ವಿಜ್ಞಾನಿಗಳಿಗೂ ಸವಾಲಾದ ಅಚ್ಚರಿ, ಇಡೀ ಕುಟುಂಬವೇ 4 ಕಾಲಲ್ಲಿ ನಡೆಯುತ್ತೆ!

2 ಕೈಗಳು ಮತ್ತು 2 ಕಾಲುಗಳಿಂದ ನಡೆಯುವ ಟರ್ಕಿಯ ಉಲಾಸ್ ಕುಟುಂಬದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ. "ದಿ ಫ್ಯಾಮಿಲಿ ದಟ್ ವಾಕ್ಸ್ ಆನ್ ಆಲ್ ಫೋರ್ಸ್" ಎಂಬ ಈ ಸಾಕ್ಷ್ಯಚಿತ್ರದಲ್ಲಿ ಆ ಇಡೀ ಕುಟುಂಬದ ಕತೆ ಹಾಗೂ ಅವರ ಜೀವನವನ್ನು ದಾಖಲಿಸಲಾಗಿದೆ. ಇದು ವೈಜ್ಞಾನಿಕ ಪ್ರಪಂಚವನ್ನೇ ದಿಗ್ಭ್ರಮೆಗೊಳಿಸಿದೆ.

ವಿಜ್ಞಾನಿಗಳಿಗೂ ಸವಾಲಾದ ಅಚ್ಚರಿ, ಇಡೀ ಕುಟುಂಬವೇ 4 ಕಾಲಲ್ಲಿ ನಡೆಯುತ್ತೆ!
2 ಕೈಗಳು ಮತ್ತು 2 ಕಾಳುಗಳಿಂದ ನಡೆಯುತ್ತಿರುವ ಉಲಾಸ್ ಕುಟುಂಬ
Follow us
ಸುಷ್ಮಾ ಚಕ್ರೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 01, 2024 | 11:14 AM

ಮಂಗನಿಂದ ಮಾನವ ಎಂಬುದು ಗೊತ್ತೇ ಇರುವ ಸಂಗತಿ. ಶತಮಾನಗಳು ಕಳೆದಂತೆ ದೇಹ ವಿನ್ಯಾಸ ಬದಲಾಗಿ ಮನುಷ್ಯನ ದೇಹ ರಚನೆಯಾಯಿತು. ಆದರೆ, ಟರ್ಕಿಯಲ್ಲೊಂದು ಕುಟುಂಬ ಇಂದಿಗೂ ಕೋತಿಗಳಂತೆ 2 ಕೈಗಳು ಮತ್ತು 2 ಕಾಲುಗಳನ್ನು ಬಳಸಿ ನಡೆಯುತ್ತಿದೆ. ಇದು ಒಬ್ಬಿಬ್ಬರ ಕತೆಯಲ್ಲ; ಆ ಇಡೀ ಕುಟುಂಬದಲ್ಲಿ ಎಲ್ಲರೂ ಬೆನ್ನು ಬಗ್ಗಿಸಿ, ಕೈಗಳನ್ನು ನೆಲಕ್ಕೆ ಊರಿಕೊಂಡೇ ನಡೆಯುತ್ತಾರೆ. ಈ ವಿಚಿತ್ರ ಜಗತ್ತಿನ ವಿಜ್ಞಾನಿಗಳಿಗೂ ದೊಡ್ಡ ಸವಾಲಾಗಿದೆ.

2 ಕೈಗಳು ಮತ್ತು 2 ಕಾಲುಗಳಿಂದ ನಡೆಯುವ ಟರ್ಕಿಯ ಉಲಾಸ್ ಕುಟುಂಬದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ. “ದಿ ಫ್ಯಾಮಿಲಿ ದಟ್ ವಾಕ್ಸ್ ಆನ್ ಆಲ್ ಫೋರ್ಸ್” ಎಂಬ ಈ ಸಾಕ್ಷ್ಯಚಿತ್ರದಲ್ಲಿ ಆ ಇಡೀ ಕುಟುಂಬದ ಕತೆ ಹಾಗೂ ಅವರ ಜೀವನವನ್ನು ದಾಖಲಿಸಲಾಗಿದೆ. ಇದು ವೈಜ್ಞಾನಿಕ ಪ್ರಪಂಚವನ್ನೇ ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ: Chitradurga News: 13 ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ; ಜಿಲ್ಲಾಸ್ಪತ್ರೆಗೆ ದಾಖಲು

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿಕಸನೀಯ ಮನಶ್ಶಾಸ್ತ್ರಜ್ಞ ಪ್ರೊಫೆಸರ್ ನಿಕೋಲಸ್ ಹಂಫ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು 2 ಕಾಲುಗಳ ಮೇಲೆ ನಡೆಯುವ ಮತ್ತು ನಿಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಆದರೆ, ಈ ಉಲಾಸ್ ಕುಟುಂಬ ಇನ್ನೂ ಪ್ರಾಣಿಗಳಂತೆ ಕೈ-ಕಾಲುಗಳನ್ನು ಬಳಸಿ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಆ ಕುಟುಂಬದ 18 ಮಕ್ಕಳಲ್ಲಿ 6 ಮಕ್ಕಳಿಗೆ ಹುಟ್ಟುವಾಗಲೇ ಒಂದೇ ರೀತಿಯ ನ್ಯೂನತೆ ಕಾಣಿಸಿಕೊಂಡಿದೆ. ಅವರ್ಯಾರಿಗೂ ನೇರವಾಗಿ ನಿಲ್ಲಲು ಸಾಧ್ಯವೇ ಆಗುವುದಿಲ್ಲ. ಅವರು ಕೈ ಕಾಲುಗಳನ್ನು ಬಳಸಿ ನೆಲದ ಮೇಲೆ ಬಗ್ಗಿಕೊಂಡೇ ನಡೆಯುತ್ತಾರೆ ಎಂದು ತಿಳಿಸಿದ್ದಾರೆ.

ಮಾನವ ವಿಕಸನಕ್ಕೆ ಈ ಪ್ರಕರಣ ದೊಡ್ಡ ಸವಾಲಾಗಿದೆ. ಮನುಕುಲದ ವಿಕಸನವನ್ನೇ ಈ ಘಟನೆ ಹಿಮ್ಮುಖವಾಗಿಸಿದೆ. ಈ ರೀತಿ 2 ಕೈಗಳು ಮತ್ತು 2 ಕಾಲುಗಳ ಮೇಲೆ ನಡೆಯುವ ವ್ಯಕ್ತಿಗಳು ಸಣ್ಣ ಸೆರೆಬೆಲ್ಲಮ್ ಅನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ಈ ಸೆರೆಬೆಲ್ಲಮ್ ಗಾತ್ರವನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ಇದೇ ರೀತಿ ಬಾಗಿಕೊಂಡು ನಡೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಇಂಡಿಗೋ ಗಗನಸಖಿಯರಿಂದ ಇಸ್ರೋ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ; ಎಲ್ಲೆಡೆ ವೈರಲ್ ಆದ ಹೃದಯಸ್ಪರ್ಶಿ ವಿಡಿಯೋ!

ಹಾಗೇ, ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನವು 4 ಕಾಲುಗಳ ಮೇಲೆ ನಡೆಯುವವರು ಸಾಮಾನ್ಯ ಮಾನವರಿಗಿಂತ ಕೋತಿಗಳಿಗೆ ಹೆಚ್ಚು ಹೋಲುವ ಅಸ್ಥಿಪಂಜರದ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ