AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happiness Tips : ಜೀವನದಲ್ಲಿ ಸದಾ ಖುಷಿಯಾಗಿರಲು ಏನ್ ಮಾಡ್ಬೇಕು? ಇಲ್ಲಿವೆ ಸರಳ ಸೂತ್ರಗಳು

ಜೀವನದಲ್ಲಿ ಖುಷಿ ಹಾಗೂ ನೆಮ್ಮದಿಯಿಂದ ಇರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಎಲ್ಲರಿಗೂ ಆ ರೀತಿಯ ಬದುಕು ಸಿಗುವುದಿಲ್ಲ. ಕೆಲವರು ತಮ್ಮ ಖುಷಿಯನ್ನು ಬೇರೆಯವರಲ್ಲಿ ಕಂಡುಕೊಳ್ಳುತ್ತಾರೆ. ಆದರೆ ದಿನನಿತ್ಯವು ಸಂತೋಷವಾಗಿರಬೇಕೆಂದರೆ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವುದು ಉತ್ತಮ. ಜೀವನದಲ್ಲಿ ಏಕಾಂಗಿಯಾಗಿದ್ದರೂ ಈ ಟಿಪ್ಸ್ ಪಾಲಿಸಿದರೆ ಖುಷಿಯಾಗಿರಲು ಸಾಧ್ಯ.

Happiness Tips : ಜೀವನದಲ್ಲಿ ಸದಾ ಖುಷಿಯಾಗಿರಲು ಏನ್ ಮಾಡ್ಬೇಕು? ಇಲ್ಲಿವೆ ಸರಳ ಸೂತ್ರಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 07, 2025 | 11:14 AM

Share

ಸಂತೋಷ ಎಲ್ಲರಿಗೂ ಬೇಕು. ಹೌದು, ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಾನು ಖುಷಿಯಾಗಿರಬೇಕು ಬಯಸುತ್ತಾನೆ. ಕೆಲವರು ಸಂತೋಷವಾಗಿರಲು ಹೊಸ ಬಟ್ಟೆಗಳು, ಬೇಕೆನಿಸಿದ್ದನ್ನು ಖರೀದಿ ಮಾಡಿ ಅದರಲ್ಲೇ ಖುಷಿ ಕಾಣುತ್ತಾರೆ. ಅದಲ್ಲದೇ, ಬೇರೆಯವರನ್ನು ನೋಡಿ ಬದುಕಿದರೆ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ. ಈ ಕೆಲವು ವಿಷಯಗಳನ್ನು ಅಳವಡಿಸಿಕೊಂಡರೆ ಸಂತೋಷದಿಂದ ಇರಲು ಸಾಧ್ಯವಂತೆ.

  • ಹೆಚ್ಚು ತಲೆಕೆಡಿಸಿಕೊಳ್ಳಬೇಡಿ : ಜೀವನದಲ್ಲಿ ನೀವು ಹೇಗಿದ್ದರೂ ಮಾತನಾಡುತ್ತಾರೆ. ಕೆಲವರಿಗೆ ತಾವು ಏನಾದರೂ ಮಾಡಿದರೆ ನಮ್ಮ ಬಗ್ಗೆ ಎಂದು ಅಂದುಕೊಳ್ಳುತ್ತಾರೋ ಎನ್ನುವುದಿರುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವವರು ಇದ್ದಾರೆ. ಆದರೆ ಬೇಡದ ಆಲೋಚನೆಗಳು ಇಂದಿನ ಖುಷಿಯನ್ನು ಕಿತ್ತುಕೊಳ್ಳುತ್ತವೆ. ಹೀಗಾಗಿ ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇಂದಿನ ದಿನವನ್ನು ಖುಷಿಯಿಂದ ಕಳೆಯಿರಿ.
  • ಇವತ್ತಿದ್ದಂತೆ ನಾಳೆ ಇರಲ್ಲ ಎಂಬುದು ಅರಿವಿರಲಿ: ಇವತ್ತು ನಾವು ಕಷ್ಟದ ಜೀವನ ನಡೆಸುತ್ತಿರಬಹುದು. ನಾಳೆಯೂ ಕೂಡ ಇದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದುಕಿನಲ್ಲಿ ಎದುರಾಗುವ ಕಷ್ಟ, ತೊಂದರೆ ಎಲ್ಲವೂ ಕ್ಷಣಿಕ. ಇವತ್ತು ಇದ್ದಂತೆ ನಾಳೆ ಇರಲ್ಲ. ಸಮಯ ಕಳೆದಂತೆ ಕಷ್ಟಗಳು ದೂರವಾಗಿ ಒಳ್ಳೆಯ ದಿನ ಬರುತ್ತದೆ ಎನ್ನುವ ನಂಬಿಕೆಯಿರಲಿ. ಏನೇ ಎದುರಾದರೂ ದಿಟ್ಟತನದಿಂದ ಎದುರಿಸಿ ಮುನ್ನುಗ್ಗುವ ಛಲವಿದ್ದರೆ ಇವತ್ತಿನ ದಿನವನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯ.
  • ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಿಕೊಳ್ಳಿ : ಸಮಸ್ಯೆಗಳಿಲ್ಲದ ವ್ಯಕ್ತಿಯೇ ಇಲ್ಲ. ಆದರೆ ಸಮಸ್ಯೆಯಲ್ಲೇ ಮುಳುಗುವುದು ಜೀವನವಾಗಬಾರದು. ಯಾವುದೇ ಸಂಕಷ್ಟ, ಸಮಸ್ಯೆ, ಸವಾಲುಗಳೇ ಇರಲಿ, ಬುದ್ಧಿವಂತಿಕೆಯಿಂದಲೇ ಪರಿಹರಿಸಿಕೊಳ್ಳುವುದು ಗೊತ್ತಿರಬೇಕು. ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸಿದರೆ ಜೀವನದಲ್ಲಿ ನೆಮ್ಮದಿಯಿಂದ ಖುಷಿಯಾಗಿರಲು ಸಾಧ್ಯ.
  • ಪರಿಪೂರ್ಣತೆ ಹಿಂದೆ ಓಡಬೇಡಿ : ಜೀವನದಲ್ಲಿ ಯಾರು ಕೂಡ ಪರಿಪೂರ್ಣರಾಗಿಲ್ಲ. ಪರಿಪೂರ್ಣವಾಗಿರುವ ಒಳ್ಳೆಯ ವಿಷಯವಾಗಿದ್ದರೂ ಅದರ ಹಿಂದೆ ಹೋಗುವ ವ್ಯಕ್ತಿಯೂ ಖುಷಿಯಾಗಿರಲ್ಲ.. ಇದು ಒತ್ತಡ ಹಾಗೂ ಆತಂಕವನ್ನು ಉಂಟು ಮಾಡುತ್ತದೆ. ಹೀಗಾಗಿ ಮಾಡುವ ಕೆಲಸವು ಪರ್ಫೆಕ್ಟ್ ಆಗಿರಬೇಕೆನ್ನುವ ಮನಸ್ಥಿತಿ ಬೇಡ. ಏನಾದರೂ ತಪ್ಪಾದರೆ ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿ ಬದಲಾವಣೆ ಮಾಡಿಕೊಳ್ಳಿ. ಈ ಸಲಹೆ ಅನುಸರಿಸಿದರೆ ಜೀವನದಲ್ಲಿ ಖುಷಿ ಕಾಣಲು ಸಾಧ್ಯ.
  • ನಿಯಮಿತ ವ್ಯಾಯಾಮ ಮಾಡುವ ಅಭ್ಯಾಸವಿರಲಿ : ತಮ್ಮ ದಿನಚರಿಯಲ್ಲಿ ನಿಯಮಿತ ದೈಹಿಕ ಚಟುವಟಿಕೆಯತ್ತ ಗಮನ ಕೊಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಿ ಆರೋಗ್ಯದೊಂದಿಗೆ ಚೈತನ್ಯವನ್ನು ಹೆಚ್ಚಿಸುತ್ತದೆ. ಇದರಿಂದ ನೆಮ್ಮದಿ ಹಾಗೂ ಸಂತೋಷವಾಗಿರಲು ಸಾಧ್ಯವಾಗುತ್ತದೆ.
  • ನೀವು ನೀವಾಗಿರುವುದು ಕಲಿಯಿರಿ : ಬೇರೆಯವರಿಗಾಗಿ ಬದುಕುವುದಕ್ಕಿಂತ ನಮಗಾಗಿ ನಾವು ಬದುಕುವುದರಲ್ಲಿ ಒಂದು ಅರ್ಥವಿದೆ. ಬೇರೆಯವರ ಮೇಲೆ ಅತಿಯಾದ ನಿರೀಕ್ಷೆಯಿಟ್ಟುಕೊಳ್ಳುವುದಕ್ಕಿಂತ ನಮ್ಮಲ್ಲೇ ನಾವು ಸಂತೋಷ ಕಾಣಬೇಕು. ಹೀಗಾಗಿ ಬೇರೆಯವರು ಏನು ತಿಳಿದುಕೊಳ್ಳುತ್ತಾರೆ ಏನು ಹೇಳ್ತಾರೆ ಎನ್ನುವ ಯೋಚನೆಯನ್ನು ಬಿಟ್ಟು ಬಿಡಿ. ನೀವು ನಿಮ್ಮ ಮನಸ್ಸಿಗೆ ಖುಷಿಯಾಗುವಂತೆ ಪ್ರಾಮಾಣಿಕವಾಗಿ ಬದುಕಿ, ಇದರಿಂದ ನಿಜವಾದ ಸಂತೋಷ ಸಿಗುತ್ತದೆ.
  • ಸ್ವಯಂ ಕಾಳಜಿ ವಹಿಸಿ : ತಾವು ಖುಷಿಯಾಗಿರಬೇಕೆಂದರೆ ತಮ್ಮ ಬಗ್ಗೆ ತಾವೇ ಕಾಳಜಿ ವಹಿಸುವುದು ಅತ್ಯಗತ್ಯ ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ತಮ್ಮನ್ನು ತಾವು ಒತ್ತಡಕ್ಕೆ ಒಳಪಡಿಸಬೇಡಿ. ನಿಯಮಿತ ನಿದ್ದೆ, ಆಹಾರ ಸೇವನೆ, ಮನಸ್ಸು ಶಾಂತವಾಗಿರಲಿ. ಸ್ವಯಂ ಕಾಳಜಿಗೆ ಹೆಚ್ಚು ಆದ್ಯತೆ ನೀಡಿದರೆ ಖುಷಿಯಾಗಿರಬಹುದು.
  • ಸಹಾನುಭೂತಿ ಹಾಗೂ ದಯಾಗುಣವಿರಲಿ : ಕೆಲವರು ತಮ್ಮ ಜೀವನದ ಬಗ್ಗೆ ಯೋಚಿಸುತ್ತಾರೆ. ಈ ವ್ಯಕ್ತಿಗಳು ಎಂದಿಗೂ ಖುಷಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಬೇರೆಯವರಿಗೆ ಮಾಡುವ ಸಹಾಯ ಮನೋಭಾವ ಹಾಗೂ ದಯಾಗುಣವೂ ಖುಷಿ ನೀಡುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣದೊಂದಿಗೆ ನಮ್ಮ ತಪ್ಪುಗಳನ್ನು ಹಾಗೂ ಅಪೂರ್ಣತೆಗಳನ್ನು ಒಪ್ಪಿಕೊಳ್ಳುತ್ತೇವೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವು ಸಿಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ