Relationship Tips : ಹುಚ್ಚರಂತೆ ಪ್ರೀತಿಸುವ ಹುಡುಗಿಯರು ಸಮಯ ಕಳೆದಂತೆ ಬದಲಾಗುವುದು ಏಕೆ? ಕಾರಣ ಇಲ್ಲಿದೆ

ಪ್ರೀತಿಯು ಕೇವಲ ಎರಡೇ ಎರಡು ಅಕ್ಷರವಾಗಿದ್ದರೂ, ಎಲ್ಲವನ್ನು ಜಯಿಸುವ ಶಕ್ತಿಯಿದೆ. ಆದರೆ ಈಗಿನ ಕಾಲದಲ್ಲಿ ಟೈಮ್ ಪಾಸ್ ಗಾಗಿ ಪ್ರೀತಿ ಮಾಡುವವರೇ ಹೆಚ್ಚಾಗಿರುತ್ತಾರೆ. ಹೀಗಾಗಿ ಬ್ರೇಕಪ್ ಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಆದರೆ ಕೆಲವೊಮ್ಮೆ ಅತಿಯಾಗಿ ಪ್ರೀತಿಸುವ ಹುಡುಗಿಯೂ ಬದಲಾಗುತ್ತಾಳೆ. ಅದಕ್ಕೆ ಹುಡುಗನ ಈ ಗುಣಗಳೇ ಕಾರಣವಂತೆ. ಅದೇನು ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ

Relationship Tips : ಹುಚ್ಚರಂತೆ ಪ್ರೀತಿಸುವ ಹುಡುಗಿಯರು ಸಮಯ ಕಳೆದಂತೆ ಬದಲಾಗುವುದು ಏಕೆ? ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2024 | 3:25 PM

ಪ್ರೀತಿ ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಬೇಕು. ಸಂಬಂಧವೂ ಜೀವಂತಿಕೆಯಿಂದ ಕೂಡಿರಬೇಕೇ ಪ್ರೀತಿಯಿರಲೇ ಬೇಕು. ಈಗಿನ ಕಾಲದಲ್ಲಿ ಪ್ರೀತಿಯೆನ್ನುವುದು ಗಂಡು ಹೆಣ್ಣಿಗೆ ಮಾತ್ರ ಸೀಮಿತವಾಗಿದೆ. ಆದರೆ ಈ ಪ್ರೀತಿಗೂ ಗ್ಯಾರಂಟಿಯನ್ನೋದೇ ಇಲ್ಲ. ಅತಿಯಾಗಿ ಪ್ರೀತಿಸುತ್ತಿದ್ದ ವ್ಯಕ್ತಿಗಳಿಬ್ಬರೂ ಸಣ್ಣ ಪುಟ್ಟ ಕಾರಣಕ್ಕಾಗಿ ಬಿಟ್ಟೋಗುವ ನಿರ್ಧಾರ ಮಾಡುತ್ತಿದ್ದಾರೆ. ಒಂದು ವೇಳೆ ಹುಚ್ಚಿಯಂತೆ ನಿಮ್ಮನ್ನು ಪ್ರೀತಿಸುತ್ತಿದ್ದ ಹುಡುಗಿಯೂ ನಿಮ್ಮನ್ನು ಕಡೆಗಣಿಸುತ್ತಿದ್ದರೆ ಈ ಬಗ್ಗೆ ಹುಡುಗನು ಇದನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯ. ಇಲ್ಲದಿದ್ದರೆ ಕ್ರಮೇಣವಾಗಿ ಪ್ರೀತಿಯೂ ಕೈ ತಪ್ಪಿ ಹೋಗಬಹುದು.

* ಪದೇ ಪದೇ ನೋಯಿಸುವುದು: ಕೆಲವು ಹುಡುಗಿಯರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಹುಡುಗನು ಪದೇ ಪದೇ ಆಕೆಯ ಮನಸ್ಸನ್ನು ನೋಯಿಸುತ್ತಿದ್ದರೆ, ಅದನ್ನು ಸಹಿಸಿಕೊಳ್ಳುವ ಶಕ್ತಿಯೂ ಆಕೆಯಲ್ಲಿ ಇರುವುದಿಲ್ಲ. ಆಗ ಆ ಹುಡುಗಿಯ ಮನಸ್ಸಲ್ಲಿ ತಾನು ಮಾಡಿದ ಆಯ್ಕೆಯೂ ಸರಿಯಿಲ್ಲ ಎಂದೆನಿಸಬಹುದು. ಹೀಗಾಗಿ ಅತಿಯಾಗಿ ಹಚ್ಚಿಕೊಳ್ಳುತ್ತಿದ್ದ ಹುಡುಗಿಯೂ ಬದಲಾಗುತ್ತಾಳೆ.

* ನಿರ್ಲಕ್ಷ್ಯ ಭಾವನೆ : ಹೆಣ್ಣು ಸಹಜವಾಗಿ ತನ್ನನ್ನು ನಿರ್ಲಕ್ಷ್ಯ ಮಾಡುವುದನ್ನು ಸಹಿಸುವುದಿಲ್ಲ. ತನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುವ ಹುಡುಗಿಯೂ ಏನೇ ಆದರೂ ನನ್ನನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಭಾವ ಹೊಂದಿರುತ್ತಾನೆ. ಹೀಗಾಗಿ ತನ್ನ ಕೆಲಸದಲ್ಲಿ ಬ್ಯುಸಿಯಾಗಿರಬಹುದು, ಆದರೆ ಅದುವೇ ಆಕೆಗೆ ತನ್ನನ್ನು ತನ್ನ ಹುಡುಗನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದೆನಿಸಬಹುದು. ಇದುವೇ ಆಕೆಯೂ ಬದಲಾಗಲು ಮುಖ್ಯ ಕಾರಣವಾಗುತ್ತದೆ.

* ಭಾವನಾತ್ಮಕ ಬೆಂಬಲವಿಲ್ಲದಿರುವುದು : ಪ್ರಾಮಾಣಿಕವಾಗಿ ಪ್ರೀತಿಸುವ ಹುಡುಗಿಯೂ ತನ್ನ ಪ್ರೇಮಿಯಿಂದ ಬಯಸುವುದು ಭಾವನಾತ್ಮಕ ಬೆಂಬಲ. ಹುಡುಗಿಗೆ ನೀವು ಎಷ್ಟೇ ದುಬಾರಿಯ ಉಡುಗೊರೆ ನೀಡಿದರೂ ಕೆಲವೊಂದು ಸಂದರ್ಭದಲ್ಲಿ ಭಾವನಾತ್ಮಕ ಬೆಂಬಲ ನೀಡುವುದು ಮುಖ್ಯ. ಒಂದು ವೇಳೆ ಸಂಬಂಧದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವುದು, ಏನೇ ಆದರೂ ನಾನಿದ್ದೇನೆ ಎನ್ನುವ ಧೈರ್ಯದ ಮಾತುಗಳು ಕಡಿಮೆಯಾಗುತ್ತಿದ್ದಂತೆ ನಿಮ್ಮ ಹುಡುಗಿಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ನಿಮ್ಮ ಮಗ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ಪತ್ತೆ ಮಾಡುವುದು ಹೇಗೆ?

* ಸಮಯ ಕೊಡದಿರುವುದು : ಹುಡುಗಿಯೂ ತನ್ನ ಸಂಗಾತಿ ತನ್ನನ್ನು ಪ್ರೀತಿಸಬೇಕು, ತನ್ನೊಂದಿಗೆ ಸ್ವಲ್ಪ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ಕೆಲವೊಮ್ಮೆ ಈ ಬಗ್ಗೆ ಪ್ರೇಮಿಯೂ ಬಾಯಿ ಬಿಟ್ಟು ಹೇಳಿದರೂ ಹುಡುಗನು ಅರ್ಥ ಮಾಡಿಕೊಳ್ಳುವುದಿಲ್ಲ. ಕೊನೆಗೆ ತನಗೆ ಯಾರು ಸಮಯ ಕೊಡುತ್ತಾರೋ ಅವರೊಂದಿಗೆ ಸಮಯ ಕಳೆಯುತ್ತಾಳೆ. ಹೀಗಾಗಿ ಆಕೆಯ ನಡವಳಿಕೆಯಲ್ಲಿ ಬದಲಾವಣೆಗಳಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ