ಶಂಖ ಪುಷ್ಪ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಒಂದಾಗಿದೆ. ಈ ಹೂವು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಈ ಹೂವು ಬುದ್ಧಿ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಬಳ್ಳಿ ರೂಪದಲ್ಲಿ ಬೆಳೆದು ಹೂವು ಬಿಡುವ ಈ ಗಿಡ, ಕೋನ್ ಫ್ಲವರ್ ಫ್ಯಾಬಾಸೀ ಸೇರಿದ ಒಂದು ಬಳ್ಳಿ. ಇವುಗಳನ್ನು ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯಲಾಗುತ್ತದೆ. ಶಂಖ ಪುಷ್ಪ ಹೂವು ವಿಷ್ಣುಕ್ರಾಂತ ಮರಕ್ಕೆ ಸೇರಿದೆ. ಅದಾಗ್ಯೂ ಈ ಹೂವನ್ನು ದೇವರ ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ದೇವರ ಪೂಜೆಗೆ ಮಾತ್ರವಲ್ಲದೇ ಶಂಖ ಪುಷ್ಪ ಹೂವು ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ರೈತರು ಶಂಖ ಪುಷ್ಪ ಬೆಳೆಯುವಲ್ಲಿ ಗಮನಹರಿಸುತ್ತಿದ್ದಾರೆ. ಆ ಮೂಲಕ ರೈತರು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಶಂಖ ಪುಷ್ಪವನ್ನು ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಒಮ್ಮೆ ಈ ಹೂವು ಬೆಳೆಯಲು ಆರಂಭಿಸಿದ ನಂತರ ವರ್ಷವಿಡೀ ಇಳುವರಿ ಬರುತ್ತದೆ. ಶಂಖ ಪುಷ್ಪ ಸಸ್ಯದ ಹೂವುಗಳು ಕೆಂಪು, ಬಿಳಿ ಮತ್ತು ನೀಲಿ ಬಣ್ಣದ್ದಾಗಿರುತ್ತದೆ. ಇದರ ಬೀಜಗಳು ಕಪ್ಪಾಗಿರುತ್ತದೆ.
ಶಂಖ ಪುಷ್ಪ ಹೂವಿನ ಬೆಳೆ
ಶಂಖ ಪುಷ್ಪ ಹೂವು ಉತ್ತಮ ಇಳುವರಿಯನ್ನು ನೀಡುತ್ತದೆ. ಇದಕ್ಕೆ ಫಲವತ್ತಾದ ಮತ್ತು ಹಗುರವಾದ ಮರಳು ಮಿಶ್ರಿತ ಮಣ್ಣಿನ ಅಗತ್ಯವಿದೆ. ಇದರ ಕೃಷಿಗೆ ಸಮಶೀತೋಷ್ಣ ವಾತಾವರಣ ಬೇಕು. ಮಳೆಗಾಲವನ್ನು ಶಂಖ ಪುಷ್ಪ ಹೂವು ಕೃಷಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಇದರ ಸಸ್ಯಗಳು ಬೇಸಿಗೆ ಮತ್ತು ಚಳಿಗಾಲದಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಶಂಖ ಪುಷ್ಪ ಹೂವು ಮೊಳಕೆಯೊಡೆಯಲು 20 ಡಿಗ್ರಿ ತಾಪಮಾನ ಬೇಕಾಗುತ್ತದೆ. ಇದರ ಸಸ್ಯ ಬೆಳವಣಿಗೆಗೆ 25 ರಿಂದ 30 ಡಿಗ್ರಿ ತಾಪಮಾನ ಬೇಕಾಗುತ್ತದೆ. ಆದಾಗ್ಯೂ, ಶಂಖ ಪುಷ್ಪಕ್ಕೆ ಕನಿಷ್ಠ 10 ಡಿಗ್ರಿ ಮತ್ತು ಗರಿಷ್ಠ 35 ಡಿಗ್ರಿ ತಾಪಮಾನ ಬೇಕು.
ಶಂಖ ಪುಷ್ಪ ಹೂವಿನ ವಿಧಗಳು
ಶಂಖ ಪುಷ್ಪ ಹವಾಮಾನಕ್ಕೆ ಅನುಗುಣವಾಗಿ ವಿವಿಧ ತಳಿಗಳಲ್ಲಿ ಬೆಳೆಸಬಹುದು. ಹೂವುಗಳ ಬಣ್ಣವನ್ನು ಆಧರಿಸಿದ ಮೂರು ಜಾತಿಗಳಿವೆ. ಬಿಳಿ, ನೀಲಿ ಮತ್ತು ಕೆಂಪು. ಈ ರೀತಿಯ ಸಸ್ಯಗಳು ಪೊದೆಯಂತೆ ಕಾಣುತ್ತವೆ. ಇದರ ಪೂರ್ಣವಾಗಿ ಬೆಳೆದ ಸಸ್ಯವು ಸಾಮಾನ್ಯ ಎತ್ತರವನ್ನು ಹೊಂದಿರುತ್ತದೆ. ಕೆಂಪು ಮತ್ತು ನೀಲಿ ಶಂಖ ಪುಷ್ಪ ಹೂವುಗಳೊಂದಿಗೆ ಸಣ್ಣ ಗಾತ್ರದ ಎಲೆಗಳನ್ನು ಹೊಂದಿರುತ್ತದೆ.
ಶಂಖ ಪುಷ್ಪ ಹೂವಿನ ಪ್ರಯೋಜನಗಳು
1. ಶಂಖ ಪುಷ್ಪ ಹೂವು, ಎಲೆ ಮತ್ತು ಬೆರುಗಳಿಂದ ಮಾಡಿದ ಪುಡಿಯನ್ನು ಸೇವಿಸಿದರೆ ಬುದ್ಧಿ ಶಕ್ತಿಯನ್ನು ಹೆಚ್ಚಿಸಬಹುದು. ಇದು ಕಾಲೋಚಿತ ಕಾಯಿಲೆಯಿಂದ ರಕ್ಷಿಸುತ್ತದೆ.
2. ಶಂಖ ಪುಷ್ಪದಲ್ಲಿ ಕಂಡುಬರುವ ಆರ್ಗನೆಲೋಲಿನ್ ಎಂಬ ವಸ್ತುವು ಮೆದುಳಿನ ಕಾರ್ಯದ ಮೇಲೆ ಕೆಲಸ ಮಾಡುತ್ತದೆ ಮತ್ತು ಮರೆವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಇದು ನಿದ್ರಾಹೀನತೆ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
4. ಗ್ಯಾಸ್ಟ್ರಿಕ್ ತೆಗೆದುಹಾಕಲು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮವನ್ನು ರಕ್ಷಿಸುತ್ತದೆ. ಉಸಿರಾಟದ ಕಾಯಿಲೆ ಮತ್ತು ಹೃದಯ ರೋಗಗಳನ್ನು ಗುಣಪಡಿಸುತ್ತದೆ.
5. ಮೂಗೇಟುಗಳು ಮತ್ತು ಮೂಳೆ ಊದಿಕೊಂಡಾಗ ಶಂಖ ಪುಷ್ಪದ ಎಲೆಯ ರಸವನ್ನು ಹಾಕಿ. ಇದರಿಂದ ಊತ ಕಡಿಮೆಯಾಗುತ್ತದೆ.
6. ಆಯುರ್ವೇದದಲ್ಲಿ ಹಲವು ಶತಮಾನಗಳಿಂದ ಇದನ್ನು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಮೂತ್ರ ವಿಸರ್ಜನೆ ಸಮಸ್ಯೆಗೆ ರಾಮಬಾಣವಾಗಿದೆ.
ಇದನ್ನೂ ಓದಿ:
Fruits: ವಿವಿಧ ಬಗೆಯ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ?
ಸರಿಯಾಗಿ ನಿದ್ರೆ ಮಾಡದೆ ಹೋದರೆ ಈ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಎಚ್ಚರ ಇರಲಿ