Viral Video: ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್​​​ಗೆ ನುಗ್ಗಿದ ಯುವಕ; ವಾರ್ಡನ್​​​ನಿಂದ ಬಿತ್ತು ಗೂಸಾ 

ಇಲ್ಲೊಬ್ಬ ಯುವಕ ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದಾನೆ. ಬಳಿಕ ಹಾಸ್ಟೆಲ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರ ಮುಂದೆಯೇ ಆತನಿಗೆ ಅಧಿಕಾರಿಗಳ ಕೈಯಿಂದ ಸರಿಯಾಗಿ ಗೂಸಾ ಬಿದ್ದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Viral Video: ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್​​​ಗೆ ನುಗ್ಗಿದ ಯುವಕ; ವಾರ್ಡನ್​​​ನಿಂದ ಬಿತ್ತು ಗೂಸಾ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 1:54 PM

ಈ ಕೆಲವು ಪೋಲಿ ಹುಡುಗರು ಏನಾದರೊಂದು ತರ್ಲೆ ಕೆಲಸ ಮಾಡಿ ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತಿರುತ್ತಾರೆ. ಹೀಗೆ ಈ ಪೋಲಿ ಹುಡುಗರು ಹಾದಿ ಬೀದಿಯಲ್ಲಿ ಹೋಗುವವರಿಗೆ ತೊಂದರೆ ಕೊಡುವಂತಹ, ಮಧ್ಯರಾತ್ರಿ ಬಾಲಕಿಯರ ಹಾಸ್ಟೆಲ್​​ಗೆ ನುಗ್ಗಿದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದೊಂದು ಸುದ್ದಿ ವೈರಲ್ ಆಗಿದ್ದು, ಯುವಕನೊಬ್ಬ ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದಾನೆ. ಹೀಗೆ ಹಾಸ್ಟೆಲ್ ಗೆ ನಗ್ಗಿದ ಈತ ಸ್ವಲ್ಪ ಹೊತ್ತಿನಲ್ಲೇ ಹಾಸ್ಟೆಲ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದಂತಹ ಯುವಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಅಧಿಕಾರಿಗಳ ಕೈಯಿಂದ ಆತನಿಗೆ ಸರಿಯಾಗಿ ಗೂಸಾ ಬಿದ್ದಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆದಿದ್ದು ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಕುರಿತ  ವಿಡಿಯೋವನ್ನು @gharkalesh  ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹೆಣ್ಣಿನ ವೇಷ ಧರಿಸಿ ಹುಡುಗಿಯರ ಹಾಸ್ಟೆಲ್ ಗೆ ನುಸುಳಿದ ವ್ಯಕ್ತಿ ಹಾಸ್ಟೆಲ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಹೆಣ್ಣಿನ ವೇಷ ಧರಿಸಿ ಹುಡುಗಿಯರ  ಹಾಸ್ಟೆಲ್​​​ಗೆ ಎಂಟ್ರಿ ಕೊಟ್ಟ ಯುವಕನನ್ನು ರೆಡ್ ಹ್ಯಾಂಡ್ ಹಿಡಿದು, ಹಾಸ್ಟೆಲ್ ಅಧಿಕಾರಿಗಳು ವಿದ್ಯಾರ್ಥಿನಿಯರ ಮುಂದೆಯೇ ಆತನಿಗೆ ಸರಿಯಾಗಿ ಗೂಸಾ ಕೊಡುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಆ ಯುವಕ ಧರಿಸಿದ್ದ ಸೀರೆಯನ್ನು ಆತನ ಕೊರಳಿಗೆ ಸುತ್ತಿ, ಅಧಿಕಾರಿಗಳು ಆತನನ್ನು ಹೊರಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗೆಲುವಿನ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಾವ್ಯ ಮಾರನ್, ಇತಿಹಾಸ ಸೃಷ್ಟಿಸಿದ SRH

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು  ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ಕಾಲೇಜಿನಲ್ಲಿ ಹುಡುಗಿಯರು ಹುಡುಗರ ಹಾಸ್ಟೆಲ್ ಗೆ ಬಂದು ಕೂರುತ್ತಿದ್ದರು, ಅವರಿಗೇಕೆ ಯಾರು ಏನು ಕ್ರಮ ಕೈಗೊಳ್ಳಲಿಲ್ಲʼ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರನ್ನು ಜೈಲಿಗೆ ಅಟ್ಟಬೇಕುʼ ಎಂದು ಹೇಳಿದ್ದಾರೆ. ಇನ್ನೂ ಹಲವರು ಈತನ ನೀಚ ಕೆಲಸಕ್ಕೆ ಛೀಮಾರಿ ಹಾಕಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ