ಟ್ಯೂಷನ್​ಗೆ ಹೋದ 5ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಶಿಕ್ಷಕಿಯ ಮಗನೇ ಆರೋಪಿ

| Updated By: Lakshmi Hegde

Updated on: Oct 28, 2021 | 4:19 PM

ಈ ವಿಚಾರವನ್ನು ಹುಡುಗಿ ಮನೆಗೆ ಹೋಗಿ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ತನ್ನ ಕೆಳಹೊಟ್ಟೆ ನೋಯುತ್ತಿರುವುದಾಗಿಯೂ ತಿಳಿಸಿದ್ದಾಳೆ. ಪುಟ್ಟ ಹುಡುಗಿಯ ಬಟ್ಟೆಯ ಮೇಲೆಲ್ಲ ರಕ್ತದ ಕಲೆಗಳು ಉಂಟಾಗಿದ್ದವು.

ಟ್ಯೂಷನ್​ಗೆ ಹೋದ 5ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಶಿಕ್ಷಕಿಯ ಮಗನೇ ಆರೋಪಿ
ಸಾಂಕೇತಿಕ ಚಿತ್ರ
Follow us on

5 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನೊಬ್ಬ ಅತ್ಯಾಚಾರ ಮಾಡಿದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​​ನಲ್ಲಿ ನಡೆದಿದೆ. ಮಂಗಳವಾರ ದುರ್ಘಟನೆ ನಡೆದಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲಾಪರಾಧ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಸದ್ಯ ಆತನನ್ನು ನೊಯ್ಡಾದ ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ. 

ಬಾಲಕಿ ತನ್ನ ಸೋದರನೊಂದಿಗೆ ಟ್ಯೂಷನ್​ಗೆ ಹೋಗಿದ್ದಳು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಶಿಕ್ಷಕಿ ಮನೆಯಲ್ಲಿ ಇರಲಿಲ್ಲ. ಬದಲಿಗೆ ಅವರ ಮಗ ಇದ್ದ. ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಆಕೆಯ ಸೋದರ, ತನಗೆ ಮಾರ್ಕೆಟ್​ಗೆ ಹೋಗಬೇಕು ಎಂದು ಅವಳನ್ನು ಅಲ್ಲೇ ಬಿಟ್ಟು ವಾಪಸ್​ ಮನೆಗೆ ಬಂದ. ಆದರೆ ಹಾಗೆ ಮಾಡಿದ್ದೇ ತಪ್ಪಾಯ್ತು. ಶಿಕ್ಷಕಿಯ 13ವರ್ಷದ ಬಾಲಕ ಆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಈ ವಿಚಾರವನ್ನು ಹುಡುಗಿ ಮನೆಗೆ ಹೋಗಿ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ತನ್ನ ಕೆಳಹೊಟ್ಟೆ ನೋಯುತ್ತಿರುವುದಾಗಿಯೂ ತಿಳಿಸಿದ್ದಾಳೆ. ಪುಟ್ಟ ಹುಡುಗಿಯ ಬಟ್ಟೆಯ ಮೇಲೆಲ್ಲ ರಕ್ತದ ಕಲೆಗಳು ಉಂಟಾಗಿದ್ದವು. ನಂತರ ತಾಯಿ ಕೂಡಲೇ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿ ಆಸ್ಪತ್ರೆಯಲ್ಲೇ ಇದ್ದು, ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Hampi: ಹಾಯ್, ಹಲೋ ಎನ್ನುವ ಬದಲು ಸ್ವಚ್ಛ ಭಾರತ ಎಂದು ಮಾತು ಶುರು ಮಾಡಿ: ಸಚಿವ ನಾರಾಯಣ ಗೌಡ ಕರೆ

ನವೆಂಬರ್ 1ರಿಂದ ಅನಕ್ಷರಸ್ಥ ಖೈದಿಗಳಿಗೆ ಶಿಕ್ಷಣ; ಜೈಲಿನೊಳಗಿನ ಅಕ್ಷರಸ್ಥರಿಂದಲೇ ಪಾಠ: ಗೃಹ ಸಚಿವ ಆರಗ ಜ್ಞಾನೇಂದ್ರ