World Sandwich Day 2022: ವಿಶ್ವ ಸ್ಯಾಂಡ್‌ವಿಚ್ ದಿನದ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಇಂದಿನ ಜೀವನ ಶೈಲಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಯಾಂಡ್‌ವಿಚ್ ಗಳಲ್ಲಿ ಹಲವಾರು ಬಗೆಗಳನ್ನು ಕಾಣಬಹುದು. ಸಿಹಿ, ಮಸಾಲೆ ಮತ್ತು ಖಾರ ಹಾಗೂ ಮೊಟ್ಟೆ, ಮಾಂಸ ಹಾಗೂ ವಿವಿಧ ರೀತಿಯ ತರಕಾರಿಗಳನ್ನು ಉಪಯೋಗಿಸಿ ಸ್ಯಾಂಡ್‌ವಿಚ್ ಗಳನ್ನು ತಯಾರಿಸಲಾಗುತ್ತದೆ.

World Sandwich Day 2022: ವಿಶ್ವ ಸ್ಯಾಂಡ್‌ವಿಚ್ ದಿನದ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ
Sandwich DayImage Credit source: Times of India
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 03, 2022 | 11:52 AM

ವಿಶ್ವದ ಹಲವು ಭಾಗಗಳಲ್ಲಿ ನವೆಂಬರ್ 3ರಂದು ಸ್ಯಾಂಡ್‌ವಿಚ್ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಒತ್ತಡದ ಜೀವನದ ನಡುವೆ ಅತ್ಯಂತ ಸುಲಭವಾಗಿ ಸಿಗುವ ಹಾಗೂ ಅದರಲ್ಲೂ ಯುವಜನತೆ ಇಷ್ಟಪಡುವ ಆಹಾರ ಪದಾರ್ಥಗಳಲ್ಲಿ ಸ್ಯಾಂಡ್‌ವಿಚ್ ಪ್ರಮುಖವಾದುದಾಗಿದೆ.

ಇತಿಹಾಸ: ಇತಿಹಾಸದ ಪ್ರಕಾರ 1762 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಬದಲಿ ಆಹಾರವಾಗಿ ಸ್ಯಾಂಡ್‌ವಿಚ್ ಅನ್ನು ಕಂಡುಹಿಡಿಯಲಾಯಿತು. ಇಂಗ್ಲೆಂಡ್‌ನ ಜಾನ್ ಮೊಂಟಾಗು ಎಂಬ ವ್ಯಕ್ತಿ ಭಾರೀ ಜೂಜುಕೋರನಾಗಿದ್ದ ಮತ್ತು ರಾತ್ರಿಯ ಊಟವು ಆತನಿಗೆ ಜೂಜು ಆಟಕ್ಕೆ ತೊಂದರೆ ನೀಡುತ್ತಿತ್ತು. ಆದ್ದರಿಂದ ಅವನ ಸೇವಕರು ಆತನ ರಾತ್ರಿ ಊಟದ ಬದಲಿಗಾಗಿ ಎರಡು ಬ್ರೆಡ್ ಸ್ಲೈಸ್‌ಗಳ ನಡುವೆ ಮಾಂಸವನ್ನು ಹಾಕಿ ಕೊಡಲಾಗುತ್ತಿತ್ತು. ಇದೇ ಮುಂದೆ ಸ್ಯಾಂಡ್‌ವಿಚ್ ಆಗಿ ಹೆಸರಾಯಿತು. ಆದ್ದರಿಂದ ಜಾನ್ ಮೊಂಟಾಗು ಹುಟ್ಟಿದ ದಿನ ನವೆಂಬರ್ 3ರಂದು ಸ್ಯಾಂಡ್‌ವಿಚ್ ದಿನವನ್ನು ಆಚರಿಸಲಾಗುತ್ತದೆ.

ಇಂದಿನ ಜೀವನ ಶೈಲಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಯಾಂಡ್‌ವಿಚ್ ಗಳಲ್ಲಿ ಹಲವಾರು ಬಗೆಗಳನ್ನು ಕಾಣಬಹುದು. ಸಿಹಿ, ಮಸಾಲೆ ಮತ್ತು ಖಾರ ಹಾಗೂ ಮೊಟ್ಟೆ, ಮಾಂಸ ಹಾಗೂ ವಿವಿಧ ರೀತಿಯ ತರಕಾರಿಗಳನ್ನು ಉಪಯೋಗಿಸಿ ಸ್ಯಾಂಡ್‌ವಿಚ್ ಗಳನ್ನು ತಯಾರಿಸಲಾಗುತ್ತದೆ. ಹಾಗೆಯೇ ಇಂದು ಸ್ಯಾಂಡ್‌ವಿಚ್ ಗಳದ್ದೇ ಸಾಕಷ್ಟು ಅಂಗಡಿಗಳನ್ನು ಕಾಣಬಹುದು. ದೊಡ್ಡ ಉದ್ಯಮವಾಗಿ ಬೆಳೆದಿದಂತೂ ಸುಳ್ಳಲ್ಲ.

ನಿಮಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಸ್ಯಾಂಡ್‌ವಿಚ್ ರೆಸಿಪಿ ಇಲ್ಲಿದೆ.

  • ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಈರುಳ್ಳಿ, ಕ್ಯಾಪ್ಸಿಕಂ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ, ಉಪ್ಪು, ಚಾಟ್ ಮಸಾಲಾ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮಿಶ್ರಣ ಮಾಡಿದ ನಂತರ ಮೇಯನೇಸ್ ಸೇರಿಸಿ ಮತ್ತು ಸ್ಟಫಿಂಗ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ.
  • 2 ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಬ್ರೆಡ್‌ನ ಎರಡೂ ಸ್ಲೈಸ್‌ಗಳ ಮೇಲೆ ಸ್ಟಫಿಂಗ್ ಅನ್ನು ಚೆನ್ನಾಗಿ ಹರಡಿ.
  • ಸ್ಟಫಿಂಗ್‌ನ ಮೇಲೆ 1 ಚೀಸ್ ಸ್ಲೈಸ್ ಅನ್ನು ಒಂದು ಇರಿಸಿ.
  • ಈಗ ಬ್ರೆಡ್ ಮೇಲೆ ಬೆಣ್ಣೆಯನ್ನು ಹರಡಿ.
  • ಬೆಣ್ಣೆ ಸವರಿದ ಸೈಡ್ ಬ್ರೆಡ್ ಅನ್ನು ಪ್ಯಾನ್ ಮೇಲೆ ಇಳಿಸಿ ಮತ್ತು ಅದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ.
  • ನಂತರ ಬ್ರೆಡ್‌ನ ಇನ್ನೊಂದು ಸ್ಲೈಸ್‌ಗೆ ಬೆಣ್ಣೆಯನ್ನು ಹಚ್ಚಿ ಮತ್ತು ಈ ಬದಿಯನ್ನು ಕೂಡ ಹಾಗೆಯೇ ಮಾಡಿ.
  • ಎರಡೂ ಬದಿಗಳನ್ನು ಗ್ರಿಲ್ ಮಾಡಿದ ನಂತರ ಅವುಗಳನ್ನು ಪ್ಲೇಟ್‌ನಲ್ಲಿ ತೆಗೆದು ಇಡಿ ಮತ್ತು ಬ್ರೆಡ್‌ನ ಮಧ್ಯಭಾಗದಿಂದ ಕತ್ತರಿಸಿ.
  • ನಂತರ ಸ್ವಲ್ಪ ಟೊಮೆಟೊ ಕೆಚಪ್ ಅಥವಾ ಸ್ವಲ್ಪ ಮಸಾಲೆಯುಕ್ತ ಹಸಿರು ಚಟ್ನಿಯೊಂದಿಗೆ ಬಿಸಿಯಾಗಿರುವಾಗಲೇ ರುಚಿಕರ ಸ್ಯಾಂಡ್‌ವಿಚ್ ಸವಿಯಿರಿ.

ಇದನ್ನು ಓದಿ: ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಿ ಕ್ಯಾಶೂ ಬಟರ್ ನಟ್

ಆದ್ದರಿಂದ ಇಂದು ವಿಶ್ವ ಸ್ಯಾಂಡ್‌ವಿಚ್ ದಿನದ ಅಂಗವಾಗಿ ನಿಮ್ಮ ಮನೆಯಲ್ಲೇ ಆರೋಗ್ಯಕರ ಸ್ಯಾಂಡ್‌ವಿಚ್ ಮಾಡಿ  ಸವಿಯಿರಿ.

ಜೀವನ ಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:52 am, Thu, 3 November 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್