ಪ್ರಾಚೀನ ವೇದಗಳ ಕಾಲದಿಂದಲೂ ಭಾರತದಲ್ಲಿ ಸಂಸ್ಕೃತಕ್ಕೆ ವಿಶೇಷ ಸ್ಥಾನವಿದೆ. ಪುರಾತನ ಧರ್ಮ ಗ್ರಂಥ, ಉಪನಿಷತ್ತು, ರಾಮಯಾಣ, ಮಹಾಭಾರತ ಗಳಂತಹ ಜೊತೆಗೆ ಸಾವಿರಾರು ವರ್ಷ ಇತಿಹಾಸವಿರುವ ದೇವಾಲಯಗಳ ವಾಸ್ತು ಶಿಲ್ಪಗಳಲ್ಲಿ ಸಂಸ್ಕೃತ ಲಿಪಿಗಳನ್ನು ಕಾಣಬಹುದು. ವಿಶ್ವದ ಅತ್ಯಂತ ಹಳೆಯ ಭಾಷೆ ಎಂದು ಗುರುತಿಸಲ್ಪಟ್ಟಿರುವ ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಸಂಸ್ಕೃತ ದಿನವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ. ಈ ವರ್ಷ, ಸಂಸ್ಕೃತ ದಿನ ಗುರುವಾರ, ಆಗಸ್ಟ್ 31 ರಂದು ಬಂದಿದೆ. ಇದು ಸಂಸ್ಕೃತ ವಿದ್ವಾಂಸ ಮತ್ತು ವ್ಯಾಕರಣಕಾರರಾದ ಪಾಣಿನಿಯ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಆಚರಿಸುವ ದಿನವು ಕೂಡ ಹೌದು. ಸಂಸ್ಕೃತವನ್ನು ಹೆಚ್ಚಾಗಿ ದೇವವಾಣಿ ಎಂದು ಕರೆಯಲಾಗುತ್ತದೆ, ಇದು ದೇವತೆಗಳ ಭಾಷೆಯನ್ನು ಸೂಚಿಸುತ್ತದೆ.
ಹಿಂದೂ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಭಾಷೆ ಮುಂದಿನ ಪೀಳಿಗೆಗೆ ಹಾಗೂ ಜಗತ್ತಿಗೆ ತಿಳಿಸುವ ಉದ್ದೇಶದಿಂದ 1969 ರಲ್ಲಿ ಸಂಸ್ಕೃತ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಈ ಭಾಷೆ ಸುಮಾರು 3,500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಆದ್ದರಿಂದ ಸಂಸ್ಕೃತ ಭಾಷೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮವು ಭಾಷೆಯ ಸಂರಕ್ಷಣೆಗೆ ಹೆಸರುವಾಸಿಯಾಗಿದೆ. ಅಂಗಡಿಯವರಿಂದ ಹಿಡಿದು ಮಕ್ಕಳು ಮತ್ತು ಬೀದಿಬದಿ ವ್ಯಾಪಾರಿಗಳವರೆಗೆ ಹಳ್ಳಿಯ ಪ್ರತಿಯೊಬ್ಬರೂ ಪ್ರಾಚೀನ ಶಾಸ್ತ್ರೀಯ ಭಾಷೆಯಾದ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಈ ಗ್ರಾಮವು ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬ ಐಟಿ ವೃತ್ತಿಪರರನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಸಂಸ್ಕೃತ ಮಾತನಾಡುವ ಭಾರತದ ಏಕೈಕ ಹಳ್ಳಿ ಎಂಬ ಖ್ಯಾತಿಗೆ ಪಾತ್ರವಾಗಿದೆ ಈ ಹಳ್ಳಿ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು ಇಲ್ಲಿದೆ
ರಾಜ್ಯ ಸರ್ಕಾರವು ಪ್ರಸ್ತುತ 97 ಸಂಸ್ಕೃತ ಶಾಲೆಗಳನ್ನು ನಡೆಸುತ್ತಿದೆ, ಅಲ್ಲಿ ಪ್ರತಿ ವರ್ಷ ಸರಾಸರಿ 2100 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.ವೈದಿಕ ಕಲಿಕೆಯ ತಂತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಪ್ರಾಚೀನ ಭಾಷೆಯನ್ನು ಉತ್ತೇಜಿಸಲು ಶ್ರಮಿಸಲಾಗುತ್ತಿದೆ. ಸಂಸ್ಕೃತವು ಜನರ ಸರ್ವತೋಮುಖ ಕಲ್ಯಾಣಕ್ಕೆ ಸಹಾಯ ಮಾಡುತ್ತದೆ ಎಂದು ಇಲ್ಲಿನ ರಾಜ್ಯ ಸರ್ಕಾರ ನಂಬುತ್ತದೆ.
ಭಾರತಕ್ಕೆ ತನ್ನ ಮೂಲವನ್ನು ಸೆಳೆಯುವ ಭಾಷೆಗೆ, ಸುಧರ್ಮ ಪ್ರಪಂಚದ ಏಕೈಕ ಸಂಸ್ಕೃತ ದಿನಪತ್ರಿಕೆಯಾಗಿದೆ. ಪತ್ರಿಕೆಯು 1970 ರಿಂದ ಭಾರತದ ಕರ್ನಾಟಕದ ಮೈಸೂರಿನಿಂದ ಪ್ರಕಟವಾಗಿದೆ ಮತ್ತು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಅದರ ಆಫ್‌ಲೈನ್ ಓದುಗರಿಗಾಗಿ, ಪತ್ರಿಕೆಯನ್ನು ಮುಖ್ಯವಾಗಿ ಪೋಸ್ಟ್‌ಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಸಂಸ್ಕೃತ ವಿದ್ವಾಂಸರಾದ ಕಳಲೆ ನಡದೂರ್ ವರದರಾಜ ಅಯ್ಯಂಗಾರ್ ಅವರು 1970 ರಲ್ಲಿ ಭಾಷೆಯನ್ನು ಉತ್ತೇಜಿಸುವ ಉದ್ದೇಶದಿಂದ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರು ಸಂಸ್ಕೃತ ಪುಸ್ತಕಗಳನ್ನು ಪ್ರಕಟಿಸಿದ್ದರು.
ಸಂಸ್ಕೃತ ಭಾಷೆ ವಾಕ್ಯ ರೂಪದಲ್ಲಿ ಬಳಕೆಯಲ್ಲಿಲ್ಲದಿದ್ದರೂ ಕೂಡ ಬೇರೆ ಎಲ್ಲಾ ಭಾಷೆಗಳಲ್ಲಿಯೂ ಸಂಸ್ಕೃತ ಪದಗಳನ್ನು ಕಾಣಬಹುದು. ಆನೆ ಎಂಬ ಪದಕ್ಕೆ ನೂರಕ್ಕೂ ಹೆಚ್ಚು ಸಮಾನಾರ್ಥಕ ಪದಗಳಿವೆ ಮತ್ತು ಇಂಗ್ಲಿಷ್‌ನಲ್ಲಿ ಪ್ರೀತಿಗೆ ಒಂದೇ ಪದವಿದ್ದರೆ, ಸಂಸ್ಕೃತದಲ್ಲಿ ತೊಂಬತ್ತಾರು ಇದೆ! ಸಂಸ್ಕೃತವು ಸಮಾನಾರ್ಥಕ ಪದಗಳ ನಿಧಿಯಾಗಿದೆ. ಇದು ನಿಖರವಾಗಿ ಮತ್ತು ನಿರ್ದಿಷ್ಟವಾಗಿ, ಪದಗಳ ಪ್ರಪಂಚವನ್ನು ಸ್ಪಷ್ಟವಾಗಿ ಆಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:32 pm, Thu, 31 August 23