ಏರ್ ಇಂಡಿಯಾ ವಿಮಾನ ಸಂಸ್ಥೆಯ ಇಟಲಿ-ಅಮೃತ್ಸರ್ ವಿಮಾನ(Italy-Amritsar Air India flight)ದಲ್ಲಿ ಪ್ರಯಾಣ ಮಾಡಿದ 125 ಪ್ರಯಾಣಿಕರಿಗೂ ಕೊರೊನಾ ಸೋಂಕು ತಗುಲಿದ್ದಾಗಿ ಅಮೃತ್ಸರ್ ವಿಮಾನ ನಿಲ್ದಾಣ ನಿರ್ದೇಶಕ ವಿ.ಕೆ.ಸೇಠ್ ತಿಳಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಟ್ವೀಟ್ ಮಾಡಿರುವ ಏರ್ ಇಂಡಿಯಾ, ಇಟಲಿಯಿಂದ, ಅಮೃತ್ಸರ್ಗೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದು ಆಧಾರವಿಲ್ಲದ ಸುಳ್ಳು ಸುದ್ದಿ. ಯಾಕೆಂದರೆ ಏರ್ ಇಂಡಿಯಾದ ಯಾವುದೇ ವಿಮಾನಗಳೂ ಸದ್ಯ ರೋಮ್ನಿಂದ ಭಾರತಕ್ಕೆ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಹೇಳಿದೆ.
#FlyAI : Several Media houses has reported that Passengers of Air India flight from Rome to Amritsar have been tested covid positive. This is wrong and baseless. Air India doesn’t operate any flight from Rome currently.
— Air India (@airindiain) January 6, 2022
ಭಾರತದಲ್ಲಿ ಕೊವಿಡ್ 19 ಸೋಂಕಿನ ಪ್ರಕರಣಗಳು ಮತ್ತಷ್ಟು ಏರಿಕೆಯಾಗುತ್ತಿವೆ. ಇಂದು ಒಂದೇ ದಿನ 90 ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದೆ. ಇದು ನಿನ್ನೆಗಿಂತ ಶೇ.56ರಷ್ಟು ಹೆಚ್ಚು. ಕಳೆದ ಒಂದು ವಾರದಿಂದಲೂ ಗಣನೀಯವಾಗಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಒಮಿಕ್ರಾನ್ ಕೂಡ ಹರಡುತ್ತಿದೆ. ಹೀಗಾಗಿ ಎಲ್ಲ ಏರ್ಪೋರ್ಟ್ನಲ್ಲಿ ಬೇರೆ ದೇಶಗಳಿಂದ ಬಂದ ಪ್ರಯಾಣಿಕರ ಕೊವಿಡ್ 19 ಟೆಸ್ಟ್ ಮಾಡಲಾಗುತ್ತಿದೆ. ಈ ಮಧ್ಯೆ ಇಟಲಿಯಿಂದ ಪಂಜಾಬ್ನ ಅಮೃತ್ಸರ್ಗೆ ಬಂದಿದ್ದ ಫ್ಲೈಟ್ನಲ್ಲಿದ್ದವರಿಗೆ ಕೊರೊನಾ ಸೋಂಕು ಎಂಬ ಸುದ್ದಿ ಹರಡಿತ್ತು. ಹಲವು ರಾಷ್ಟ್ರೀಯ ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಅದೀಗ ಸುಳ್ಳು ಎಂದು ಹೇಳಲಾಗಿದ್ದು, ಸ್ವಲ್ಪ ಮಟ್ಟಿಗೆ ನಿರಾತಂಕವಾಗಿದೆ. ಅಂದಹಾಗೆ, ಇಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ತಪಾಸಣೆಯ ವೇಗ ಇನ್ನಷ್ಟು ಹೆಚ್ಚುಗೊಳಿಸುವಂತೆ ಸೂಚಿಸಿದೆ. ಕೊರೊನಾ ಟೆಸ್ಟ್ನಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು.
ಒಮಿಕ್ರಾನ್ ಕೂಡ ಏರಿಕೆ
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 495 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2630ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ ಒಮಿಕ್ರಾನ್ ಮೆಟ್ರೋನಗರಗಳಲ್ಲೇ ಹೆಚ್ಚಾಗಿ ಹಬ್ಬುತ್ತಿದೆ ಎಂದು ಹೇಳಲಾಗಿದೆ. ಕೊವಿಡ್ 19ನ ಒಮಿಕ್ರಾನ್ ತಳಿ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಕೊವಿಡ್ 19 ತಪಾಸಣೆಯ ವೇಗವನ್ನು, ಅದರಲ್ಲೂ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಎಲ್ಲರ ಎದುರು ಸ್ವಾರ್ಥ ಮೆರೆದ ಅಕ್ಕಿನೇನಿ ನಾಗಾರ್ಜುನ; ಅಭಿಮಾನಿಗಳಿಂದ ಛೀಮಾರಿ
Published On - 3:14 pm, Thu, 6 January 22