Shocking News: ತಪಾಸಣೆ ಮಾಡಲು ಪೊಲೀಸರು ಹಾಲಿನ ಟ್ಯಾಂಕರ್ ತಡೆದರು.. ಒಳಗಿನದನ್ನು ಕಂಡು ಮನಸು ಬೇಸರಗೊಂಡಿತು, ಅಂಥದ್ದೇನಿತ್ತು?
Viral News: ಕಲಬೆರಕೆ ಹಾಲು, ನಕಲಿ ಹಾಲುಗಳಿಗೆ ಕೊರತೆಯೇನೂ ಇಲ್ಲ. ಖ್ಯಾತ ಕಂಪನಿಗಳ ಲೇಬಲುಗಳನ್ನು ಅಂಟಿಸಿಬಿಟ್ಟರೆ (ಮುದ್ರಿಸಿಬಿಟ್ಟರೆ) ಮುಗೀತು . ಅಂತಹ ಹಾಲು ಸೀದಾ ಚಾಯ್ ಅಂಗಡಿಗಳು, ರೆಸ್ಟೋರೆಂಟ್‌ಗಳು, ಕಿರಾಣಿ ಅಂಗಡಿಗಳಿಗೆ ಸರಾಗವಾಗಿ ಸರಬರಾಜು ಆಗಿಬಿಡುತ್ತದೆ. ಗಮನಾರ್ಹವೆಂದರೆ ಕಡಿಮೆ ಬೆಲೆಗೆ ಬರುವುದರಿಂದ ಅಂಗಡಿ ವ್ಯಾಪಾರಸ್ಥರೂ ಇದರತ್ತ ವಾಲುತ್ತಿದ್ದಾರೆ.
ಗುಜರಾತ್: ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಕಲಬೆರಕೆ ಸರಕುಗಳನ್ನು ಮಾರಾಟ ಮಾಡುವವರೇ ಹೆಚ್ಚು. ಆದರೆ ಅವರುಗಳು ಹಾಗೆ ವಂಚನೆ ಮಾಡುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ನಾವು ತಿನ್ನುವ ಆಹಾರ, ಕುಡಿಯುವ ನೀರು… ಯಾವುದೆಲ್ಲಾ ಸಾಧ್ಯವೋ ಅಷ್ಟೂ ಕಲಬೆರಕೆ/ ಕಲುಷಿತಗೊಳಿಸುತ್ತಿದ್ದಾರೆ. ಜನರು ಅಡುಗೆಯಲ್ಲಿ ಬಳಸುವ ಬಹುತೇಕ ವಸ್ತು ಕಲಬೆರಕೆಯಾಗುತ್ತದೆ. ಹಣದ ದುರಾಸೆಯಿಂದ.. ದಿನದಿಂದ ದಿನಕ್ಕೆ ಇಂತಹ ಅಪರಾಧಗಳ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಇತ್ತೀಚೆಗೆ ಗುಜರಾತ್‌ನ (gujarat police) ರಾಜ್‌ಕೋಟ್ ಪೊಲೀಸರು 4,000 ಲೀಟರ್ ಕಲಬೆರಕೆ ಹಾಲನ್ನು ವಶಪಡಿಸಿಕೊಂಡಿದ್ದಾರೆ. ಎಂದಿನಂತೆ ತಪಾಸಣೆ ನಡೆಸುತ್ತಿದ್ದಾಗ ಹಾಲಿನ ಟ್ಯಾಂಕರ್ ಒಂದು ಪೊಲೀಸರ ಕಣ್ಣಿಗೆ ಬಿದ್ದಿತ್ತು. ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದಾಗ ಒಳಗೆ ಕೆಮಿಕಲ್ ಹಾಕಿ ತಯಾರಿಸಿದ ಹಾಲು (adulterated milk) ಇರುವುದು ಪತ್ತೆಯಾಗಿದೆ.
ಕೂಡಲೇ ಹಾಲಿನ ಟ್ಯಾಂಕರ್ ನಲ್ಲಿ ಕಲಬೆರಕೆ ಹಾಲು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಕಲಬೆರಕೆ ಹಾಲನ್ನು ಅಪಾಯಕಾರಿ ರಾಸಾಯನಿಕಗಳಾದ ಸಲ್ಫೇಟ್, ಫಾಸ್ಫೇಟ್ ಮತ್ತು ಕಾರ್ಬೊನೇಟೆಡ್ ಎಣ್ಣೆಯಿಂದ ತಯಾರಿಸಲಾಗಿದೆ ಎಂದು ಪೊಲೀಸರು ಬಳಿಕ ತಿಳಿಸಿದ್ದಾರೆ. ಇದೇ ಮಾದರಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕಲಬೆರಕೆ ಹಾಲು ಪೂರೈಕೆಯಾಗುತ್ತಿದೆ ಎಂದು ರಾಜ್ ಕೋಟ್ ವಲಯ-1 ಡಿಸಿಪಿ ಪ್ರವೀಣ್ ಕುಮಾರ್ ಮೀನಾ ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಹಾಲು ತಯಾರಿಸುತ್ತಿರುವ ಪ್ರದೇಶವನ್ನು ಗುರುತಿಸಿ, ದಾಳಿ ನಡೆಸಲಾಗಿದೆ ಎಂದು ತಿಳಿಸಿದರು. ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದೆ.
ಕಲಬೆರಕೆ ಹಾಲು ಜನರನ್ನು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಕ್ಕಳಿಗೆ, ಹಾಲು ವಿಶೇಷವಾಗಿ ಮುಖ್ಯವಾಗಿದೆ. ಕಲಬೆರಕೆ ಹಾಲಿನ ಟ್ಯಾಂಕರ್ ಗಳು ನಿಮ್ಮ ಅಡುಗೆ ಮನೆಗೂ ದಾಂಗುಡಿಯಿಡಬಹುದು. ಅದಕೇ ಹೇದಳಿರುವುದು ಬೆಳ್ಳಗಿರುವುದೆಲ್ಲಾ ಹಾಲಲ್ಲ.. ಹುಷಾರಾಗಿರಿ.
Gujarat | Four thousand liters of adulterated milk seized from a truck in Rajkot (16.08)
A truck was stopped during checking of vehicles & adulterated milk that was made from chemicals like sulfates, phosphates & carbonate oils was seized:Praveen Kumar Meena, DCP Zone-1, Rajkot pic.twitter.com/3vpJciqgNq
— ANI (@ANI) August 16, 2022
To read more in Telugu click here