ನಿಮ್ಮ ಮಗ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ಪತ್ತೆ ಮಾಡುವುದು ಹೇಗೆ?

ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ಎನ್ನುವ ಹಾಡಿದೆ. ಆದರೆ ಈ ಪ್ರೀತಿಗೆ ಕಣ್ಣಿಲ್ಲ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಅನ್ನೋದು ಗೊತ್ತಿಲ್ಲ. ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ವಯಸ್ಸಿನ ಅಂತರವು ಬೇಕಾಗಿಲ್ಲ. ಈಗಿನ ಕಾಲದಲ್ಲಿ ಲವ್ ಗೆ ಗ್ಯಾರಂಟಿನೂ ಇಲ್ಲ, ವ್ಯಾರಂಟಿ ನೂ ಇಲ್ಲ. ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಾದಿ ತಪ್ಪುವವರು ಹೆಚ್ಚಾಗಿದ್ದಾರೆ. ಒಂದು ವೇಳೆ ನಿಮ್ಮ ಮಗನಲ್ಲಿ ಈ ರೀತಿ ವರ್ತನೆಗಳು ಕಾಣಿಸುತ್ತಿವೆ ಎಂದು ಗಮನಿಸಿದರೆ ಹುಡುಗಿಯ ಹಿಂದೆ ಬಿದ್ದಿದ್ದಾನೆಯೇ ಇಲ್ಲವೋ ಎಂದು ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಮಗ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ಪತ್ತೆ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2024 | 3:41 PM

ಪ್ರೀತಿ ಎರಡು ಮನಸ್ಸುಗಳ ಮಿಲನ. ಆದರೆ ಈ ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತು ಕಾಣುವುದಿಲ್ಲ. ಯುವಕ ಯುವತಿಯರು ತಮ್ಮ ಪ್ರೀತಿಗಾಗಿ ಏನು ಮಾಡಲು ಬೇಕಾದರೂ ಸಿದ್ಧವಿರುತ್ತಾರೆ. ಲವ್ ನಲ್ಲಿ ಬಿದ್ದು ದಾರಿ ತಪ್ಪಿದರೆ ಎನ್ನುವ ಭಯ ಹೆತ್ತ ತಂದೆ ತಾಯಿಯರಿಗೆ ಇರುವುದು ಸಹಜ. ಹೀಗಾಗಿ ಮಕ್ಕಳು ಹದಿಹರೆಯಕ್ಕೆ ಬಂದಾಗ ಅವರ ಚಲನವಲನಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳ ವರ್ತನೆಯಲ್ಲಿ ಈ ಕೆಲವು ಬದಲಾವಣೆ ಆಗಿದ್ದರೆ ಅವರಿಗೆ ಯಾರ ಮೇಲೂ ಪ್ರೀತಿಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

  • ಪ್ರೀತಿಯಲ್ಲಿ ಬಿದ್ದವರು ತಮ್ಮ ಹೆಚ್ಚು ಸಮಯವನ್ನು ಪ್ರೀತಿಸುವ ಹುಡುಗ ಅಥವಾ ಹುಡುಗಿಯೊಂದಿಗೆ ಕಳೆಯಲು ಇಷ್ಟ ಪಡುತ್ತಾರೆ. ದಿನದ ಹೆಚ್ಚು ಸಮಯ ಫೋನ್ ಕೈಯಲ್ಲೇ ಹಿಡಿದು ಕುಳಿತು ಬಿಡುತ್ತಾರೆ. ಕಳೆದ ಕೆಲವು ದಿನಗಳಿಂದ ನಿಮ್ಮ ಮಗನು ಮಾಡಬೇಕಾದ ಕೆಲಸವನ್ನು ಬಿಟ್ಟು, ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದರೆ ಅವನು ಪ್ರೀತಿಯಲ್ಲಿ ಬಿದ್ದಿದ್ದಾನೆ ಎನ್ನುವುದನ್ನು ಅರಿತುಕೊಳ್ಳಿ.
  • ಪ್ರೀತಿಯಲ್ಲಿ ಬಿದ್ದವರಿಗೆ ನಿದ್ದೆ ಬರುವುದಿಲ್ಲ ಎಂದು ಹೇಳಿರುವುದನ್ನು ಕೇಳಿರಬಹುದು. ಆದರೆ ಕೆಲವರು ತಡರಾತ್ರಿಯವರೆಗೂ ಚಾಟಿಂಗ್ ಎಂದು ಬ್ಯುಸಿಯಾಗಿರುತ್ತದೆ. ಒಂದು ವೇಳೆ ನಿಮ್ಮ ಮಗ ಮೊಬೈಲ್ ನಲ್ಲಿ ಬಳಸುತ್ತಾ ತಡರಾತ್ರಿಯವರೆಗೂ ಎಚ್ಚರವಾಗಿದ್ದರೆ ಅದು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವುದರ ಸೂಚಕವಾಗಿದೆ.
  • ಪ್ರೀತಿಯಲ್ಲಿದ್ದರೆ ಹೆಚ್ಚು ಪ್ರೀತಿಯ ಹಾಡುಗಳನ್ನು ಕೇಳುವುದು, ಇಲ್ಲದಿದ್ದರೆ ಮನೆಯಲ್ಲಿ ಮದುವೆ ಹಾಗೂ ಪ್ರೀತಿ ವಿಚಾರದ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಈ ಲಕ್ಷಣಗಳು ನಿಮ್ಮ ಮಗನಲ್ಲಿ ಕಂಡು ಬಂದರೆ ನಿಮ್ಮ ಮಗನಿಗೆ ಯಾರದ್ದೋ ಮೇಲೆ ಪ್ರೀತಿಯಾಗಿದೆ ಎಂದು ತಿಳಿದುಕೊಳ್ಳಿ.
  • ಯಾರದೋ ಕಾಲ್ ಬಂದರೆ ಎಲ್ಲರ ಮುಂದೆಯೇ ಮಾತನಾಡುತ್ತಿದ್ದವರು, ಕಾಲ್ ಬಂದ ತಕ್ಷಣ ಅಲ್ಲಿಂದ ಎದ್ದು ಹೋಗುತ್ತಾರೆ ಅಥವಾ ಕಾಲ್ ಕಟ್ ಮಾಡಿ ಬಿಡುತ್ತಾರೆ. ಹೀಗೆನಾದರೂ ನಿಮ್ಮ ಮಗ ಮಾಡಿದರೆ, ಹುಡುಗಿಯ ಹಿಂದೆ ಬಿದ್ದಿದ್ದಾನೆ ಎನ್ನುವುದು ಪಕ್ಕಾ ಆದಂತೆಯೇ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ