LIC Adharshila Plan: ಮಹಿಳೆಯರಿಗಾಗಿಯೇ ಇರುವ ಈ ಎಲ್​ಐಸಿ ಪ್ಲಾನ್​ನ ಪಾಲಿಸಿಯಿಂದ ಸಿಗಲಿದೆ ಗರಿಷ್ಠ 30 ಲಕ್ಷ ರೂಪಾಯಿ

| Updated By: Srinivas Mata

Updated on: Jan 14, 2022 | 2:55 PM

ಭಾರತೀಯ ಜೀವ ವಿಮಾ ನಿಗಮದ ಆಧಾರ್ ಶಿಲಾ ಜೀವ ವಿಮಾ ನಿಗಮದ ಬಗ್ಗೆ ಮಾಹಿತಿಯನ್ನು ಒಳಗೊಂಡ ವಿವರಣೆ ಈ ಲೇಖನದಲ್ಲಿ ಇದೆ. ಈ ಯೋಜನೆ ಮಹಿಳೆಯರಿಗಾಗಿಯೇ ಇದೆ.

LIC Adharshila Plan: ಮಹಿಳೆಯರಿಗಾಗಿಯೇ ಇರುವ ಈ ಎಲ್​ಐಸಿ ಪ್ಲಾನ್​ನ ಪಾಲಿಸಿಯಿಂದ ಸಿಗಲಿದೆ ಗರಿಷ್ಠ 30 ಲಕ್ಷ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ದೇಶದ ಅತಿ ದೊಡ್ಡ ವಿಮೆ ಕಂಪೆನಿಯಾದ ಎಲ್​ಐಸಿ ಹೊಸ ವಿಮೆ ಯೋಜನೆಗಳನ್ನು ತರುತ್ತಲೇ ಇದೆ. ಈ ಬಾರಿ ಮಹಿಳೆಯರಿಗಾಗಿ ತಂದಿರುವ ವಿಶೇಷ ವಿಮಾ ಯೋಜನೆ ಹೆಚ್ಚು ಜನಪ್ರಿಯ ಆಗುತ್ತಿದೆ. ಈ ಯೋಜನೆಯ ಹೆಸರು ‘ಆಧಾರ್ ಶಿಲಾ’ (ಎಲ್‌ಐಸಿ ಆಧಾರಶಿಲಾ ಯೋಜನೆ). ಅದರ ಹೆಸರಿನೊಂದಿಗೆ ಆಧಾರ್ ಲಿಂಕ್ ಮಾಡುವ ವಿಶೇಷ ಉದ್ದೇಶವಿದೆ. ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು ಮಾತ್ರ ಈ ಪಾಲಿಸಿಯನ್ನು ಖರೀದಿಸಬಹುದು. ಈ ಯೋಜನೆಯನ್ನು ಫೆಬ್ರವರಿ 1, 2020ರಂದು ಪ್ರಾರಂಭಿಸಲಾಯಿತು. ಲೈಫ್ ಕವರ್ ಜತೆಗೆ ಈ ಪಾಲಿಸಿಯು ಉಳಿತಾಯವನ್ನೂ ಒದಗಿಸುತ್ತದೆ. ಈ ಪಾಲಿಸಿಯಲ್ಲಿ ಮಹಿಳೆ ದಿನಕ್ಕೆ 29 ರೂಪಾಯಿ ಹೂಡಿಕೆ ಮಾಡಿದರೆ, ಪಾಲಿಸಿಯ ಮೆಚ್ಯೂರಿಟಿಯಲ್ಲಿ 4 ಲಕ್ಷ ರೂಪಾಯಿ ಪಡೆಯುತ್ತಾರೆ. ಈ ಅವಧಿಯಲ್ಲಿ ಯೋಜನೆಯಲ್ಲಿ ಸಾಲವನ್ನು ಪಡೆಯಬಹುದು.

ಯೋಜನೆಯನ್ನು ಎಷ್ಟು ಸಮಯ ತೆಗೆದುಕೊಳ್ಳಬಹುದು?
8 ರಿಂದ 55 ವರ್ಷ ವಯಸ್ಸಿನ ಯಾವುದೇ ಮಹಿಳೆ ಈ ಪಾಲಿಸಿಯನ್ನು ಖರೀದಿಸಬಹುದು. ಇದನ್ನು 10 ವರ್ಷಗಳ ಅವಧಿಗೆ ಖರೀದಿಸಬಹುದು. ಗರಿಷ್ಠ ಅವಧಿ 20 ವರ್ಷಗಳು. ಮೆಚ್ಯೂರಿಟಿ ಹೊತ್ತಿಗೆ ಮಹಿಳೆಯ ವಯಸ್ಸು 70 ವರ್ಷಗಳಿಗಿಂತ ಹೆಚ್ಚಿರಬಾರದು.

ವಿಮಾ ಮೊತ್ತ
ಈ ಯೋಜನೆಯಡಿ ಕನಿಷ್ಠ 75 ಸಾವಿರ ವಿಮೆಯನ್ನು ಪಡೆಯಬಹುದು ಮತ್ತು ಗರಿಷ್ಠ ಮೊತ್ತ 30 ಲಕ್ಷ ರೂಪಾಯಿ ದೊರೆಯುತ್ತದೆ. ಪಾಲಿಸಿದಾರರು ಅಪಘಾತದ ಪ್ರಯೋಜನವನ್ನು ಇದರಲ್ಲಿ ಪಡೆಯಬಹುದು.

ಪ್ರೀಮಿಯಂ ಎಷ್ಟು ಇರುತ್ತದೆ
ಮಹಿಳೆಯು 20 ವರ್ಷ ವಯಸ್ಸಿನವರಾಗಿರುವಾಗ ಮತ್ತು ಪಾಲಿಸಿ ಅವಧಿಯು 20 ವರ್ಷಗಳು ಮತ್ತು 3 ಲಕ್ಷ ರೂಪಾಯಿ ವಿಮೆ ಮಾಡಿದ್ದರೆ ವಾರ್ಷಿಕವಾಗಿ ಸುಮಾರು 10,649 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ ಮುಂದಿನ ವರ್ಷ ಈ ಪ್ರೀಮಿಯಂ ರೂ. 10,868ಕ್ಕೆ ಆಗಲಿದೆ.

ಮುಕ್ತಾಯ ಲಾಭ
ಮೆಚ್ಯೂರಿಟಿಯಲ್ಲಿ 4 ಲಕ್ಷ ರೂಪಾಯಿ ಸಿಗುತ್ತದೆ. ಸಮ್ ಅಶ್ಯೂರ್ಡ್​ ರೂಪದಲ್ಲಿ ಮೊತ್ತ 2 ಲಕ್ಷ ಮತ್ತು ಬಾಕಿ ಮೊತ್ತವು ಲಾಯಲ್ಟಿ ಬೋನಸ್ ಆಗಿರುತ್ತದೆ.

ಪ್ರೀಮಿಯಂ ಪಾವತಿ
ಈ ಯೋಜನೆಯಲ್ಲಿ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು. ನೀವು ಸಮಯಕ್ಕೆ ಪ್ರೀಮಿಯಂ ಪಾವತಿಸಲು ಮರೆತರೆ 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಆದರೆ ನೀವು ಮಾಸಿಕ ಆಧಾರದ ಮೇಲೆ ಪ್ರೀಮಿಯಂ ಪಾವತಿಸಲು ಆಯ್ಕೆ ಮಾಡಿದರೆ 15 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ.

ನಗದು ಲಾಭ
ಪಾಲಿಸಿದಾರರು ಪಾಲಿಸಿಯನ್ನು ಪ್ರಾರಂಭಿಸಿದ 5 ವರ್ಷಗಳೊಳಗೆ ಮರಣ ಹೊಂದಿದರೆ ವಿಮಾ ಮೊತ್ತಕ್ಕೆ ಸಮನಾದ ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ ಇದರ ನಂತರ ಸಾವು ಸಂಭವಿಸಿದರೆ ನಾಮಿನಿಯು ವಿಮಾ ಮೊತ್ತ ಮತ್ತು ಲಾಯಲ್ಟಿ ಬೋನಸ್ ಅನ್ನು ಸಹ ಪಡೆಯುತ್ತಾರೆ.

ಒಮ್ಮೆ ವಿಲೇವಾರಿ
ಮುಕ್ತಾಯದ ನಂತರ ನೀವು ಸಂಪೂರ್ಣ ಪಾವತಿಯನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ಪಡೆಯಬಹುದು.

ಪಾಲಿಸಿ ಸರೆಂಡರ್
ಸತತ ಎರಡು ವರ್ಷಗಳ ಪ್ರೀಮಿಯಂ ಪಾವತಿಯ ನಂತರ ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ಸರೆಂಡರ್ ಮಾಡಬಹುದು.

ಇದನ್ನೂ ಓದಿ: LIC: ಎಲ್​ಐಸಿಯಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆ ಪರಿಚಯ