AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DOLO-650ಯನ್ನು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುವುದಕ್ಕಾಗಿ ₹1,000 ಕೋಟಿ ವ್ಯಯಿಸಿದ ಡೊಲೊ ಕಂಪನಿ

ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ರೋಗಿಗಳಿಗೆ ಜ್ವರ ನಿವಾರಕ ಔಷಧವಾಗಿ ಈ ಟ್ಯಾಬ್ಲೆಟ್ ಶಿಫಾರಸು ಮಾಡಲು DOLO ತಯಾರಕರು 1,000 ಕೋಟಿ ಮೌಲ್ಯದ ಉಚಿತ ಕೊಡುಗೆಗಳನ್ನು..

DOLO-650ಯನ್ನು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುವುದಕ್ಕಾಗಿ ₹1,000 ಕೋಟಿ ವ್ಯಯಿಸಿದ ಡೊಲೊ ಕಂಪನಿ
ಡೊಲೊ 650
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 18, 2022 | 3:40 PM

Share

ದೆಹಲಿ: ಡೊಲೊ-650 (DOLO-650) ಟ್ಯಾಬ್ಲೆಟ್ ತಯಾರಕರು ಟ್ಯಾಬ್ಲೆಟ್ ಅನ್ನು ಶಿಫಾರಸು ಮಾಡಲು ವೈದ್ಯರಿಗೆ ₹ 1,000 ಕೋಟಿ ಮೌಲ್ಯದ 50 ಉಚಿತ ಕೊಡುಗೆ ವಿತರಿಸಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯು ಆರೋಪಿಸಿರುವುದಾಗಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಸಂಸ್ಥೆ ಗುರುವಾರ ಸುಪ್ರೀಂಕೋರ್ಟ್‌ಗೆ (Supreme Court) ತಿಳಿಸಿದೆ. ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ರೋಗಿಗಳಿಗೆ ಜ್ವರ ನಿವಾರಕ ಔಷಧವಾಗಿ ಈ ಟ್ಯಾಬ್ಲೆಟ್  ಶಿಫಾರಸು ಮಾಡಲು DOLO ತಯಾರಕರು 1,000 ಕೋಟಿ ಮೌಲ್ಯದ ಉಚಿತ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ವನ್ಯಾಯಮೂರ್ತಿ ಎಎಸ್ ಬೋಪಣ್ಣ ಜತೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಕೊವಿಡ್ ಸಮಯದಲ್ಲಿ ನನಗೂ ಡೊಲೊ ಬಳಸುವಂತೆ ನಿರ್ದೇಶಿಸಲಾಗಿತ್ತು. ಇದು ತುಂಬಾ ಗಂಭೀರ ವಿಷಯ ಎಂದಿದ್ದಾರೆ. ಇದೇನೂ ಹಿತಕರವಾದ ಸಂಗತಿಯಲ್ಲ. ನನಗೆ ಕೊವಿಡ್ ಬಂದಾಗ ಇದನ್ನೇ ನೀಡಲಾಗಿತ್ತು. ಇದು ಗಂಭೀರ ಪ್ರಕರಣ ಮತ್ತು ಸಂಗತಿ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರಲ್ಲಿ 10 ದಿನಗಳೊಳಗ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಹೇಳಿದೆ.

ವೈದ್ಯರು ತಮ್ಮ ಔಷಧಿಗಳನ್ನು ಶಿಫಾರಸು ಮಾಡಲು ಉಚಿತ ಕೊಡುಗೆ ನೀಡುತ್ತಿರುವ ಔಷಧೀಯ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಫೆಡರೇಷನ್ ಆಫ್ ಮೆಡಿಕಲ್ ಆಂಡ್ ಸೇಲ್ಸ್ ರೆಪ್ರಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ ಮನವಿಯಲ್ಲಿ ಯೂನಿಫಾರ್ಮ್ ಕೋಡ್ ಆಫ್ ಫಾರ್ಮಾಸ್ಯುಟಿಕಲ್ ಮಾರ್ಕೆಟಿಂಗ್ ಪ್ರಾಕ್ಟೀಸಸ್ (UCPMP) ಗೆ ಶಾಸನಬದ್ಧ ಬೆಂಬಲವನ್ನು ನೀಡಲು ನಿರ್ದೇಶನವನ್ನು ಕೋರಲಾಗಿದೆ.

ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ರೆಮ್ಡಿಸಿವಿರ್ ಔಷಧಿಯ ಅತಿಯಾದ ಮಾರಾಟ ಮತ್ತು ವೈದ್ಯರು ಶಿಫಾರಸು ಮಾಡಿದ್ದನ್ನು ಉದಾಹರಣೆಯಾಗಿ ಅರ್ಜಿದಾರರು ಸೂಚಿಸಿದ್ದಾರೆ. ನ್ಯಾಯವಾದಿ ಅಪರ್ಣಾ ಭಟ್ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಆರೋಗ್ಯದ ಹಕ್ಕು ಜೀವನದ ಹಕ್ಕಿನ ಒಂದು ಭಾಗವಾಗಿದೆ. ನೈತಿಕ ಮಾರ್ಕೆಟಿಂಗ್ ವಿಧಾನ ಅನುಸರಿಸುವ ಔಷಧೀಯ ಕಂಪನಿಗಳು ಅದಕ್ಕೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಯುಸಿಪಿಎಂಪಿಗೆ ಯಾವುದೇ ಶಾಸನಬದ್ಧ ಆಧಾರದ ಅನುಪಸ್ಥಿತಿಯಲ್ಲಿ ಅಂತಹ  ವಿಧಾನಗಳನ್ನು  ನಿಷೇಧಿಸುವ ಯಾವುದೇ ಕಾನೂನು ಅಥವಾ ನಿಯಂತ್ರಣವು ಪ್ರಸ್ತುತ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧದ ಯುಎನ್ ಕನ್ವೆನ್ಷನ್‌ಗೆ ಸಹಿ ಹಾಕಿದ್ದರೂ ಭಾರತದಲ್ಲಿ ಔಷಧೀಯ ಮಾರುಕಟ್ಟೆ ಅಭ್ಯಾಸಗಳಲ್ಲಿನ ಭ್ರಷ್ಟಾಚಾರವನ್ನು ಅನಿಯಂತ್ರಿತವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಉಡುಗೊರೆಗಳು, ಮನರಂಜನೆ, ಆತಿಥ್ಯ ಮತ್ತು ಇತರ ಅನುಕೂಲಗಳಿಗೆ ಬದಲಾಗಿ ವೈದ್ಯರು ಹೆಚ್ಚು ಶಿಫಾರಸು ಮಾಡಿದ  ಬ್ರಾಂಡೆಡ್ ಔಷಧಿಗಳಿಗೆ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸುವ ಪರಿಸ್ಥಿತಿಗೆ ಇದು ಕಾರಣವಾಗುತ್ತದೆ. ಇಂಥಾ ಔಷಧಗಳು ಮತ್ತು ವಿಷ ಪದಾರ್ಥಗಳು ಜನರ ಜೀವ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದರೆ ಆರೋಪ ಮುಕ್ತವಾಗಿ ಹೊರನಡೆಯುವ ಫಾರ್ಮಾಸ್ಯುಟಿಕಲ್ ಕಂಪನಿಗಳ ದುರ್ವರ್ತನೆಗಾಗಿ ವೈದ್ಯರಿಗೆ ಕೂಡಾ ದಂಡ ವಿಧಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅರ್ಜಿದಾರರು ಯುಸಿಪಿಎಂಪಿ ಶಾಸನಬದ್ಧ ಆಧಾರವನ್ನು ನೀಡಲು ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿದ್ದಾರೆ. ಅದೇ ವೇಳೆ ಸುಪ್ರೀಂಕೋರ್ಟ್ ಅಂತಹ ಮಾರ್ಗಸೂಚಿಗಳನ್ನು ನೀಡುವಂತೆ ಅಥವಾ ಯುಸಿಪಿಎಂಪಿ ಬದ್ಧತೆಯನ್ನು ತನಗೆ ಸರಿಹೊಂದುವಂತೆ ಮಾಡುವಂತೆ ಕೋರಲಾಗಿದೆ. ಕೊನೆಯ ವಿಚಾರಣೆಯ ನಂತರ ಸರ್ಕಾರ UCPMP ಕರಡು ಬಿಡುಗಡೆ ಮಾಡಿದ್ದು ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

Published On - 3:00 pm, Thu, 18 August 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?