ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್ -ಗ್ಯಾಸ್ ಬರ್ನರ್ ಸ್ವಚ್ಛ ಮಾಡುವುದು ಹೇಗೆ? ಇಲ್ಲಿದೆ ಸುಲಭ-ಸರಳ ವಿಧಾನಗಳು!

|

Updated on: Sep 01, 2023 | 6:06 AM

Cleaning Gas Stove: ಗ್ಯಾಸ್ ಓವನ್ ಮೇಲಿನ ಜಿಡ್ಡನ್ನು ಈರುಳ್ಳಿ ತೆಗೆದುಹಾಕುತ್ತದೆ - ಈರುಳ್ಳಿಯನ್ನು ದುಂಡಗಿನ ತುಂಡುಗಳಾಗಿ ಕತ್ತರಿಸಿ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ನೀರನ್ನು ತಣ್ಣಗಾಗಿಸಿ ಮತ್ತು ಅದರಿಂದ ಗ್ಯಾಸ್ ಓವನ್ ಅನ್ನು ಒರೆಸಿ. ಈ ನೀರು ಗ್ಯಾಸ್ ಸ್ಟೌವ್ ಮೇಲೆ ಸಂಗ್ರಹವಾದ ಗ್ರೀಸ್ ಅನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್ -ಗ್ಯಾಸ್ ಬರ್ನರ್ ಸ್ವಚ್ಛ ಮಾಡುವುದು ಹೇಗೆ? ಇಲ್ಲಿದೆ ಸುಲಭ-ಸರಳ ವಿಧಾನಗಳು!
ಗ್ಯಾಸ್ ಸ್ಟವ್ ಸ್ವಚ್ಛಗೊಳಿಸುವುದು ಹೇಗೆ?
Follow us on

ಪ್ರತಿದಿನ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌ ಬಳಸಲೇಬೇಕು. ಬೆಳಗ್ಗೆ ಟೀ-ಕಾಫಿಯಿಂದ ಶುರು ಮಾಡಿ.. ಟಿಫಿನ್, ಅಡುಗೆ.. ಹೀಗೆ ರಾತ್ರಿಯವರೆಗೂ ಬಳಸುತ್ತಲೇ ಇರುತ್ತಾರೆ. ಪರಿಣಾಮವಾಗಿ ಗ್ಯಾಸ್ ಸ್ಟವ್ ಕೊಳಕು ಕೊಳಕು ಆಗುತ್ತದೆ. ಅಡುಗೆ ಎಣ್ಣೆ ಒಲೆಯ ಮೇಲೆ ಜಿಡ್ಡಿನಂತಾಗುತ್ತದೆ. ಗ್ಯಾಸ್ ಸ್ಟೌವ್ ಅನ್ನು ಕಾಲಕಾಲಕ್ಕೆ ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಸೇರುವ ಅಪಾಯವಿರುತ್ತದೆ. ಇದರಿಂದ ನಾವು ಮಾಡುವ ಖಾದ್ಯಗಳನ್ನು ಅವು ಸೇರುವ ಅಪಾಯವಿರುತ್ತದೆ. ಆದರೆ ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳಿಂದ, ಗ್ಯಾಸ್ ಸ್ಟೌವ್ನಲ್ಲಿ ಸಂಗ್ರಹವಾದ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಈಗ ಹೇಗೆ ಎಂದು ತಿಳಿದುಕೊಳ್ಳೋಣ.

ಈರುಳ್ಳಿ: ಗ್ಯಾಸ್ ಓವನ್ ಮೇಲಿನ ಜಿಡ್ಡನ್ನು ಈರುಳ್ಳಿ ತೆಗೆದುಹಾಕುತ್ತದೆ – ಈರುಳ್ಳಿಯನ್ನು ದುಂಡಗಿನ ತುಂಡುಗಳಾಗಿ ಕತ್ತರಿಸಿ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ನೀರನ್ನು ತಣ್ಣಗಾಗಿಸಿ ಮತ್ತು ಅದರಿಂದ ಗ್ಯಾಸ್ ಓವನ್ ಅನ್ನು ಒರೆಸಿ. ಈ ನೀರು ಗ್ಯಾಸ್ ಸ್ಟೌವ್ ಮೇಲೆ ಸಂಗ್ರಹವಾದ ಗ್ರೀಸ್ ಅನ್ನು ಸುಲಭವಾಗಿ ತೆಗೆದುಹಾಕುತ್ತದೆ.

ವಿನೆಗರ್: ಗ್ಯಾಸ್ ಬರ್ನರ್​​ಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಅನ್ನು ಬಳಸಬಹುದು. ಬರ್ನರ್ ಮೇಲೆ ಕೆಲವು ಹನಿಗಳನ್ನು ಹಾಕಿ ಸ್ವಲ್ಪ ಸಮಯದ ನಂತರ ಅದನ್ನು ಸ್ಪಾಂಜ್ ನಿಂದ ಒರೆಸಿ. ಅದರ ನಂತರ ಡಿಶ್ ವಾಷಿಂಗ್ ಲಿಕ್ವಿಡ್ ಸೋಪಿನಿಂದ ತೊಳೆಯಿರಿ ಮತ್ತು ಗ್ಯಾಸ್ ಬರ್ನರ್ ಚೆನ್ನಾಗಿ ಹೊಳೆಯುತ್ತದೆ.

ಅಡುಗೆ ಸೋಡಾ: ನಿಂಬೆ ರಸ ಮತ್ತು ವಿನೆಗರ್ ಜೊತೆಗೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ಗ್ಯಾಸ್ ಓವನ್ ಮತ್ತು ಬರ್ನರ್ ಅನ್ನು ಈ ಮಿಶ್ರಣದಿಂದ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ವಾರಕ್ಕೆರಡು ಬಾರಿ ಈ ರೀತಿ ಶುಚಿಗೊಳಿಸಿದರೆ ಒಲೆಯ ಮೇಲಿರುವ ಜಿಡ್ಡಿನಿಂದ ಸುಟ್ಟ ಕಲೆಗಳು ಇರುವುದಿಲ್ಲ.

ಇದನ್ನೂ ಓದಿ: Cleaning silver items: ಬೆಳ್ಳಿ ವಸ್ತುಗಳು ಹೊಸದಾಗಿ ಫಳಫಳ ಮಿಂಚುವಂತೆ ಮಾಡಲು ಈ ಸಿಂಪಲ್​ ಟ್ರಿಕ್ಸ್​​ ಬಳಸಿ

ಬಿಸಿ ನೀರು – ಉಪ್ಪು: ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ.. ಬರ್ನರ್ ಗಳನ್ನು ಅದರಲ್ಲಿ ಹಾಕಿ, 15-20 ನಿಮಿಷ ನೆನಸಿ. ಸ್ವಲ್ಪ ತಣ್ಣಗಾದ ನಂತರ ಬರ್ನರ್‌ಗಳನ್ನು ತೆಗೆದು ಡಿಶ್ ವಾಷರ್ ಅಥವಾ ಸೋಪಿನಿಂದ ಉಜ್ಜಿದರೆ ಬರ್ನರ್‌ಗಳು ಹೊಳೆಯುತ್ತವೆ.

ಬಿಳಿ ವಿನೆಗರ್ – ಅಡುಗೆ ಸೋಡಾ: ಒಂದು ಬೌಲ್ ನೀರಿನಲ್ಲಿ ಬಿಳಿ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಗ್ಯಾಸ್ ಬರ್ನರ್ ಅನ್ನು 2 ಗಂಟೆಗಳ ಕಾಲ ನೆನಸಿಡಿ. ಈಗ ಬರ್ನರ್ ಅನ್ನು ಡಿಶ್ ಸೋಪ್ ನಲ್ಲಿ ಸೇರಿಸಿ.. ಬರ್ನರ್ ಅನ್ನು ಟೂತ್ ಬ್ರಷ್ ಅಥವಾ ಸ್ಕ್ರಬ್ ನಿಂದ ಉಜ್ಜಿ ಸ್ವಚ್ಛಗೊಳಿಸಿ. ಈ ಸರಳ ಸಲಹೆಗಳೊಂದಿಗೆ ನಿಮ್ಮ ಅಡುಗೆಮನೆಯ ಗ್ಯಾಸ್ ಸ್ಟವ್ ಅನ್ನು ಹೊಳೆಯುವಂತೆ ಇರಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ