ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನಿಗೂ ಹಬ್ಬದ ದಿನ. ಅದಕ್ಕೊಂದು ವಿಶೇಷ ಸ್ಥಾನವಿದೆ. ಈ ದಿನದ ವಿಶೇಷತೆ, ಇತಿಹಾಸದ ಬಗ್ಗೆ ಮಕ್ಕಳಿಗೆ ಈಗಿನಿಂದಲೇ ತಿಳಿ ಹೇಳುವುದು ಬಹಳ ಮುಖ್ಯ. ಏಕೆಂದರೆ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?” ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲಿ ಹೇಳಿ ಕೊಡದಿದ್ದರೆ ಮಕ್ಕಳು ದೊಡ್ಡವರಾದ ಮೇಲೆ ನಮ್ಮ ತಾಯ್ನಡಿನ ಬಗ್ಗೆ ತಿಳಿದುಕೊಳ್ಳಲು ಹೇಗೆ ಸಾಧ್ಯ? ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಭಾಷಣಗಳನ್ನು ಹೇಳಿ ಕೊಡಲಾಗುತ್ತದೆ, ಕೆಲವೊಮ್ಮೆ ಮಕ್ಕಳು ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ಮಾತನಾಡಬೇಕಾಗುತ್ತದೆ. ಆದರೆ ವೇದಿಕೆ ಮೇಲೆ ನಿಂತು, ಭಾಷಣ ಮಾಡುವುದು ಸುಲಭದ ಮಾತಲ್ಲ. ಮನಸ್ಸು ಮಾಡಿದರೆ ಕಷ್ಟವೂ ಅಲ್ಲ. ಹಾಗಾಗಿ ಯಾವ ರೀತಿ ಭಾಷಣ ಮಾಡಬೇಕು? ಅದನ್ನು ಬಂದಂತಹ ಅತಿಥಿಗಳ ಮುಂದೆ ಹೇಗೆ ಪ್ರಸ್ತುತ ಪಡಿಸಬೇಕು? ತಯಾರಿ ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾಷಣ ಮಾಡುವುದು ಒಂದು ಕಲೆ. ಮನಸ್ಸು ಕೊಟ್ಟು ಮಾಡಿದರೆ, ವೇದಿಕೆ ನಿಮ್ಮದೆ ಆಗುತ್ತದೆ. ಆದರೆ ಹೆದರುತ್ತಾ ಬರೆದದ್ದನ್ನು ಕಂಠಪಾಠ ಮಾಡಿ ಹೇಳುವುದರಿಂದ ನೀವು ಹೇಳುತ್ತಿರುವ ವಿಷಯ ಚೆನ್ನಾಗಿದ್ದರೂ ಕೂಡ ನಿಮ್ಮ ಮುಂದೆ ಕುಳಿತಿರುವವರಿಗೆ ಅದನ್ನು ಕೇಳಲು ಇಷ್ಟವಾಗುವುದಿಲ್ಲ. ಹಾಗಾದರೆ ಭಾಷಣ ಎಲ್ಲರಿಗೂ ಇಷ್ಟವಾಗುವಂತೆ ಹೇಳುವುದು ಹೇಗೆ? ತಿಳಿಯಿರಿ.
ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ, ಪ್ರಬಂಧ ಬರೆಯುವ ಸ್ಪರ್ಧೆಗಳಲ್ಲಿ ನಿಮ್ಮ ಮಕ್ಕಳು ಚೆನ್ನಾಗಿ ಭಾಗವಹಿಸಲು ಪೋಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಭಾಷಣ ಬರೆಯುವಾಗ ಮಕ್ಕಳಿಗೆ ಒಳ್ಳೆಯ ಸಲಹೆ ನೀಡಿ. ಬೇಕಾದರೆ ಮಕ್ಕಳಿಗೆ ವಿಷಯಗಳನ್ನು ಕಲೆಹಾಕಲು ಸಹಾಯ ಮಾಡಿ. ಮಕ್ಕಳ ಭಾಷಣದಲ್ಲಿ ಯಾವುದೇ ತಪ್ಪುಗಳು ಇರದಂತೆ ನೋಡಿಕೊಳ್ಳಿ. ನೀವು ಆತುರ ಪಡದೇ ಮಕ್ಕಳು ಯಾವ ರೀತಿ ಮಾತನಾಡಬೇಕು ಎಂಬುದನ್ನು ಅವರಿಗೆ ಸರಿಯಾಗಿ ಹೇಳಿಕೊಡಿ. ಆದಷ್ಟು ಅವರಿಗೆ ಆತ್ಮವಿಶ್ವಾಸ ತುಂಬಿ ಹುರಿದುಂಬಿಸಿ. ಇದು ದೊಡ್ಡ ಯುದ್ಧವಲ್ಲ ಎಂದು ಮನದಟ್ಟು ಮಾಡಿಸಿ, ವೇದಿಕೆ ಮೇಲೆ ಹೋದಾಗ ಆಗುವ ಆ ಭಯವನ್ನು ನಿವಾರಿಸಿ. ಜೊತೆಗೆ ನಿಮ್ಮ ಮಕ್ಕಳು, ನಾವು ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸುವಂತೆ ನೋಡಿಕೊಳ್ಳಿ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ