LIC: ಎಲ್ಐಸಿಯಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆ ಪರಿಚಯ
ಭಾರತೀಯ ಜೀವ ವಿಮಾ ನಿಗಮದಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆಯನ್ನು ಪರಿಚಯಿಸಲಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ಸೋಮವಾರದಿಂದ ನಾನ್- ಲಿಂಕ್ಡ್, ನಾನ್- ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಜೀವ ವಿಮೆ ಯೋಜನೆಯನ್ನು ಪರಿಚಯಿಸಲಾಗಿದೆ. ಎಲ್ಐಸಿ ಇನ್ನೂ ಮುಂದುವರಿದು, ಮಹಿಳೆಯರಿಗೆ ವಿಶೇಷ ಪ್ರೀಮಿಯಂ ದರವನ್ನು ಇರಿಸಿದೆ ಎಂದು ತಿಳಿಸಿದೆ ಮತ್ತು ತೃತೀಯ ಲಿಂಗಿಗಳಿಗೂ ಈ ಪ್ಲಾನ್ನಲ್ಲಿ ಅವಕಾಶ ನೀಡಲಾಗಿದೆ. ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಿಂದ ಶುರುವಾಗುವಂತೆ ಯೋಜನೆ ಧನ್ ರೇಖ ಪ್ರಾಥಮಿಕ ಸಮ್ ಅಶ್ಯೂರ್ಡ್ ಅನ್ನು ನಿಯಮಿತ ವಿರಾಮದಲ್ಲಿ ಉಳಿವಿನ ಅನುಕೂಲವಾಗಿ ನೀಡುತ್ತದೆ.
ಪಾಲಿಸಿ ಪಕ್ವ ಆಗುವಾಗ ಪಾಲಿಸಿದಾರರು ಪೂರ್ತಿಯಾಗಿ ಸಮ್ ಅಶ್ಯೂರ್ಡ್ ವಾಪಸ್ ಪಡೆಯುತ್ತಾರೆ. ಅದರಲ್ಲಿ ಮನಿ ಬ್ಯಾಕ್ ಮೊತ್ತ ಜತೆಗೆ ಸಂಚಿತ ಖಾತ್ರಿಯ ಸೇರ್ಪಡೆಯನ್ನು ಕಳೆಯದೆ ನೀಡಲಾಗುತ್ತದೆ. ಒಂದೇ ಪ್ರೀಮಿಯಂ ಸಾವಿಗೆ ಸಂಬಂಧಿಸಿದರಂತೆ ಸಮ್ ಅಶ್ಯೂರ್ಡ್ ಬಂದು, ಪ್ರಾಥಮಿಕ ಸಮ್ ಅಶ್ಯೂರ್ಡ್ ಹಾಗೂ ಖಾತ್ರಿ ಸೇರ್ಪಡೆಯೂ ಸೇರಿ ಶೇ 125ರಷ್ಟಾಗುತ್ತದೆ.
ಈ ಪ್ಲಾನ್ ಅಡಿಯಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ ರೂ. 2 ಲಕ್ಷ. ಗರಿಷ್ಠ ಸಮ್ ಅಶ್ಯೂರ್ಡ್ಗೆ ಯಾವುದೇ ಗರಿಷ್ಠ ಇಲ್ಲ. ಈ ಯೋಜನೆಯಲ್ಲಿ ಸೇರ್ಪಡೆ ಆಗಬೇಕು ಅಂದರೆ ಕನಿಷ್ಠ 90 ದಿನದಿಂದ 8 ವರ್ಷದ ವಯಸ್ಸು ಹಾಗೂ ಗರಿಷ್ಠ ವಯಸ್ಸು 35 ವರ್ಷದಿಂದ 55 ವರ್ಷವಾಗಿದ್ದು, ಅದು ಪಾಲಿಸಿಯನ್ನು ಆಯ್ಕೆ ಮಾಡಿಕೊಂಡ ಅವಧಿಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: LIC Jeevan Shanti Policy: ಈ ಇನ್ಷೂರೆನ್ಸ್ ಪ್ಲಾನ್ ಮೂಲಕ ಜೀವನ ಪೂರ್ತಿ ಪೆನ್ಷನ್ ಪಡೆಯಿರಿ