ನಾಗಾಲ್ಯಾಂಡ್​​ನಲ್ಲಿ ಭೀಕರ ಗುಂಡಿನ ದಾಳಿ, ಭದ್ರತಾ ವಾಹನಗಳಿಗೆ ಬೆಂಕಿ; ಯೋಧ ಸೇರಿ 13 ಜನರ ದುರ್ಮರಣ

| Updated By: Lakshmi Hegde

Updated on: Dec 05, 2021 | 10:34 AM

ಘಟನೆಗೆ ನಿಜವಾದ ಕಾರಣ ಗೊತ್ತಾಗಿಲ್ಲ. ಗುಂಡಿನ ದಾಳಿ ನಡೆಸಿದ್ದು ಯಾರೆಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗೇ, ನಾಗಾಲ್ಯಾಂಡ್​ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ.

ನಾಗಾಲ್ಯಾಂಡ್​​ನಲ್ಲಿ ಭೀಕರ ಗುಂಡಿನ ದಾಳಿ, ಭದ್ರತಾ ವಾಹನಗಳಿಗೆ ಬೆಂಕಿ; ಯೋಧ ಸೇರಿ 13 ಜನರ ದುರ್ಮರಣ
ಭದ್ರತಾ ಪಡೆಯ ವಾಹನಗಳಿಗೆ ಬೆಂಕಿಯಿಟ್ಟ ಸ್ಥಳೀಯರು
Follow us on

ನಾಗಾಲ್ಯಾಂಡ್​​ನ ಮೋನ್​ ಜಿಲ್ಲೆಯ ತಿರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಯೋಧನೊಬ್ಬ ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ 13 ಜನರು ಮೃತಪಟ್ಟಿದ್ದಾಗಿ ಪೊಲೀಸ್ ವರಿಷ್ಠಾಧಿಕಾರಿ ಇಮ್ನಾಲೆನ್ಸಾ ದೃಢಪಡಿಸಿದ್ದಾರೆ. ಇಲ್ಲಿನ ಓಟಿಂಗ್​ ಎಂಬ ಗ್ರಾಮದ ಜನರು ಒಂದು ಪಿಕ್​ ಅಪ್​ ಮಿನಿ ಟ್ರಕ್​ ಮೂಲಕ ಮನೆಗೆ ವಾಪಸ್​ ಬರುತ್ತಿದ್ದರು. ಈ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಇವರಿನ್ನೂ ಬರಲಿಲ್ಲ ಎಂದು ಹುಡುಕುತ್ತ ಹೋದ ಸ್ಥಳೀಯರಿಗೆ ಟ್ರಕ್​ ಮತ್ತು 13 ಮಂದಿ ನಾಗರಿಕರ ಮೃತದೇಹ ಸಿಕ್ಕಿದೆ. ಅದನ್ನು ನೋಡಿ ಕೋಪಗೊಂಡ ಜನರು ಭದ್ರತಾ ಪಡೆಯ ಎರಡು ವಾಹನಕ್ಕೆ ಬೆಂಕಿ ಹಾಕಿದ್ದಾರೆ.

ಘಟನೆಗೆ ನಿಜವಾದ ಕಾರಣ ಗೊತ್ತಾಗಿಲ್ಲ. ಗುಂಡಿನ ದಾಳಿ ನಡೆಸಿದ್ದು ಯಾರೆಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗೇ, ನಾಗಾಲ್ಯಾಂಡ್​ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ. ಈ ಗುಂಡಿನ ದಾಳಿ ತೀವ್ರ ಖಂಡನೀಯ. ಅನ್ಯಾಯವಾಗಿ ಬಲಿಯಾದವರ ಸಾವಿಗೆ ನ್ಯಾಯ ಒದಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯರು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಗೃಹ ಸಚಿವ ಅಮಿತ್​ ಶಾ ಕೂಡ ಟ್ವೀಟ್ ಮಾಡಿದ್ದು, ನಾಗಾಲ್ಯಾಂಡ್​​ನ ಓಟಿಂಗ್​​ನಲ್ಲಿ ನಡೆದ ಘಟನೆಯಿಂದ ನೋವಾಗಿದೆ. ಮೃತರ ಕುಟುಂಗಳಿಗೆ ನನ್ನ ಸಾಂತ್ವನಗಳು. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಎಸ್​ಐಟಿ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಶಿವರಾಂ ನಡೆದಾಡುವ ಅಯ್ಯಪ್ಪ ಸ್ವಾಮಿ ಆಗಿದ್ರು; ಅವರಿಗೆ ಹಲವು ಅಭಿಷೇಕ ಮಾಡ್ತೀವಿ’: ಡಾ. ಎನ್​. ಜಯರಾಂ

Published On - 10:32 am, Sun, 5 December 21