BIG NEWS: ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಸಹಾಯಕಿ ಅರ್ಪಿತಾ ಮುಖರ್ಜಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ
ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆಗಸ್ಟ್ 31 ರಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
TMCಯ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ವಕೀಲರು ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಕೋರಿದರು. ಅವರನ್ನು ಮತ್ತಷ್ಟು ಕಸ್ಟಡಿಯಲ್ಲಿ ಇರಿಸಿದರೆ ಅವರಿಗೆ ವೈದ್ಯಕೀಯ ನೆರವು ಸಿಗುವುದಿಲ್ಲ. ಅವರ ಜೀವಕ್ಕೆ ಅಪಾಯವಿದೆ. ಪಾರ್ಥನ ಸ್ವಾಧೀನದಿಂದ ಏನನ್ನೂ ಪಡೆಯಲಾಗಿಲ್ಲ ಎಂದು ಅವರ ವಕೀಲರು ಹೇಳಿದರು.
ನ್ಯಾಯಾಂಗ ಬಂಧನದ ಕೊನೆಯ ದಿನದಂದು ಜಾರಿ ನಿರ್ದೇಶನಾಲಯವು ವಿಚಾರಣೆಗೆ ಮಾಡಲಿದೆ. 14 ದಿನಗಳ ಕಾಲಾವಕಾಶ ದೊರೆತ ನಂತರ ತನಿಖೆ ನಡೆಸುವುದು ಒಂದು ಮಾರ್ಗವೇ? ಎಂದು ಅವರು ಪ್ರಶ್ನಿಸಿದರು. ಪಾರ್ಥ ಅವರು ಈ ಹಿಂದೆ ಬಂಗಾಳದ ಶಿಕ್ಷಣ ಸಚಿವರಾಗಿದ್ದಾಗ ಶಾಲಾ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಶಿಕ್ಷಕರ ನೇಮಕಾತಿ (SSC) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ನ್ಯಾಯಾಲಯವು ಪಾರ್ಥ ಚಟರ್ಜಿ (Partha Chatterjee) ಮತ್ತು ಅರ್ಪಿತಾ ಮುಖರ್ಜಿಗೆ ಆಗಸ್ಟ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಗಳಾದ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23ರಂದು ಇಡಿ ಬಂಧಿಸಿದ್ದು ಅವರು ಇಲ್ಲಿಯವರೆಗೆ ಇಡಿ ವಶದಲ್ಲೇ ಇದ್ದಾರೆ. ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಚಟರ್ಜಿ ಅವರನ್ನು ಮಮತಾ ಬ್ಯಾನರ್ಜಿ ಟಿಎಂಸಿ ನೇತೃತ್ವದ ತಮ್ಮ ಸಚಿವ ಸಂಪುಟದಿಂದ ತೆಗೆದು ಹಾಕಿದ್ದಾರೆ. ಚಟರ್ಜಿ ಅವರು 15 ದಿನ ನಮ್ಮ ವಶದಲ್ಲಿದ್ದರು. ಅದರಲ್ಲಿ ಎರಡು ದಿನ ಸರ್ಕಾರಿ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗುವ ಮೂಲಕ ಎರಡು ದಿನಗಳನ್ನು ಅವರು ವ್ಯರ್ಥ ಮಾಡಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಚಟರ್ಜಿ ಅವರನ್ನು ಭುವನೇಶ್ವರದಲ್ಲಿರುವ ಏಮ್ಸ್ ಗೆ ಕರದೊಯ್ದು ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಚಟರ್ಜಿ ಅವರಿಗೆ ಆರೋಗ್ಯ ಸಮಸ್ಯೆಯೇನೂ ಇಲ್ಲ ಎಂದು ಅಲ್ಲಿನ ವೈದ್ಯರು ಹೇಳಿದ್ದರು. ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆ ಪತ್ರಗಳ ಜತೆ 49.8 ಕೋಟಿ ನಗದು, ದೊಡ್ಡ ಪ್ರಮಾಣದ ಚಿನ್ನಾಭರಣ, ಚಿನ್ನದ ಗಟ್ಟಿಯನ್ನು ಇಡಿ ವಶ ಪಡಿಸಿದೆ.
Published On - 4:04 pm, Thu, 18 August 22