಆಸ್ತಿ ದಿನವೆಂದು ಘೋಷಿಸುವ ಬಗ್ಗೆ ಚರ್ಚೆಯನ್ನು ನಡೆಸಿತು. ಕೊನೆಗೆ ಈ ಸಭೆಯಲ್ಲಿನ ಚರ್ಚಿಸಿದ ಬಳಿಕ 2001ರ ಎಪ್ರಿಲ್ 26ರಂದು ವಿಶ್ವ ಬೌದ್ಧಿಕ ಆಸ್ತಿಯ ಹಕ್ಕಿನ ದಿನವನ್ನು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುವುದರ ಮೂಲ ಉದ್ದೇಶವೇ ಬೌದ್ಧಿಕ ಆಸ್ತಿಯ ಮಹತ್ವ, ಸಂರಕ್ಷಣೆ, ಅದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡುವುದಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಗಳ ನಡುವೆ ಬೌದ್ಧಿಕ ಆಸ್ತಿಗಳ ವಿನಿಮಯಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಅದಲ್ಲದೇ, ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳನ್ನು ಈ ದಿನದಂದು ಸ್ಮರಿಸುವಸುವ ಕೆಲಸವಾಗುತ್ತದೆ. ಈ ದಿನದಂದು ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ