ಅಂಗಾಗ ದಾನವನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದ್ದು, ಬದುಕಿರುವಾಗಲೇ ಕೆಲವು ಅಂಗಗಳನ್ನು ದಾನ ವ್ಯಕ್ತಿಯ ಜೀವವನ್ನು ಉಳಿಸಬಹುದು. ಅದಲ್ಲದೇ ಮರಣದ ನಂತರದ ದೇಹದ ಕೆಲವು ಅಂಗಗಳನ್ನು ದಾನ ಮಾಡಿ ಎಂಟು ಜನರಿಗೆ ಹೊಸ ಜೀವನವನ್ನು ನೀಡಬಹುದು. ನೂರು ವರ್ಷದವರೆಗೆ ಕಾರ್ನಿಯೂ ಮತ್ತು ಚರ್ಮ 70 ವರ್ಷದವರೆಗೆ ಕಿಡ್ನಿ ಮತ್ತು ಲಿವರ್, 50 ವರ್ಷದವರೆಗೆ ಹೃದಯ ಮತ್ತು ಶ್ವಾಸಕೋಶ ಮತ್ತು 40 ವರ್ಷದವರೆಗೆ ಹೃದಯದ ಕವಾಟಗಳನ್ನು ದಾನ ಮಾಡಬಹುದಾಗಿದೆ. ಆದರೆ ಈ ಅಂಗಾಂಗ ದಾನದ ಬಗ್ಗೆ ಕೆಲವರಿಗೆ ತಪ್ಪು ಕಲ್ಪನೆಗಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲೆಂದು ಆಗಸ್ಟ್ 13 ರಂದು ವಿಶ್ವ ಅಂಗಾಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವದ ಮೊದಲ ಅಂಗದಾನವನ್ನು ಅಮೇರಿಕಾದಲ್ಲಿ 1954ರಲ್ಲಿ ಮಾಡಲಾಯಿತು. ರೊನಾಲ್ಡ್ ಲೀ ಹೆರಿಕ್ ಎಂಬ ವ್ಯಕ್ತಿ 1954ರಲ್ಲಿ ತನ್ನ ಅವಳಿ ಸಹೋದರನಿಗೆ ಮೂತ್ರಪಿಂಡವನ್ನು ದಾನ ಮಾಡಿದನು. ಈ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಡಾ. ಜೋಸೆಫ್ ಮರ್ರೆ ಮಾಡಿದರು. 1990 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ಈ ಶಸ್ತ್ರಚಿಕಿತ್ಸೆಗಾಗಿ ಡಾ. ಜೋಸೆಫ್ ಮರ್ರೆ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಅಂಗದಾನ ದಿನವು ಮಹತ್ವದ್ದಾಗಿದೆ. ಹೀಗಾಗಿ ಈ ದಿನದಂದು ಸೆಮಿನಾರ್ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ