AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Asteroid Day 2024: ಜೂನ್ 30 ರಂದೇ ವಿಶ್ವ ಕ್ಷುದ್ರಗ್ರಹ ದಿನವನ್ನು ಆಚರಿಸುವುದು ಏಕೆ? ಇದೇ ಕಾರಣ ನೋಡಿ

ಸೌರ ಮಂಡಲದಲ್ಲಿರುವ ಕ್ಷುದ್ರಗ್ರಹಗಳಲ್ಲಿ ಕೆಲವು ನಮ್ಮ ಭೂಮಿಯ ಸಮೀಪವೇ ಹಾದುಹೋಗುತ್ತವೆ. ಕೆಲವೊಮ್ಮೆ ರಭಸದಿಂದ ಭೂಮಿಗೆ ಬಂದು ಅಪ್ಪಳಿಸಬಹುದು, ಇದರಿಂದ ಸಾಕಷ್ಟು ಹಾನಿಯು ಸಂಭವಿಸುತ್ತದೆ. ಈ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವು ಜೂನ್ 30 ರ ವಿಶ್ವ ಕ್ಷುದ್ರಗ್ರಹ ದಿನವು ಹೊಂದಿದೆ. ಹಾಗಾದ್ರೆ ಈ ದಿನದ ಕುರಿತಾದ ಇನ್ನಷ್ಟು ಮಾಹಿತಿಯೂ ಇಲ್ಲಿದೆ.

World Asteroid Day 2024: ಜೂನ್ 30 ರಂದೇ ವಿಶ್ವ ಕ್ಷುದ್ರಗ್ರಹ ದಿನವನ್ನು ಆಚರಿಸುವುದು ಏಕೆ? ಇದೇ ಕಾರಣ ನೋಡಿ
World Asteroid Day 2024
ಸಾಯಿನಂದಾ
| Edited By: |

Updated on: Jun 30, 2024 | 10:32 AM

Share

ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹವೆಂದರೆ ಅದುವೇ ಈ ಕ್ಷುದ್ರಗ್ರಹ. ಸೌರ ಮಂಡಲದಲ್ಲಿರುವ ಈ ಅಸಂಖ್ಯಾತ ಕ್ಷುದ್ರ ಗ್ರಹಗಳು ಸೂರ್ಯನನ್ನು ಸುತ್ತುಹಾಕುತ್ತವೆ. ಆದರೆ ಈ ಗ್ರಹಗಳು ಕೆಲವೊಮ್ಮೆ ಭೂಮಿಗೆ ಬಂದು ಅಪ್ಪಳಿಸುತ್ತವೆ. ಈಗಾಗಲೇ ಅದೆಷ್ಟೋ ಬಾರಿ ಈ ಗ್ರಹವು ಭೂಮಿಗೆ ಬಂದು ಅಪ್ಪಳಿಸಿ ಅನಾಹುತಕ್ಕೆ ಕಾರಣವಾದದ್ದು ಇದೆ. ಈ ಕ್ಷುದ್ರಗ್ರಹವು ಭೂಮಿಗೆ ಘರ್ಷಣೆ ಮಾಡಬಹುದಾದ ವಿನಾಶಕಾರಿ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ವಿಶ್ವ ಕ್ಷುದ್ರಗ್ರಹ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಕ್ಷುದ್ರಗ್ರಹ ದಿನದ ಇತಿಹಾಸ:

2014 ರಲ್ಲಿ ಸಂಗೀತಗಾರ ಡಾ. ಬ್ರಿಯಾನ್ ಮೇ, ಅಪೊಲೊ 9 ಗಗನಯಾತ್ರಿ ರಸ್ಟಿ ಕಾರ್ಟ್, ಚಲನಚಿತ್ರ ನಿರ್ಮಾಪಕ ಗ್ರಿಗ್ ರಿಕ್ಚರ್ಸ್ ಹಾಗೂ ಬಿ 612 ಅಧ್ಯಕ್ಷ ಡಾನಿಕಾ ರೆಮಿ ಸೇರಿ ಅಂತಾರಾಷ್ಟ್ರೀಯ ಕುದ್ರಗ್ರಹಗಳ ದಿನಾಚರಣೆಗೆ ಮುಂದಾದರು. ಆದರೆ ಡಿಸೆಂಬರ್ 2016 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ಒಕ್ಕೂಟದ ಸೈಬೀರಿಯಾದ ಮೇಲೆ 1908, ಜೂನ್ 30ರಂದು ಸಂಭವಿಸಿದ ತುಂಗುಸ್ಕಾ ಘಟನೆಯನ್ನು ನೆನಪಿಸುವುದಕ್ಕಾಗಿ ಈ ದಿನವನ್ನು ಆಚರಿಸಲು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 30 ರಂದು ವಿಶ್ವ ಕ್ಷುದ್ರ ಗ್ರಹ ದಿನ ವನ್ನು ಆಚರಿಸಲಾಗುತ್ತಿದೆ.

1908ರ ಜೂನ್ 30 ರಂದು ಆಗಿದ್ದೇನು?

1908, ಜೂನ್ 30ರಂದು ಸೈಬಿರಿಯಾದ ತುಂಸ್ಸುಕಾ ನದಿಯ ಬಳಿ 220 ಮಿಲಿಯನ್ ಪೌಂಡ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿತ್ತು. ಗಂಟೆಗೆ 33, 500 ಮೈಲು ವೇಗದಲ್ಲಿ ಭೂಮಿಗೆ ಬಂದು ಅಪ್ಪಳಿಸಿಳಿಸಿ ಅನಾಹುತವೊಂದು ಸಂಭವಿಸಿತ್ತು. ಇಪ್ಪತ್ತೆಂಟು ಸಾವಿರ ಅಡಿ ಉದ್ದದ ಈ ಕ್ಷುದ್ರಗ್ರಹ 44,500 ಡಿಗ್ರಿ ಫ್ಯಾರನ್ ಹೀಟ್ ಉಷ್ಣತೆಯನ್ನು ಹೊಂದಿದ್ದ ಕಾರಣ, ತೋತ್ಸುಕಾ ಪ್ರದೇಶದ 2,150 ಚ.ಕಿ.ಮೀ ಪ್ರದೇಶದ ಸರಿಸುಮಾರು 80 ಮಿಲಿಯನ್ ಮರಗಳು ನಾಶವಾಗಿದ್ದವು.

ವಿಶ್ವ ಕ್ಷುದ್ರಗ್ರಹ ದಿನದ ಮಹತ್ವ ಹಾಗೂ ಆಚರಣೆ:

ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದರಿಂದ ಉಂಟಾಗುವ ಅಪಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವ ಪೂರ್ಣದ್ದಾಗಿದೆ. ಹೀಗಾಗಿ ಈ ದಿನದಂದು ವಿಶ್ವದಾದಂತ್ಯ ಉಪನ್ಯಾಸಗಳು ವಸ್ತುಪ್ರದರ್ಶನ ಮತ್ತು ಭಿತ್ತಿ ಚಿತ್ರಗಳ ಪ್ರದರ್ಶನನಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ