ಹೈದರಾಬಾದ್ ಮಾಲ್​​ನ ಎಸ್ಕಲೇಟರ್​​ನಿಂದ ಜಾರಿ ಬಿದ್ದ 10 ಮಕ್ಕಳಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Aug 18, 2022 | 3:54 PM

1982ರಲ್ಲಿ ತೆರೆಕಂಡ ಗಾಂಧಿ ಸಿನಿಮಾದ ಉಚಿತ ಪ್ರದರ್ಶನವಿದ್ದು, ಅದನ್ನು ನೋಡಲು ಮಕ್ಕಳು ಬಂದಿದ್ದರು. ಗಾಯಗೊಂಡ ಮಕ್ಕಳನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ...

ಹೈದರಾಬಾದ್ ಮಾಲ್​​ನ ಎಸ್ಕಲೇಟರ್​​ನಿಂದ  ಜಾರಿ ಬಿದ್ದ 10 ಮಕ್ಕಳಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್: ಹೈದರಾಬಾದ್​​ನ ( Hyderabad) ಬಂಜಾರಾ ಹಿಲ್ಸ್​​ನಲ್ಲಿರುವ ಪಿವಿಆರ್ ಸಿನೆಪ್ಲೆಕ್ಸ್​​ಗೆ ಸಿನಿಮಾ ನೋಡಲು ಬಂದಿದ್ದ 10 ಮಕ್ಕಳು ಎಸ್ಕಲೇಟರ್​​ನಿಂದ ಜಾರಿ ಬಿದ್ದು ಗಾಯಗಳಾಗಿವೆ ಎಂದು ತೆಲಂಗಾಣ ಸರ್ಕಾರ ಹೇಳಿದೆ. 1982ರಲ್ಲಿ ತೆರೆಕಂಡ ಗಾಂಧಿ ಸಿನಿಮಾದ ಉಚಿತ ಪ್ರದರ್ಶನವಿದ್ದು, ಅದನ್ನು ನೋಡಲು ಮಕ್ಕಳು ಬಂದಿದ್ದರು. ಗಾಯಗೊಂಡ ಮಕ್ಕಳನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೆಲಂಗಾಣ ಸರ್ಕಾರವು ದೇಶಭಕ್ತಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಈ ಸಿನಿಮಾ ಪ್ರದರ್ಶನವೂ ಇದೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು 22 ಲಕ್ಷ ಮಕ್ಕಳಿಗಾಗಿ 552 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.