Salt Side Effects: ಅತಿಯಾಗಿ ಉಪ್ಪು ಸೇವಿಸುವುದರಿಂದ ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು
ಉಪ್ಪು ಆಹಾರದ ಪ್ರಮುಖ ಭಾಗವಾಗಿದ್ದು, ಅದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಆದರೆ ಅದರ ಅತಿಯಾದ ಬಳಕೆಯು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾಯಿಲೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಅಧಿಕ ಉಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಅನಾನುಕೂಲಗಳು ಉಂಟಾಗುತ್ತದೆ ಎಂಬುದನ್ನು ನೋಡೋಣ.
ಉಪ್ಪುಆಹಾರದ ಪ್ರಮುಖ ಭಾಗವಾಗಿದ್ದು, ಅದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಆಹಾರದಲ್ಲಿ ಉಪ್ಪು ಹಾಕದಿದ್ದರೆ, ಅದರಿಂದ ಆಹಾರದ ರುಚಿ ಹೇಗೆ ಕೆಡುತ್ತದೆಯೋ ಅದೇ ರೀತಿ ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸಿದರೆ ಅದು ಆಹಾರದ ರುಚಿಯನ್ನು ಕೆಡಿಸುವುದರ ಜೊತೆಗೆ ಆರೋಗ್ಯಕ್ಕೂ ಹಾನಿಯುಂಟುಮಾಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ಆಹಾರದಲ್ಲಿ ಕಡಿಮೆ ಉಪ್ಪನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂಬುದನ್ನು ತಿಳಿಯೋಣ.
ದಿನಕ್ಕೆ ಎಷ್ಟು ಪ್ರಮಾಣದ ಉಪ್ಪನ್ನು ಸೇವನೆ ಮಾಡುವುದು ಉತ್ತಮ:
ಹೆಚ್ಚಿನ ಜನರು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುತ್ತಾರೆ. ಇದರಿಂದಾಗಿ ಅನೇಕರು ಅಧಿಕರಕ್ತದೊತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ವ್ಯಕ್ತಿಗೆ ಬೇಕಾಗುವ ಉಪ್ಪಿನ ಪ್ರಮಾಣವು ಅವರ ದೈಹಿಕ ಚಟುವಟಿಕೆಗಳನ್ನು ಅವಲಂಬಿಸಿ ವಿಭಿನ್ನವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಸಾಮಾನ್ಯವಾಗಿ ವಯಸ್ಕ ವ್ಯಕ್ತಿಯು 5 ಗ್ರಾಂ ಗಿಂತ ಕಡಿಮೆ ಅಂದರೆ ಒಂದು ಟೀಚಮಚಕ್ಕಿಂತ ಕಡಿಮೆ ಉಪ್ಪನ್ನು ಸೇವಿಸಬೇಕು. ಹಾಗೂ ಮಕ್ಕಳಿಗೆ ಇದಕ್ಕಿಂತಲೂ ಕಡಿಮೆ ಪ್ರಮಾಣದ ಉಪ್ಪು ಸೇವಿಸಬೇಕು.
ಅಧಿಕ ಉಪ್ಪು ಸೇವನೆಯಿಂದ ಬಾಧಿಸುವ ಆರೋಗ್ಯ ಸಮಸ್ಯೆಗಳು:
ರಕ್ತದೊತ್ತಡ:
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸುವುದರಿಂದ ವ್ಯಕ್ತಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಆಹಾರದಲ್ಲಿ ಉಪ್ಪನ್ನು ಮಿತ ಪ್ರಮಾಣದಲ್ಲಿ ಬಳಸಬೇಕೆಂದು ಸಲಹೆ ನೀಡುತ್ತಾರೆ.
ಹೃದಯದ ಆರೋಗ್ಯ:
ಅತಿಯಾದ ಉಪ್ಪು ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ. ನೀವು ದಿನಕ್ಕೆ ಐದು ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಿದರೆ, ಅದು ನಿಮ್ಮ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿರ್ಜಲೀಕರಣ:
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ, ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಲು ಆಹಾರದಲ್ಲಿ ಮಿತ ಪ್ರಮಾಣದ ಉಪ್ಪನ್ನು ಸೇರಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ಇದನ್ನೂ ಓದಿ: ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹವನ್ನು ಏಕೆ ಆಚರಿಸಲಾಗುತ್ತದೆ? ಆಚರಣೆಯ ಹಿಂದಿನ ಇತಿಹಾಸ, ಪ್ರಾಮುಖ್ಯತೆ
ಊತ:
ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ನೀರು ವಿಪರೀತವಾಗಿ ಶೇಖರಣೆಯಾಗುತ್ತದೆ.ಇದರಿಂದಾಗಿ . ಕೈ, ಕಾಲು ಮತ್ತು ಕಣಕಾಲುಗಳಲ್ಲಿ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿಮ್ಮನ್ನು ಕಾಡಬಾರದೆಂದರೆ, ಉಪ್ಪನ್ನು ಮಿತಪ್ರಮಾಣದಲ್ಲಿ ಸೇವಿಸಿ.
ಕಿಡ್ನಿ ಸಮಸ್ಯೆ:
ಅತಿಯಾದ ಉಪ್ಪು ಸೇವನೆಯು ಕಿಡ್ನಿಯನ್ನು ಹಾನಿಗೊಳಿಸಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಉಪ್ಪಿನ ಅತಿಯಾದ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ವವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ನಿಮ್ಮ ಆರೋಗ್ಯಕ್ಕೆ ಉಪ್ಪು ಬಹಳ ಮುಖ್ಯ. ಆದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: