ಸುದ್ದಿ ಮಾಧ್ಯಮಗಳ ವರದಿಗಾರಿಕೆಯಲ್ಲಿ ವಿಭಾಗಗಳು ಹಲವಾರಿದ್ದರೂ, ಕ್ರೀಡಾ ವರದಿಗಾರಿಕೆಯಲ್ಲಿ ತೊಡಗಿಕೊಂಡವರ ಸಂಖ್ಯೆಯು ಕಡಿಮೆ. ಕ್ರೀಡಾ ಜಗತ್ತಿನ ಬಗ್ಗೆ ಜ್ಞಾನವಿದ್ದವರು ಮಾತ್ರ ವರದಿಗಾರಿಕೆಯತ್ತ ಗಮನ ಹರಿಸುತ್ತಾರೆ. ಆದರೆ ಪತ್ರಿಕೆಗಳು, ಸುದ್ದಿ ವಾಹಿನಿಗಳು ಹಾಗೂ ವೆಬ್ ಸೈಟ್ ಗಳು ಕ್ರೀಡಾ ಸುದ್ದಿಗಳಿಲ್ಲದೆ ಪೂರ್ಣವಾಗುವುದಿಲ್ಲ ಎನ್ನಬಹುದು. ಕ್ರೀಡೆಯ ಕುರಿತಾದ ಸುದ್ದಿಗಳನ್ನು ಆಸಕ್ತಿಯಿರುವವರಿಗೆ ತಲುಪಿಸುವವರೇ ಈ ಕ್ರೀಡಾ ವರದಿಗಾರರು. ಈ ಕ್ರೀಡಾ ಸುದ್ದಿಗಳನ್ನು ಓದುವುದಕ್ಕಾಗಿ ಓದುಗ ಬಳಗವಿದೆ. ಇವರು ಕ್ರೀಡೆಗಳ ಬಗ್ಗೆ, ಕ್ರೀಡಾಪಟುಗಳ ಕುರಿತಾಗಿ ಬಹಳನೇ ಆಸಕ್ತಿಯನ್ನು ಹೊಂದಿದ್ದು, ದಿನನಿತ್ಯ ಈ ಸುದ್ದಿಗಳತ್ತ ಕಣ್ಣಾಯಿಸುತ್ತಾರೆ. ಹೀಗಾಗಿ ಕ್ರೀಡಾ ಪತ್ರಕರ್ತರ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಅವರ ಕೆಲಸವನ್ನು ಗೌರವಿಸುವ ಸಲುವಾಗಿ ಅವರಿಗಾಗಿಯೇ ಕ್ರೀಡಾ ಪತ್ರಕರ್ತರ ದಿನವನ್ನು ಮೀಸಲಿಡಲಾಗಿದೆ.
ವಿಶ್ವ ಕ್ರೀಡಾ ಪತ್ರಕರ್ತರ ದಿನವನ್ನು ಮೊದಲು ಆರಂಭಿಸಿದ್ದು ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್ ಪ್ರೆಸ್ ಅಸೋಸಿಯೇಷನ್. 1924 ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯದ ವೇಳೆ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಅದೇ ದಿನದಂದು ಕ್ರೀಡಾ ಪತ್ರಕರ್ತರ ದಿನವನ್ನೂ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಜುಲೈ 2 ರಂದು ವಿಶ್ವ ಕ್ರೀಡಾ ಪತ್ರಕರ್ತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಹುಚ್ಚರಂತೆ ಪ್ರೀತಿಸುವ ಹುಡುಗಿಯರು ಸಮಯ ಕಳೆದಂತೆ ಬದಲಾಗುವುದು ಏಕೆ? ಕಾರಣ ಇಲ್ಲಿದೆ
ಕ್ರೀಡಾ ಪತ್ರಕರ್ತರ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಅವರ ಕೆಲಸವನ್ನು ಗೌರವಿಸುವ ಸಲುವಾಗಿ ಅವರಿಗಾಗಿಯೇ ಕ್ರೀಡಾ ಪತ್ರಕರ್ತರ ದಿನವನ್ನು ಮೀಸಲಿಡಲಾಗಿದ್ದು, ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ಕೊಡುಗೆಗಳನ್ನು ನೀಡಿದ ಕ್ರೀಡಾ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಕ್ರೀಡಾ ಪತ್ರಕರ್ತರಿಗೆ ಕ್ರೀಡಾ ಪತ್ರಕರ್ತ ಸಮ್ಮಾನ್ ಪ್ರಶಸ್ತಿ, ಕ್ರೀಡಾ ಪತ್ರಿಕೋದ್ಯಮ ಪ್ರಶಸ್ತಿ, ಕ್ರೀಡಾ ಪತ್ರಕರ್ತ ಗೌರವ್ ಪ್ರಶಸ್ತಿ, ರಾಷ್ಟ್ರೀಯ ಕ್ರೀಡಾ ಪತ್ರಕರ್ತ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಪತ್ರಕರ್ತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ