Trade Deficit: ದೇಶದ ವ್ಯಾಪಾರ ಕೊರತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಕಾರಣ ಏನೆಂಬ ವಿವರಣೆ ಇಲ್ಲಿದೆ

ಭಾರತದ ವ್ಯಾಪಾರ ಕೊರತೆಯು 2021ರ ನವೆಂಬರ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಅದಕ್ಕೆ ಕಾರಣ ಏನು ಎಂಬ ವಿವರಣೆ ಈ ಲೇಖನದಲ್ಲಿದೆ.

Trade Deficit: ದೇಶದ ವ್ಯಾಪಾರ ಕೊರತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಕಾರಣ ಏನೆಂಬ ವಿವರಣೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 15, 2021 | 8:32 AM

ಪೆಟ್ರೋಲಿಯಂ, ಚಿನ್ನ, ಬೆಳ್ಳಿ ಮತ್ತು ಖನಿಜ ಆಮದು ದೇಶದ ಒಟ್ಟಾರೆ ಒಳಬರುವ ಸಾಗಣೆಯನ್ನು ಶೇ 56.5ರಷ್ಟು 52.9 ಶತಕೋಟಿ ಡಾಲರ್‌ಗೆ ಹೆಚ್ಚಿಸಿದ್ದರಿಂದ ಭಾರತದ ವ್ಯಾಪಾರ ಕೊರತೆಯು ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 22.91 ಶತಕೋಟಿ ಯುಎಸ್​ಡಿಗೆ ವಿಸ್ತರಣೆ ಆಗಿದೆ. 2020ರ ನವೆಂಬರ್​ನಲ್ಲಿ ಇದ್ದ 10.19 ಶತಕೋಟಿ ಡಾಲರ್​ನಿಂದ ವ್ಯಾಪಾರ ಕೊರತೆಯು ದ್ವಿಗುಣಗೊಂಡಿದೆ. ಮಂಗಳವಾರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯು ಭಾರತದ ನವೆಂಬರ್ ಸರಕು ರಫ್ತು ಒಂಬತ್ತು ತಿಂಗಳ ಕನಿಷ್ಠ 30.04 ಶತಕೋಟಿ ಡಾಲರ್​ನಲ್ಲಿದೆ. ಆದರೆ ವರ್ಷಕ್ಕೆ ಶೇ 27.16 ಹೆಚ್ಚಾಗಿದೆ ಎಂದು ತೋರಿಸಿದೆ.

2021ರ ಏಪ್ರಿಲ್-ನವೆಂಬರ್​ನಲ್ಲಿ ವ್ಯಾಪಾರಿ ಆಮದು 384.34 ಬಿಲಿಯನ್ ಡಾಲರ್ ಆಗಿದ್ದು, ವರ್ಷದ ಹಿಂದಿನ ಅವಧಿಯಲ್ಲಿ 219.82 ಬಿಲಿಯನ್ ಡಾಲರ್ ಆಗಿತ್ತು. ಇದು ಶೇ 74.84ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಚಿನ್ನದ ಆಮದು ನವೆಂಬರ್‌ನಲ್ಲಿ ಶೇ 39.7ರಷ್ಟು ಏರಿಕೆಯಾಗಿ 4.2 ಶತಕೋಟಿ ಡಾಲರ್​ಗೆ ತಲುಪಿದೆ. ಪೆಟ್ರೋಲಿಯಂ ಆಮದು ಶೇ 132.4ರಷ್ಟು ಏರಿಕೆಯಾಗಿ 14.7 ಶತಕೋಟಿ ಡಾಲರ್​ಗೆ ತಲುಪಿದೆ. “ನವೆಂಬರ್ 2020ರ ಸರಕುಗಳ ವ್ಯಾಪಾರ ಕೊರತೆಯು ನವೆಂಬರ್ 2020ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಆದರೆ ನವೆಂಬರ್ 2019ರ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು H2 FY22ನಲ್ಲಿನ ಚಾಲ್ತಿ ಖಾತೆ ಕೊರತೆಯ ಗಾತ್ರದ ಪರಿಣಾಮಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ,” ಎಂದು ICRAದ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ

ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ವಸ್ತುಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಹತ್ತಿ ನೂಲು, ಕೈಮಗ್ಗ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳು ರಫ್ತು ಮಾಡುವ ಪ್ರಮುಖ ವಲಯಗಳಾಗಿವೆ. “ನವೆಂಬರ್ 2020ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನಗಳಲ್ಲದ ಮತ್ತು ಆಭರಣ ರಫ್ತುಗಳು 23.68 ಬಿಲಿಯನ್ ಡಾಲರ್ ಆಗಿದ್ದು, ನವೆಂಬರ್ 2020ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನೇತರ ಮತ್ತು ಆಭರಣಗಳ ರಫ್ತು 19.37 ಶತಕೋಟಿ ಡಾಲರ್​ಗಿಂತ ಶೇ 22.26ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎ. ಶಕ್ತಿವೇಲ್ ಮಾತನಾಡಿ, ಹಲವು ಉನ್ನತ ಕಾರ್ಯ ನಿರ್ವಹಣೆಯ ವಲಯಗಳು ಕಾರ್ಮಿಕ-ಬಳಕೆ ಹೆಚ್ಚಿರುವ ವಲಯಗಳಾಗಿದ್ದು, ತಿಂಗಳಲ್ಲಿ ರಫ್ತು ಬುಟ್ಟಿಗೆ ಪ್ರಮುಖವಾಗಿ ಕೊಡುಗೆ ನೀಡುತ್ತಿವೆ. ಇದು ಉತ್ತಮ ಸಂಕೇತವಾಗಿದೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದಿದ್ದಾರೆ. “ಎಂಜಿನಿಯರಿಂಗ್ ಸರಕುಗಳ ರಫ್ತು ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ ಮತ್ತು ನವೆಂಬರ್​ನಲ್ಲಿ 8.07 ಶತಕೋಟಿ ಡಾಲರ್​ಗೆ ಶೇ 37ರಷ್ಟು ಏರಿಕೆಯಾಗಿದೆ. ಆದರೆ ಒಮಿಕ್ರಾನ್​ನಿಂದಾಗಿ ಖಂಡಿತವಾಗಿಯೂ ಮುಂದಕ್ಕೆ ಹೋಗುವ ಬಲವಾದ ಏರಿಕೆಗೆ ಕೆಲವು ತೊಂದರೆಯ ಅಪಾಯಗಳನ್ನು ತಂದಿದೆ,” ಎಂದು EEPC ಇಂಡಿಯಾ ಅಧ್ಯಕ್ಷ ಮಹೇಶ್ ದೇಸಾಯಿ ಹೇಳಿದ್ದಾರೆ.

ಇಂಜಿನಿಯರಿಂಗ್ ಸರಕುಗಳ ವಲಯದಲ್ಲಿ ಪ್ರಾಬಲ್ಯ ಹೊಂದಿರುವ ಹೆಚ್ಚಿನ ಸಂಖ್ಯೆಯ ಎಂಎಸ್‌ಎಂಇಗಳು ಮತ್ತಷ್ಟು ಹೂಡಿಕೆ ಮಾಡಲು ಕಡಿಮೆ ಅವಕಾಶವನ್ನು ಬಿಟ್ಟು, ಕಚ್ಚಾ ವಸ್ತುಗಳ ಬೆಲೆಗಳ ಹೆಚ್ಚಳವು ಮಾರ್ಜಿನ್​ಗಳ ಮೇಲೆ ಮತ್ತಷ್ಟು ಒತ್ತಡವನ್ನು ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್​ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ