ವಿಶ್ವದಾದ್ಯಂತ 1 ಕೋಟಿ 15 ಲಕ್ಷ ಮಂದಿಗೆ ಕೊರೊನಾ, ಭಾರತದಲೆಷ್ಟು? ಡೀಟೇಲ್ಸ್ ಇಲ್ಲಿದೆ

|

Updated on: Jul 06, 2020 | 7:19 AM

ಬೆಂಗಳೂರು: ಕ್ರೂರಿ ಕೊರೊನಾ ಅಟ್ಟಹಾಸಕ್ಕೆ ರಾಜ್ಯ ನಲುಗಿ ಹೋಗಿದೆ. ಕಣ್ಣಿಗೆ ಕಾಣದ ವೈರಸ್ ಸಿಕ್ಕ ಸಿಕ್ಕವರ ದೇಹದೊಳಗೆ ನುಗ್ಗಿ ಜೀವ ತೆಗೆಯುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರದ 474ಕ್ಕೆ ಏರಿಕೆಯಾಗಿದೆ. 23,474 ಸೋಂಕಿತರಲ್ಲಿ 9ಸಾವಿರದ 847 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 23,474 ಜನರ ಪೈಕಿ 372 ಜನ ಮೃತಪಟ್ಟಿದ್ದಾರೆ. ಉಳಿದ 13ಸಾವಿರದ 251 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ […]

ವಿಶ್ವದಾದ್ಯಂತ 1 ಕೋಟಿ 15 ಲಕ್ಷ ಮಂದಿಗೆ ಕೊರೊನಾ, ಭಾರತದಲೆಷ್ಟು? ಡೀಟೇಲ್ಸ್ ಇಲ್ಲಿದೆ
Follow us on

ಬೆಂಗಳೂರು: ಕ್ರೂರಿ ಕೊರೊನಾ ಅಟ್ಟಹಾಸಕ್ಕೆ ರಾಜ್ಯ ನಲುಗಿ ಹೋಗಿದೆ. ಕಣ್ಣಿಗೆ ಕಾಣದ ವೈರಸ್ ಸಿಕ್ಕ ಸಿಕ್ಕವರ ದೇಹದೊಳಗೆ ನುಗ್ಗಿ ಜೀವ ತೆಗೆಯುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರದ 474ಕ್ಕೆ ಏರಿಕೆಯಾಗಿದೆ. 23,474 ಸೋಂಕಿತರಲ್ಲಿ 9ಸಾವಿರದ 847 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 23,474 ಜನರ ಪೈಕಿ 372 ಜನ ಮೃತಪಟ್ಟಿದ್ದಾರೆ. ಉಳಿದ 13ಸಾವಿರದ 251 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನವೇ 1,925 ಜನರಿಗೆ ಕೊರೊನಾ ಸೋಂಕು ತಗುಲಿದೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 6,73,165
ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 19,268
ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 4,09,083
ದೇಶದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 2,44,814

ಜಗತ್ತಿನಲ್ಲಿ ಕೊರೊನಾ ಸೋಂಕಿತರ ಅಪ್ಡೇಟ್ಸ್​:
ವಿಶ್ವದಾದ್ಯಂತ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 1,15,46,514
ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 5,36,392
ವಿಶ್ವದಲ್ಲಿ 24 ಗಂಟೆ ಅವಧಿಯಲ್ಲಿ 3,519 ಜನರ ಸಾವಾಗಿದೆ.
ವಿಶ್ವದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 65,26,750
ವಿಶ್ವದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 44,83,372
ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರ ಸ್ಥಿತಿ ಗಂಭೀರ- 58,498
ಹೊಸದಾಗಿ 1 ಲಕ್ಷ 71 ಸಾವಿರದ 471 ಜನರಿಗೆ ಸೋಂಕು ತಗುಲಿದೆ.

Published On - 7:18 am, Mon, 6 July 20