Chennaveera Kanavi Death: ನುಡಿದಂತೆ ನಡೆದರೂ ಕೆಲ ವಿಷಯಗಳಲ್ಲಿ ಅಚ್ಚರಿಗಳನ್ನು ಹುಟ್ಟಿಸಿದಿರಿ ಅಜ್ಜಾ

|

Updated on: Feb 16, 2022 | 6:22 PM

Chennaveera Kanavi Passes Away : "ಅಲ್ಲಾರೀ ನನ್ ಬೈಟ್ ತೆಗೆದುಕೊಂಡು ನೀವು ಟಿ.ಆರ್.ಪಿ. ಹೆಚ್ಚು ಮಾಡಿಕೊಳ್ತೀರಿ. ಅದರಿಂದ ನನಗೇನ್ರೀ ಲಾಭ? ನನಗ ಸಂಭಾವನೆ ಕೊಡೋದಾದ್ರ ಬೈಟ್ ಕೊಡ್ತೀನಿ ನೋಡ್ರೀ" ಅಂದುಬಿಡುತ್ತಿದ್ದರು. ಆದರೆ ಸಾಹಿತ್ತ್ಯಿಕ ಕಾರ್ಯಕ್ರಮಗಳ ವಿಚಾರವಾಗಿ ಮಾತ್ರ ಅವರ ವರ್ತನೆ ಹೀಗಿರುತ್ತಿರಲಿಲ್ಲ.’ ನರಸಿಂಹಮೂರ್ತಿ ಪ್ಯಾಟಿ

Chennaveera Kanavi Death: ನುಡಿದಂತೆ ನಡೆದರೂ ಕೆಲ ವಿಷಯಗಳಲ್ಲಿ ಅಚ್ಚರಿಗಳನ್ನು ಹುಟ್ಟಿಸಿದಿರಿ ಅಜ್ಜಾ
ಕವಿ ಚೆನ್ನವೀರ ಕಣವಿ
Follow us on

ಚೆನ್ನವೀರ ಕಣವಿ | Chennaveera Kanavi : ಇಂಥ ಹಿರಿಯ ಕವಿ ಒಮ್ಮೊಮ್ಮೆ ಅಚ್ಚರಿ ಹುಟ್ಟಿಸುವಂತೆ ನಡೆದುಕೊಂಡು ಬಿಡುತ್ತಿದ್ದರು..! ರಾಜಕಾರಣದ ವಿಚಾರವಾಗಿ ಯಾವತ್ತೂ ಅವರು ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ಕೆಲವೊಮ್ಮೆ ತಮಗೆ ಹತ್ತಿರವೆನಿಸಿದ ರಾಜಕಾರಣಿಗಳ ಪರ ವಕಾಲತ್ತು ವಹಿಸಿಬಿಡುತ್ತಿದ್ದರು. ಕಳೆದ ಬಾರಿ ಅರವಿಂದ ಬೆಲ್ಲದ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದುಬಿಟ್ಟಿದ್ದರು! ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರವನ್ನು ಓದಿದ್ದ ವೀಡಿಯೋ ಕೂಡ ವೈರಲ್ ಆಗಿತ್ತು. ಅದರಲ್ಲಿ ಬೆಲ್ಲದ ಮಂತ್ರಿಸ್ಥಾನಕ್ಕೆ ಅರ್ಹ ವ್ಯಕ್ತಿ, ಈ ಹಿನ್ನೆಲೆಯಲ್ಲಿ ಅವರಿಗೆ ಮಂತ್ರಿಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದರು. ಇನ್ನೂ  ಕೆಲ ವೇಳೆಯಂತೂ ಕಣವಿ ಅಜ್ಜ ಮುಗ್ಧ ಮಕ್ಕಳಂತೆ ವರ್ತಿಸುತ್ತಿದ್ದರು. ಒಮ್ಮೆ ಯಾವುದೋ ವಿಚಾರವಾಗಿ ಹೇಳಿಕೆ ಪಡೆಯೋದಕ್ಕೆ ಮನೆಗೆ ಬರುವುದಾಗಿ ಫೋನ್ ಮಾಡಿದೆ. ಊರಿನಿಂದ ಮೊಮ್ಮಕ್ಕಳು ಬಂದಿರುವುದಾಗಿಯೂ, ತಾವು ಮೊಮ್ಮಕ್ಕಳ ಜೊತೆಗೆ ಹೊರಗಡೆ ಸುತ್ತಾಡಲು ಬಂದಿರುವುದಾಗಿಯೂ ಹೇಳಿದ್ದರು.
ನರಸಿಂಹಮೂರ್ತಿ ಪ್ಯಾಟಿ, ಪರ್ತಕರ್ತ

*

(ಭಾಗ 5)

ಒಮ್ಮೆ ಪತ್ರಿಕೆಯೊಂದರ ಹಿರಿಯ ವರದಿಗಾರ ಫೋನ್ ಮಾಡಿ, ದೀಪಾವಳಿ ವಿಶೇಷಾಂಕಕ್ಕೆ ಕವನ ಬರೆದುಕೊಡಿ ಅಂದರು. ಕೂಡಲೇ ಆ ಕಡೆಯಿಂದ ಗಟ್ಟಿ ದನಿಯಲ್ಲಿ, “ಬರೀ ಕವನ ಬರೆಸಿಕೊಂಡ್ರ ಹ್ಯಾಂಗ್ರೀ? ಅದಕ್ಕೆ ಸಂಭಾವನೆ ಕೊಡಂಗಿಲ್ಲೇನು? ಮೊದಲು ಸಂಭಾವನೆ ಎಷ್ಟು ಕೊಡ್ತೀರಿ ಅನ್ನೋದನ್ನ ಹೇಳ್ರೀ. ಆಮ್ಯಾಲೆ ಎಂಥಾ ಕವನ ಬರೀಬೇಕು ಅಂತಾ ನಿರ್ಧಾರ ಮಾಡ್ತೀನಿ” ಅಂದುಬಿಟ್ಟಿದ್ದರು..! ಇನ್ನು ಟಿವಿ ಮಾಧ್ಯಮದವರಂತೂ ಅವರ ಸಮೀಪ ಹೋಗಲು ಹಿಂದೇಟು ಹಾಕುತ್ತಿದ್ದರು. ಯಾವುದಾದರೂ ವಿಚಾರಕ್ಕೆ ಬೈಟ್ ಬೇಕು ಅಂತಾ ಕೇಳಿದರೆ, “ಅಲ್ಲಾರೀ ನನ್ ಬೈಟ್ ತೆಗೆದುಕೊಂಡು ನೀವು ಟಿ.ಆರ್.ಪಿ. ಹೆಚ್ಚು ಮಾಡಿಕೊಳ್ತೀರಿ. ಅದರಿಂದ ನನಗೇನ್ರೀ ಲಾಭ? ನನಗ ಸಂಭಾವನೆ ಕೊಡೋದಾದ್ರ ಬೈಟ್ ಕೊಡ್ತೀನಿ ನೋಡ್ರೀ” ಅಂದುಬಿಡುತ್ತಿದ್ದರು.

ಭಾಗ 3  : Chennaveera Kanavi Death: ಲಂಬಾಣಿ ಭಾಷೆ, ಕುಣಿತದ ಮೋಡಿಗೆ ಒಳಗಾಗಿದ್ದ ಕವಿ ಕಣವಿ ಮನಸ್ಸು 

ಇಂಥ ಅನೇಕ ವಿಚಿತ್ರಗಳ ನಡುವೆಯೂ ಕಣವಿ ಅಜ್ಜ ವಿಭಿನ್ನವಾಗಿ ನಿಲ್ಲುತ್ತಾರೆ. ಯಾವುದೇ ಸಾಹಿತ್ಯಿಕ ಕಾರ್ಯಕ್ರಮಕ್ಕೆ ಹೋದರೂ ಗಂಟೆಗಟ್ಟಲೇ ಕುಳಿತುಕೊಂಡು, ಅದು ಮುಗಿದ ಬಳಿಕವಷ್ಟೇ ಅಲ್ಲಿಂದ ಮನೆಗೆ ಬರುವುದು ಅವರಲ್ಲಿನ ಸಾಹಿತ್ಯ ಬಗೆಗಿನ ನಿಷ್ಠೆ, ಬದ್ಧತೆಯನ್ನು ಎತ್ತಿ ತೋರಿಸುತ್ತಿತ್ತು. ಸಾಮಾನ್ಯವಾಗಿ ಅನಾರೋಗ್ಯವುಂಟಾದಾಗ ಕುಟುಂಬಸ್ಥರು ಹೇಳಿದ ಕೂಡಲೇ ಆಸ್ಪತ್ರೆಗೆ ಹೋಗಲು ಮನಸಾರೆ ಒಪ್ಪಿಕೊಳ್ಳುತ್ತಿದ್ದರಂತೆ. ಆದರೆ ಈ ಬಾರಿ ಅದೇಕೋ ಹಿಂದೇಟು ಹಾಕಿದರಂತೆ. ಆಸ್ಪತ್ರೆಗೆ ದಾಖಲಾದ ಬಳಿಕವೂ ಮನೆಗೆ ಹೋಗೋಣ ಎಂದು ಪಟ್ಟು ಹಿಡಿದಿದ್ದರಂತೆ. ಈ ಬಾರಿ ಅವರ ಅಂತರಾತ್ಮಕ್ಕೆ ಏನಾದರೂ ಸೂಚನೆ ಸಿಕ್ಕಿತ್ತೇ? ಗೊತ್ತಿಲ್ಲ.

ಜೀವನದುದ್ದಕ್ಕೂ ಕವಿತೆಯನ್ನೇ ಬದುಕಿ, ಕವಿತೆಯನ್ನೇ ಉಂಡು, ಕವಿತೆಯನ್ನೇ ಉಸಿರಾಗಿಸಿಕೊಂಡ ಮಳೆಗಾಲದ ಕವಿ ನಮ್ಮೆನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ನೂರರ ಗಡಿ ದಾಟುತ್ತಾರೆ ಅಂದುಕೊಂಡಿದ್ದ ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದಾರೆ. ದೈಹಿಕವಾಗಿ ಅವರೇನೋ ನಮ್ಮೊಂದಿಗೆ ದೂರವಾಗಿದ್ದಾರೆ. ಆದರೆ ಅವರ ಕಾವ್ಯ, ಕನ್ನಡ ಭಾಷೆಯ ಮೇಲಿನ ಪ್ರೀತಿ ಯಾವತ್ತೂ ನಿತ್ಯನೂತನ. ಕಣವಿ ಅಜ್ಜ ಕೊನೆಯವರೆಗೂ ನುಡಿದಂತೆಯೇ ನಡೆದರು.

(ಮುಗಿಯಿತು)

ಭಾಗ 4 : Chennaveera Kanavi Death: ‘ಗದ್ಯವನ್ನು ನಾನು ಆಮೆಗತಿಯಲ್ಲಿ ಬರೆಯಲು ಶುರು ಮಾಡಿದ್ದೇನೆ’ ಎಂದಿದ್ದರು ಚೆನ್ನವೀರ ಕಣವಿ

‘ಚೆಂಬೆಳಕಿಗೆ ನಮನ’ ಎಲ್ಲಾ ಲೇಖನಗಳನ್ನು ಇಲ್ಲಿ ಓದಿ : https://tv9kannada.com/tag/chennaveera-kanavi-and-his-literary-work

 

Published On - 6:12 pm, Wed, 16 February 22