ಬೆಂಗಳೂರಿನಲ್ಲಿ ಕಾರು ಫಾಲೋ ಮಾಡಿ ಮಹಿಳೆಯರಿಗೆ ಕಿರುಕುಳ; ಆಘಾತಕಾರಿ ವಿಡಿಯೋ ವೈರಲ್; ಮೂವರ ಬಂಧನ
ಭಾನುವಾರ ರಾತ್ರಿ ಕೋರಮಂಗಲ-ಮಡಿವಾಳ ಮಾರ್ಗದಲ್ಲಿ ಮೂವರು ಕಾರು ಫಾಲೋ ಮಾಡಿ ಅದರಲ್ಲಿದ್ದ ಮಹಿಳೆಯರಿಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ. ತನ್ನ ಕಾರು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಯುವಕರ ದೃಶ್ಯವನ್ನು ಮಹಿಳೆ ಮೊಬೈಲ್ ಮೂಲಕ ಸೆರೆಹಿಡಿದಿದ್ದು, ಅದೇ ವೇಳೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು, ಏ.1: ಭಾನುವಾರ ರಾತ್ರಿ ನಗರದ (Bengaluru) ಕೋರಮಂಗಲ-ಮಡಿವಾಳ ಮಾರ್ಗದಲ್ಲಿ ಮೂವರು ಕಾರು ಫಾಲೋ ಮಾಡಿ ಅದರಲ್ಲಿದ್ದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಆಘಾತಕಾರಿ ಪ್ರಕರಣದ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್ (Viral Video) ಆಗಿದೆ. ಸದ್ಯ, ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ತೇಜಸ್, ಜಗನ್ನಾಥ್ ಮತ್ತು ಕಣ್ಣನ್ ಎಂದು ಗುರುತಿಸಲಾಗಿದೆ.
ಮಾರ್ಚ್ 31 ರ ರಾತ್ರಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ, ಅವರು ತಮ್ಮ ಕಾರಿನ ಇಂಡಿಕೇಟರ್ ಆನ್ ಮಾಡಿದ್ದಾರೆ. ಆದರೆ ತಮ್ಮ ಕಾರನ್ನು ಸೂಚಕದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದರು. ಈ ವಿಚಾರವಾಗಿ 2-3 ಬೈಕ್‌ಗಳಲ್ಲಿ ಬಂದ 4-5 ಬೈಕ್ ಸವಾರರು ಮಹಿಳೆಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ.
ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ವಿಡಿಯೋ
A shocking incident has come to the forefront from the jurisdiction of the #Koramangala Police Station in #Bengaluru. A group of men on bikes chased two women in a car and harassed them.
Three of the accused have been identified as Tejas, Jagannath and Kannan. They have been… pic.twitter.com/htXkvGUFef
— Hate Detector 🔍 (@HateDetectors) April 1, 2024
ಅಲ್ಲದೆ, ಮಹಿಳೆಯರು ಕಾರು ಚಾಲನೆ ಮಾಡಿ ಅಲ್ಲಿಂದ ತೆರಳಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಯುವಕರು, ಕಾರನ್ನು ಫಾಲೋ ಮಾಡಿದ್ದಾರೆ. ಚಾಲನೆಯಲ್ಲಿರುವಾಗಲೇ ಕಾರಿನ ಬಾಗಿಲು ತೆರೆಯಲು ಯತ್ನಿಸಲಾಗಿದೆ. ಗಾಬರಿಗೊಂಡ ಮಹಿಳೆ ಕಿರುಚಿಕೊಂಡು ಕಾರನ್ನು ಇನ್ನಷ್ಟು ವೇಗವಾಗಿ ಚಲಾಯಿಸಿದ್ದಾರೆ. ಆರೋಪಿಗಳು ಕಾರನ್ನು ಸುತ್ತುವರಿದು ಬೆದರಿಸಿದ ಹಿನ್ನೆಲೆ ಕೂಡಲೇ ಮಹಿಳೆಯರು 112 ಗೆ ಕರೆ ಮಾಡಿ ದೂರು ನೀಡಿದ್ದು, ತಾವು ಹೋಗುತ್ತಿರುವ ರಸ್ತೆಯ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಆರೋಪಿಗಳಿದ್ದ ಬೈಕ್ನ ನಂಬರ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ಗೆ ನುಗ್ಗಿದ ಯುವಕ; ವಾರ್ಡನ್ನಿಂದ ಬಿತ್ತು ಗೂಸಾ
ಅದರಂತೆ, ಪೊಲೀಸರು ಸ್ಥಳಕ್ಕೆ ಆಗಮಿಸಿದ ಕೂಡಲೇ ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಮಡಿವಾಳ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏತನ್ಮಧ್ಯೆ, ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ಸಿಕೆ ಬಾಬಾ ಅವರು, ತುರ್ತು ಪರಿಸ್ಥಿತಿಯಲ್ಲಿ ಧೃತಿಗೆಡದೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ ಮಹಿಳೆಯರನ್ನು ಶ್ಲಾಘಿಸಿದರು. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ಅವರು, ಈ ಘಟನೆಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು. ಈ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ