15 ದಿನಗಳಲ್ಲಿ 10 ಸೇತುವೆಗಳು ಕುಸಿತ; ಕ್ರಮ ಕೈಗೊಳ್ಳುವುದಾಗಿ ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಭರವಸೆ

|

Updated on: Jul 04, 2024 | 7:19 PM

ನಾನು ಪ್ರತಿಯೊಂದನ್ನೂ ತನಿಖೆ ಮಾಡುತ್ತಿದ್ದೇನೆ. ತ್ವರಿತ ಕ್ರಮಕ್ಕಾಗಿ ನಾನು ನಿರ್ದೇಶನಗಳನ್ನು ನೀಡಿದ್ದೇನೆ, ”ಎಂದು ಉಪಮುಖ್ಯಮಂತ್ರಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಸೇತುವೆಗಳ ನಿರ್ಮಾಣದಲ್ಲಿ ತೊಡಗಿರುವವರ ಬಗ್ಗೆ ಗಮನ ಹರಿಸುವುದಾಗಿ ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಜನರಿಗೆ ಭರವಸೆ ನೀಡಿದ್ದಾರೆ.

15 ದಿನಗಳಲ್ಲಿ 10 ಸೇತುವೆಗಳು ಕುಸಿತ; ಕ್ರಮ ಕೈಗೊಳ್ಳುವುದಾಗಿ ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಭರವಸೆ
ಸಾಮ್ರಾಟ್ ಚೌಧರಿ
Follow us on

ಪಾಟ್ನಾ ಜುಲೈ 04: ರಾಜ್ಯದಲ್ಲಿ ಒಂದರನಂತರ ಮತ್ತೊಂದು ಎಂಬಂತ ಸೇತುವೆಗಳು(bridges collapse) ಕುಸಿಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರದ (Bihar) ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Chaudhary) ಅವರು ಗುರುವಾರ ಭರವಸೆ ನೀಡಿದ್ದಾರೆ. ಬಿಹಾರದ ಸರನ್, ಪೂರ್ವ ಚಂಪಾರಣ್, ಅರಾರಿಯಾ, ಮಧುಬನಿ, ಕಿಶನ್‌ಗಂಜ್ ಮತ್ತು ಸಿವಾನ್ ಜಿಲ್ಲೆಗಳಲ್ಲಿ 15 ದಿನಗಳಲ್ಲಿ 10 ಸೇತುವೆಗಳು ಕುಸಿದಿವೆ. ಈ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

“ನಾನು ಪ್ರತಿಯೊಂದನ್ನೂ ತನಿಖೆ ಮಾಡುತ್ತಿದ್ದೇನೆ. ತ್ವರಿತ ಕ್ರಮಕ್ಕಾಗಿ ನಾನು ನಿರ್ದೇಶನಗಳನ್ನು ನೀಡಿದ್ದೇನೆ, ”ಎಂದು ಉಪಮುಖ್ಯಮಂತ್ರಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಸೇತುವೆಗಳ ನಿರ್ಮಾಣದಲ್ಲಿ ತೊಡಗಿರುವವರ ಬಗ್ಗೆ ಗಮನ ಹರಿಸುವುದಾಗಿ ಜನರಿಗೆ ಭರವಸೆ ನೀಡಿದ ಉಪ ಮುಖ್ಯಮಂತ್ರಿ, “ನಾನು ಅದನ್ನು ಯಾವಾಗ ನಿರ್ಮಿಸಲಾಗಿದೆ, ಯಾರು ನಿರ್ಮಿಸಿದ್ದಾರೆ ಎಂಬ ಪಟ್ಟಿಯನ್ನು ನೀಡುತ್ತೇನೆ. ನಮಗೆ ಬಂದಿರುವ ಮಾಹಿತಿಯ ಪ್ರಕಾರ ಹಲವಾರು ಶಾಸಕರ ಶಿಫಾರಸ್ಸಿನಿಂದ ಅವುಗಳನ್ನು ನಿರ್ಮಿಸಲಾಗಿದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಗುರುವಾರ ಬೆಳಗ್ಗೆ , ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪದೇ ಪದೇ ಸೇತುವೆ ಅಪಘಾತಗಳ ಬಗ್ಗೆ ಮೌನವಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ಅವರು “ಈ ಮಂಗಳಕರ ಭ್ರಷ್ಟಾಚಾರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ ಎಂದಿದ್ದಾರೆ.

ವಿಶೇಷವಾಗಿ ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆಗೆ ವಿನಂತಿಸಿ ವಕೀಲ ಬ್ರಜೇಶ್ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಕುಮಾರ್ ಅವರು ಬುಧವಾರ ರಸ್ತೆ ನಿರ್ಮಾಣ ಇಲಾಖೆ (ಆರ್‌ಸಿಡಿ) ಮತ್ತು ಗ್ರಾಮೀಣ ಕಾಮಗಾರಿ ಇಲಾಖೆ (ಆರ್‌ಡಬ್ಲ್ಯೂಡಿ) ರಾಜ್ಯದಲ್ಲಿ ತುರ್ತು ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ಆದೇಶಿಸಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಮಾಡಿದ ಭಾಷಣದಲ್ಲಿರುವ ತಪ್ಪುಗಳನ್ನು ಉಲ್ಲೇಖಿಸಿ ಸ್ಪೀಕರ್​​ಗೆ ಪತ್ರ ಬರೆದ ಕಾಂಗ್ರೆಸ್

ಅಲ್ಪಾವಧಿಯಲ್ಲಿಯೇ ಕುಸಿದಿರುವ ಬಹು ಸೇತುವೆಗಳ ಹಿಂದೆ ಸಂಚು ಅಡಗಿದೆ ಎಂದು ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಶಂಕಿಸಿದ್ದಾರೆ. “ಎರಡು ತಿಂಗಳ ಹಿಂದೆ, ರಾಜ್ಯದಲ್ಲಿ ಸೇತುವೆಗಳು ಕುಸಿಯುವ ಯಾವುದೇ ಘಟನೆಗಳನ್ನು ನಾವು ನೋಡಿರಲಿಲ್ಲ. ಈಗ ಸೇತುವೆಗಳು ನಿರಂತರವಾಗಿ ಕುಸಿಯುತ್ತಿದ್ದು, ಸರ್ಕಾರವನ್ನು ಅವಮಾನಿಸಲು ಕೆಲವರು ಪಿತೂರಿ ನಡೆಸಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ