AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smelly Armpits: ನಿಮ್ಮ ಈ ಆಹಾರಕ್ರಮಗಳು ಕೂಡ ಕಂಕುಳಲ್ಲಿನ ಕೆಟ್ಟ ವಾಸನೆಗೆ ಕಾರಣವಾಗಬಹುದು!

ದೇಹದ ತೇವ ಮತ್ತು ಕೂದಲುಳ್ಳ ಪ್ರದೇಶಗಳಲ್ಲಿ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಉಪಸ್ಥಿತಿಯು ಕಂಕುಳಿನಿಂದ ಹೊರಹೊಮ್ಮುವ ಅಹಿತಕರ ವಾಸನೆಯನ್ನು ಉಂಟುಮಾಡುತ್ತದೆ. ಇದಕ್ಕಾಗಿ ಡಿಯೋಡರೆಂಟ್‌ ಮತ್ತು ಪೌಡರ್‌ಗಳನ್ನು ಬಳಸಿ ನೀವು ಆಯಾಸಗೊಂಡಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಚಿಂತಿಸಬೇಡಿ. ಈ ಸಮಸ್ಯೆಗೆ ಇಂದೇ ಪರಿಹಾರ ಕಂಡುಕೊಳ್ಳಿ

Smelly Armpits: ನಿಮ್ಮ ಈ ಆಹಾರಕ್ರಮಗಳು ಕೂಡ ಕಂಕುಳಲ್ಲಿನ ಕೆಟ್ಟ ವಾಸನೆಗೆ ಕಾರಣವಾಗಬಹುದು!
Smelly ArmpitsImage Credit source: Pinterest
ಅಕ್ಷತಾ ವರ್ಕಾಡಿ
|

Updated on: Sep 01, 2023 | 1:29 PM

Share

ಕಂಕುಳಲ್ಲಿನ ಕೆಟ್ಟ ವಾಸನೆ ನಿಮ್ಮನ್ನು ಸಾಕಷ್ಟು ಜನರ ಮುಂದೆ ಮುಜುಗರಕ್ಕೀಡು ಮಾಡಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ಬೆವರು ಮಾತ್ರ ಕಾರಣವಲ್ಲ. ಇದರ ಹೊರತಾಗಿ ನಿಮ್ಮ ಕೆಲವು ಆಹಾರ ಕ್ರಮ ಹಾಗೂ ಜೀವನಶೈಲಿಯು ಕಾರಣವಾಗಿರಬಹುದು. ಅತಿಯಾಗಿ ಬೆವರಿದಾಗ ದೇಹದಿಂದ ಕೆಟ್ಟ ವಾಸನೆ ಹೊರ ಬರುತ್ತದೆ. ಇದಲ್ಲದೇ ಕೆಲವೊಮ್ಮೆ ಬೆವರು ಇಲ್ಲದಿದ್ದರೂ ಕೂಡ ಕಂಕುಳಿನಿಂದ ವಾಸನೆ ಬರುತ್ತಿರುತ್ತದೆ. ದೇಹದ ತೇವ ಮತ್ತು ಕೂದಲುಳ್ಳ ಪ್ರದೇಶಗಳಲ್ಲಿ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಉಪಸ್ಥಿತಿಯು ಕಂಕುಳಿನಿಂದ ಹೊರಹೊಮ್ಮುವ ಅಹಿತಕರ ವಾಸನೆಯನ್ನು ಉಂಟುಮಾಡುತ್ತದೆ. ಇದಕ್ಕಾಗಿ ಡಿಯೋಡರೆಂಟ್‌ ಮತ್ತು ಪೌಡರ್‌ಗಳನ್ನು ಬಳಸಿ ನೀವು ಆಯಾಸಗೊಂಡಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಚಿಂತಿಸಬೇಡಿ. ಈ ಸಮಸ್ಯೆಗೆ ಪರಿಹಾರ ನೀಡಲು ತಜ್ಞರಾದ ಗ್ಲೋ & ಗ್ರೀನ್‌ನ ಸಂಸ್ಥಾಪಕಿ ರುಚಿತಾ ಆಚಾರ್ಯ ಹೆಚ್​​​​​ಟಿ ಲೈಫ್‌ಸ್ಟೈಲ್‌ನೊಂದಿಗೆ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ರುಚಿತಾ ಅವರ ಪ್ರಕಾರ ನಿಮ್ಮ ಕಂಕುಳಲ್ಲಿ ವಾಸನೆ ಬರಲು ಸಾಮಾನ್ಯ ಕಾರಣಗಳೆಂದರೆ:

  • ಎಲೆಕೋಸು, ಈರುಳ್ಳಿ, ಕೋಸುಗಡ್ಡೆ ಮತ್ತು ಬೆಳ್ಳುಳ್ಳಿಯಂತಹ ಆಹಾರಗಳನ್ನು ಅತಿಯಾಗಿ ಸೇವಿಸುವುದು.
  • ಯಾರು ಪದೇ ಪದೇ ಸ್ನಾನ ಮಾಡುವುದಿಲ್ಲವೋ ಅವರು ಕೆಟ್ಟ ವಾಸನೆಯನ್ನು ಹೊಂದಿರುತ್ತಾರೆ . ಏಕೆಂದರೆ ನಿಯಮಿತ ಸ್ನಾನವು ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ವರ್ಕ್ ಔಟ್ ಮಾಡಿ ಬಂದ ತಕ್ಷಣ ನಿಮ್ಮ ಬಟ್ಟೆಗಳನ್ನು ಬದಲಾಯಿಸದಿರುವುದು.

ಕಂಕುಳಲ್ಲಿನ ಕೆಟ್ಟ ವಾಸನೆ ಹೋಗಲಾಡಿಸಲು ರುಚಿತಾ ಸೂಚಿಸಿದ ಕೆಲವು ಸಲಹೆಗಳು:

1. ವೈಯಕ್ತಿಕ ನೈರ್ಮಲ್ಯ:

ಬೇಸಿಗೆಯಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ ಮತ್ತು ಹೆಚ್ಚುವರಿ ಬೆವರು ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಆಂಟಿಬ್ಯಾಕ್ಟೀರಿಯಲ್ ಸೋಪ್ ಬಳಸಿ. ನಿಮ್ಮ ದೇಹವು ಉಸಿರಾಡಲು ಮತ್ತು ತಂಪಾಗಿರಲು ಸಡಿಲವಾದ ಬಟ್ಟೆಗಳನ್ನು ಧರಿಸಿ, ಹತ್ತಿ ಮತ್ತು ಲಿನಿನ್ ಬಟ್ಟೆಗಳನ್ನು ಧರಿಸುವುದು ಉತ್ತಮ. ನಿಮ್ಮ ತೋಳುಗಳನ್ನು ನಿಯಮಿತವಾಗಿ ಶೇವಿಂಗ್​​​​ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕೂದಲಿನಿಂದ ಆವೃತವಾದ ಚರ್ಮದ ಮೇಲೆ ಹಲವಾರು ಬ್ಯಾಕ್ಟೀರಿಯಾಗಳು ಬೆಳೆಯಬಹುದು.

2. ಆಹಾರ ಸಲಹೆ:

ಬೆಳ್ಳುಳ್ಳಿ, ಈರುಳ್ಳಿ ಮತ್ತು ಎಲೆಕೋಸು, ಹೂಕೋಸು ಮತ್ತು ಕೋಸುಗಡ್ಡೆಯಂತಹ ಎಲೆಗಳ ತರಕಾರಿಗಳಂತಹ ಸಲ್ಫರ್ ಹೆಚ್ಚಿರುವ ಆಹಾರಗಳಿಂದ ದೂರವಿರಿ. ಸಲ್ಫರ್ ಸಂಯುಕ್ತಗಳು ಕೊಳೆತ ಮೊಟ್ಟೆಯ ವಾಸನೆಯನ್ನು ಹೊಂದಿರುತ್ತವೆ. ಇದು ಅತ್ಯಂತ ಅಹಿತಕರವಾದ ದುರ್ವಾಸನೆಯನ್ನು ಹೊರಹಾಕಬಹುದು.

ಇದನ್ನೂ ಓದಿ: ಅತಿಯಾಗಿ ಉಪ್ಪು ಸೇವಿಸುವುದರಿಂದ ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು

3. ಟೀ ಟ್ರೀ ಆಯಿಲ್​​​:

ಟೀ ಟ್ರೀ ಆಯಿಲ್ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅದರ ಆಂಟಿಮೈಕ್ರೊಬಿಯಲ್ ಗುಣಗಳು ಮತ್ತು ಸುಂದರವಾದ ಪರಿಮಳದಿಂದಾಗಿ ಇದನ್ನು ನೈಸರ್ಗಿಕ ಡಿಯೋಡರೆಂಟ್ ಆಗಿ ಬಳಸಬಹುದು. ಟೀ ಟ್ರೀ ಆಯಿಲ್ ನಿಮಗೆ ಉತ್ತಮ ಚರ್ಮವನ್ನು ನೀಡುತ್ತದೆ ಮತ್ತು ನಿಮ್ಮ ದೇಹದಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ಸ್ವಭಾವತಃ ಆಮ್ಲೀಯವಲ್ಲದ ಕಾರಣ, ಇದನ್ನು ಸೂಕ್ಷ್ಮ ಪ್ರದೇಶಗಳಿಗೆ ಅನ್ವಯಿಸಬಹುದು.

4. ಬೇವಿನ ಎಲೆಗಳು:

ನಿಮ್ಮ ಚರ್ಮದ ಮೇಲೆ ಬೇವಿನ ರಸದ ಕೆಲವು ಹನಿಗಳನ್ನು ಸಿಂಪಡಿಸಿ, ತದನಂತರ ಅದನ್ನು ಕನಿಷ್ಠ ಎರಡು ಅಥವಾ ಎರಡು ನಿಮಿಷಗಳ ಕಾಲ ಬಿಡಿ. ಬೇವು ಬಲವಾದ ಚಿಕಿತ್ಸಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸಾಮರ್ಥ್ಯಗಳನ್ನು ಹೊಂದಿದೆ; ಬೇವಿನ ರಸವನ್ನು ಚರ್ಮಕ್ಕೆ ಅನ್ವಯಿಸುವುದರಿಂದ ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು ಬೆಳೆಯುವುದನ್ನು ತಡೆಯುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್