AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

State Bank Of India: ಜನ್​ಧನ್, ಪ್ರಾಥಮಿಕ ಉಳಿತಾಯ ಖಾತೆದಾರರಿಂದ ರೂ. 346 ಕೋಟಿ ಸಂಗ್ರಹಿಸಿದ ಎಸ್​ಬಿಐ

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಜನ್​ ಧನ್ ಖಾತೆ ಹಾಗೂ ಪ್ರಾಥಮಿಕ ಉಳಿತಾಯ ಖಾತೆದಾರರಿಂದ ರೂ. 346 ಕೋಟಿ ಸಂಗ್ರಹಿಸಲಾಗಿದೆ. ಆ ಬಗ್ಗೆ ಇನ್ನಷ್ಉ ವಿವರವಾದ ಮಾಹಿತಿ ಈ ಲೇಖನದಲ್ಲಿದೆ.

State Bank Of India: ಜನ್​ಧನ್, ಪ್ರಾಥಮಿಕ ಉಳಿತಾಯ ಖಾತೆದಾರರಿಂದ ರೂ. 346 ಕೋಟಿ ಸಂಗ್ರಹಿಸಿದ ಎಸ್​ಬಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 14, 2021 | 10:47 PM

ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಜನ್ ಧನ್ ಖಾತೆಗಳು ಸೇರಿದಂತೆ ಪ್ರಾಥಮಿಕ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಂದ ಉಚಿತ ಸೇವೆಗಳನ್ನು ಮೀರಿದಂತೆ ಹೆಚ್ಚುವರಿ ಸೇವೆಗಳ ರೂಪದಲ್ಲಿ ನೀಡಿದ್ದಕ್ಕೆ 2017-18ರಿಂದ 2021ರ ಅಕ್ಟೋಬರ್​ವರೆಗೆ ಸುಮಾರು 346 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ಸಂಸತ್​ನಲ್ಲಿ ತಿಳಿಸಿದೆ. “ಎಸ್‌ಬಿಐ ಮಾಹಿತಿ ನೀಡಿದಂತೆ 2017-18ರಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಕನಿಷ್ಠ ಅನುಮತಿಸಲಾದ ಉಚಿತ ಸೇವೆಗಳನ್ನು ಮೀರಿ ಗ್ರಾಹಕರಿಂದ ಬಂದ ಬೇಡಿಕೆಗೆ ಹೆಚ್ಚುವರಿ ಸೇವೆಗಳನ್ನು ಒದಗಿಸಲು ಎಸ್​ಬಿಐನಿಂದ 345.84 ಕೋಟಿ ರೂಪಾಯಿಗಳನ್ನು ವಿಧಿಸಲಾಗಿದೆ,” ಎಂದು ಹಣಕಾಸು ರಾಜ್ಯ ಸಚಿವ ಭಾಗವತ್ ಕರಡ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಆಗಸ್ಟ್ 30, 2020ರ CBDT ಮಾರ್ಗಸೂಚಿಗಳ ಪ್ರಕಾರ, ಎಲೆಕ್ಟ್ರಾನಿಕ್ ಮೋಡ್‌ಗಳಾದ RuPay ಡೆಬಿಟ್ ಕಾರ್ಡ್, UPI, UPI QR ಕೋಡ್ ಅನ್ನು ಬಳಸಿಕೊಂಡು ನಡೆಸಿದ ವಹಿವಾಟುಗಳ ಮೇಲೆ ಜನವರಿ 1, 2020ರಂದು ಅಥವಾ ನಂತರ ಸಂಗ್ರಹಿಸಲಾದ ಯಾವುದೇ ಶುಲ್ಕಗಳನ್ನು ಮರುಪಾವತಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಈ ವಿಧಾನಗಳ ಮೂಲಕ ಭವಿಷ್ಯದ ವಹಿವಾಟುಗಳ ಮೇಲೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆರ್​ಬಿಐ ಮಾರ್ಗಸೂಚಿಗಳ ಪ್ರಕಾರ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ತೆರೆಯಲಾದ ಖಾತೆಗಳು ಸೇರಿದಂತೆ ಪ್ರಾಥಮಿಕ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA)ಯು ಮೂಲಭೂತ ಕನಿಷ್ಠ ಸೌಲಭ್ಯಗಳನ್ನು ಉಚಿತವಾಗಿ ಮತ್ತು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವ ಅಗತ್ಯ ಇಲ್ಲದೆ ಒದಗಿಸುತ್ತದೆ.

ಆದರೆ, ತಾರತಮ್ಯರಹಿತ ರೀತಿಯಲ್ಲಿ ಸಮಂಜಸವಾದ ಮತ್ತು ಪಾರದರ್ಶಕ ಆಧಾರದ ಮೇಲೆ ನಿಗದಿತ ಮೂಲ ಕನಿಷ್ಠ ಸೇವೆಗಳನ್ನು ಮೀರಿ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳಿಗೆ ಬೆಲೆ ರಚನೆ ಸೇರಿದಂತೆ ಅಗತ್ಯಗಳನ್ನು ರೂಪಿಸಲು ಬ್ಯಾಂಕ್ ಸ್ವತಂತ್ರ ಎಂದು ಆರ್‌ಬಿಐ ಬ್ಯಾಂಕ್‌ಗೆ ಸಲಹೆ ನೀಡಿದೆ ಎಂದು ಕರಡ್ ಹೇಳಿದ್ದಾರೆ. ಗ್ರಾಹಕರು ತಮ್ಮ ಆಯ್ಕೆ ಆಧಾರದ ಮೇಲೆ ಅಂತಹ ಸೇವೆಗಳನ್ನು ಪಡೆಯಬಹುದು.

ಇದೇ ರೀತಿಯ ಪ್ರತ್ಯೇಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕರಡ್ ಮಾತನಾಡಿ, “ಎಸ್‌ಬಿಐ ತಿಳಿಸಿರುವಂತೆ, 2019-20 ರಿಂದ 2020-21ರ ಅವಧಿಯಲ್ಲಿ BC/CSPಯಲ್ಲಿ ಅನುಮತಿಸಿದ ಕನಿಷ್ಠ ಉಚಿತ ಸೇವೆಗಳನ್ನು ಮೀರಿ ಗ್ರಾಹಕರು ಬೇಡಿಕೆ ಇಟ್ಟಿರುವ ಹೆಚ್ಚುವರಿ ಸೇವೆಗಳನ್ನು ಒದಗಿಸಲು 224.8 ಕೋಟಿ ರೂ. ವಿಧಿಸಿದೆ,” ಎಂದು ಹೇಳಿದ್ದಾರೆ. ಎಸ್‌ಬಿಐ 2019-20ರಲ್ಲಿ ರೂ.152.42 ಕೋಟಿ ಮತ್ತು 2020-21ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರೂ.72.38 ಕೋಟಿ ಮೌಲ್ಯದ ಶುಲ್ಕಗಳನ್ನು ವಿಧಿಸಿದೆ ಮತ್ತು ಜನವರಿ 1, 2020ರಿಂದ ಸೆಪ್ಟೆಂಬರ್ 14, 2020ರ ಅವಧಿಯಲ್ಲಿ 90.19 ಕೋಟಿ ರೂಪಾಯಿಗಳನ್ನು ಎಸ್​ಬಿಐ ಮರುಪಾವತಿ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

“ಜನಧನ್ ಗ್ರಾಹಕರು ಬೇಡಿಕೆಯಿರುವ ಮೌಲ್ಯವರ್ಧಿತ ಸೇವೆಗಳಿಗೆ ನಿಗದಿತ ಸಂಖ್ಯೆಯ ಉಚಿತ ಸೇವೆಗಳನ್ನು ಮೀರಿದ ಮೇಲೆ ಶುಲ್ಕವನ್ನು ವಿಧಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ,” ಎಂದು ಕರಡ್ ಹೇಳಿದ್ದಾರೆ.

ಇದನ್ನೂ ಓದಿ: Personal loan: ಎಸ್​ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ