ಇದು ಉತ್ತರ ಪ್ರದೇಶದಲ್ಲಿ ನಡೆಯುತ್ತಿರಬಹುದು, ಇಲ್ಲಿ ಅಲ್ಲ: ಯುಪಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್
Delhi High Court ಈ ಕೆಲಸ ಇಲ್ಲಿ ನಡೆಯುವುದಿಲ್ಲ, ಯಾವುದೇ ಅಕ್ರಮ ಕೆಲಸ ಇಲ್ಲಿ ನಡೆಯವಲ್ಲ. ನೀವು ದೆಹಲಿಯಿಂದ ಜನರನ್ನು ವಶಕ್ಕೆ ತೆಗೆದು ನಾವು ಶಾಮ್ಲಿಯಿಂದ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಅರೆಸ್ಟ್ ವಾರೆಂಟ್ ತೋರಿಸುವಿರಿ, ನಾವು ಅದನ್ನು ಇಲ್ಲಿ ಅನುಮತಿಸುವುದಿಲ್ಲ
ದೆಹಲಿ: ದೆಹಲಿಯಿಂದ ಮಹಿಳೆಯೊಬ್ಬರು ಪುರುಷನೊಂದಿಗೆ ಓಡಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರನ್ನು ದೆಹಲಿ ಹೈಕೋರ್ಟ್ ಗುರುವಾರ ಕಟುವಾಗಿ ಟೀಕಿಸಿದ್ದು ರಾಷ್ಟ್ರ ರಾಜಧಾನಿಯಲ್ಲಿ ಇಂತಹ “ಕಾನೂನುಬಾಹಿರ ಕ್ರಮ” ವನ್ನು ಸಹಿಸುವುದಿಲ್ಲ ಎಂದು ಹೇಳಿದೆ. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಜುಲೈ 1, 2021 ರಂದು ಆ ದಂಪತಿ ಸ್ವಂತ ಇಚ್ಛೆಯಿಂದ ವಿವಾಹವಾದರು ಎಂದಿದೆ. ಮಹಿಳೆಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯ ತಂದೆ ಮತ್ತು ಸಹೋದರನನ್ನು ಉತ್ತರ ಪ್ರದೇಶ ಪೊಲೀಸರು ಆಗಸ್ಟ್ 6 ಮತ್ತು 7 ರ ಮಧ್ಯರಾತ್ರಿ ಅವರ ನಿವಾಸದಿಂದ ಕರೆದೊಯ್ದರು ಮತ್ತು ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ದಂಪತಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
“ಯೇ ಕಾಮ್ ನಾ ಯಹಾ ದಿಲ್ಲಿ ಮೇ ನೈ ಚಲೇಗಾ, ಇಲ್ಲೀಗಲ್ ಕಾಮ್ ಕೋಯಿ ಬೀ, ಕಿ ಆಪ್ ಆಯೇ ದಿಲ್ಲಿ ಸೆ ಲೌಗ್ ಉಠಾದೇ ಔರ್ ಕೆಹ್ ದೇ ಹಮ್ ನೆ ತೋ ಶಾಮ್ಲಿ ಸೆ ಉಠಾಯಾ ಥಾ ಔರ್ ಅರೆಸ್ಟ್ ದಿಖಾ ದಿ. ಯೇ ಹಮ್ ನಾ ಯಹಾನ ನಹೀ ಚಲ್ನೆ ದೇಂಗೆ ( ಈ ಕೆಲಸ ಇಲ್ಲಿ ನಡೆಯುವುದಿಲ್ಲ, ಯಾವುದೇ ಅಕ್ರಮ ಕೆಲಸ ಇಲ್ಲಿ ನಡೆಯವಲ್ಲ. ನೀವು ದೆಹಲಿಯಿಂದ ಜನರನ್ನು ವಶಕ್ಕೆ ತೆಗೆದು ನಾವು ಶಾಮ್ಲಿಯಿಂದ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಅರೆಸ್ಟ್ ವಾರೆಂಟ್ ತೋರಿಸುವಿರಿ, ನಾವು ಅದನ್ನು ಇಲ್ಲಿ ಅನುಮತಿಸುವುದಿಲ್ಲ ) ”ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಉತ್ತರ ಪ್ರದೇಶ ಪೊಲೀಸರಿಗೆ ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಪ್ರತಿ ಹಂತದಲ್ಲೂ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಮತ್ತು ಪೊಲೀಸರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅದು ಹೇಳಿದೆ.
ಅಗರ್ ಆಪ್ ಬಿಲ್ಕುಲ್ ಆಂಖ್ ಬಂದ್ ಕರ್ಕೆ ಔರ್ ದಿಮಾಗ್ ಬಂದ್ ಕರ್ಕೆ ಕಾಮ್ ಕರ್ತೇ ಹೈ, ಹಮಾರೆ ಪಾಸ್ ಕೋಯಿ ಇಲಾಜ್ ನಹೀ. ಆಪ್ ಏಕ್ ಬಾರ್ ಜಬ್ ದಿಲ್ಲಿ ಆಯೇಂಗೆ, ಇಂಟಿಮೇಶನ್ ಲೋಕಲ್ ಥಾನೇ ಕೋ ಡೇಂಗೆ, ಉಸ್ಕೆ ಬಾದ್ ಕಾರ್ವಾಯಿ ಕರ್ನೇಗೆ? ಅಪ್ನಿ ಮರ್ಝಿ ಸೆ ಉಠಾಕೆ ಕಿಸಿಕೊ ನಹೀ ಲೇಜಾಸಕ್ತೇ. ಯಹಿ ಕಾನೂನ್ ಕೆಹ್ತಾ ಹೈನಾ? ಹರ್ ಸ್ಟೆಪ್ ಪೆ ಕಾನೂನ್ ಪೆ ಉಲ್ಲಂಘನೆ ಕಿಯಾ. ಯೇ ಚೀಜ್ ದಿಲ್ಲಿ ಮೈನ್ ಬರ್ದಾಶ್ ನಹೀ ಕರೆಂಗೆ,”(ನೀವು ಕಣ್ಣು ಮುಚ್ಚಿ, ಬುದ್ದಿ ಬಳಸದೆ ಕೆಲಸ ಮಾಡುವುದಾದರೆ ನಮ್ಮಲ್ಲಿ ಅದಕ್ಕೆ ಮದ್ದಿಲ್ಲ. ನೀವು ಒಂದು ಬಾರಿ ದಿಲ್ಲಿಗೆ ಬಂದು ಸ್ಥಳೀಯ ಠಾಣೆಗೆ ಸೂಚನೆ ನೀಡಿದ ನಂತರ ತನಿಖೆ ನಡೆಸಬೇಕಿತ್ತಲ್ಲವೇ? ನಿಮ್ಮಿಷ್ಟದಂತೆ ಯಾರನ್ನೂ ಎತ್ತಿ ತೆಗೆದುಕೊಂಡು ಹೋಗುವಂತಿಲ್ಲ. ಕಾನೂನು ಹೇಳುತ್ತಿರುವುದೂ ಇದನ್ನೇ ಅಲ್ಲವೇ. ನೀವು ಪ್ರತಿಯೊಂದು ಹೆಜ್ಜೆಯಲ್ಲೂ ಕಾನೂನು ಉಲ್ಲಂಘಿಸಿದಿರಿ. ಇದನ್ನು ದಿಲ್ಲಿಯಲ್ಲಿ ಸಹಿಸುವುದಿಲ್ಲ) ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಪೊಲೀಸರ ಪ್ರಕಾರ, ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 06 ರಂದು ಐಪಿಸಿ ಸೆಕ್ಷನ್ 366 ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ಅವರನ್ನು ಸೆಪ್ಟೆಂಬರ್ 08 ರಂದು ಯುಪಿ ಜಿಲ್ಲೆಯ ಶಾಮ್ಲಿ ಜಿಲ್ಲೆಯ ಕುಧಾನ ಬಸ್ ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ಶಾಮ್ಲಿಯಿಂದ ಪೊಲೀಸರು ಆಗಮಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದು ಇಲ್ಲಿನ ನಿವಾಸದಿಂದ ಕರೆದುಕೊಂಡು ಹೋಗಲಾಗಿದೆ ಎಂದು ದೆಹಲಿಯ ಕುಟುಂಬ ನ್ಯಾಯಾಲಯಕ್ಕೆ ತಿಳಿಸಿದೆ.
ಈ ವಿಷಯದಲ್ಲಿ ಮುಂದುವರಿಯುವ ಮೊದಲು ಮಹಿಳೆಯ ವಯಸ್ಸನ್ನು ಪರಿಶೀಲಿಸದಿದ್ದಕ್ಕಾಗಿ ನ್ಯಾಯಾಲಯವು ಯುಪಿ ಪೊಲೀಸರನ್ನು ಪ್ರಶ್ನಿಸಿತು. “ಹುಡುಗಿ ಮೇಜರ್ ಅಲ್ಲವೇ ಎಂದು ಕೇಳಿದ್ದೀರಾ? ಅವಳು ಮೇಜರ್ ಆಗಿದ್ದರೆ, ಅವಳು ಅಥವಾ ಅವಳ ಪೋಷಕರು ಮೇಲುಗೈ ಸಾಧಿಸುತ್ತಾಳೆ. ನೀವು ತನಿಖೆ ಮಾಡಿದಾಗ, ನೀವು ದೂರುದಾರರನ್ನು ಕೇಳುವುದಿಲ್ಲವೇ? ಆರೋಪಿಗಳನ್ನು ಬಂಧಿಸಲು ಪ್ರಾರಂಭಿಸುತ್ತೀರಾ? ಎಂದು ಕೇಳಿದೆ.
ಬಂಧಿತ ಸ್ಥಳದ ಬಗ್ಗೆ ನೈಜ ಸಂಗತಿಗಳನ್ನು ಬಹಿರಂಗಪಡಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ಮಾರ್ಗದ ಸಿಸಿಟಿವಿ ಕ್ಯಾಮೆರಾ ರೆಕಾರ್ಡ್‌ಗಳನ್ನು ಪಡೆಯುವುದಾಗಿ ಎಚ್ಚರಿಸಿದೆ. “ಆಪ್ ನೆ ತೋ ಖುದಾನ ದಿಖಾಯಾ ಹೈ, ಮೈನೆ ನಾ ಸಾರೆ ಸಿಸಿಟಿವಿ ನಿಕಲ್ವಾ ಲೂಂಗಿ ಅಗರ್ ಮುಝೆ ಮಿಲ್ ಗಯೇ ಕಿ ಶಾಮ್ಲಿ ಪೋಲೀಸ್ ದಿಲ್ಲಿ ಆಯಿ ಥಿ, ಮೈ ಆಪ್ ಸಬ್ ಕೆ ಖಿಲಾಫ್ ಇಲಾಖಾ ಎನ್ವೈರಿ ಸ್ಟಾರ್ಟ್ ಕರ್ವಾದೂಂಗಿ” (ನೀವು ನಿಮ್ಮ ಇಚ್ಛೆಯಂತೆ ಮಾಡಿದ್ದೀರಿ. ನಾನು ಎಲ್ಲ ಸಿಸಿಟಿವಿ ಪರಿಶೀಲಿಸುವೆ. ಶಾಮ್ಲಿ ಪೊಲೀಸ್ ದಿಲ್ಲಿ ಗೆ ಬಂದಿದ್ದಾರೆ ಎಂದು ನನಗೆ ಗೊತ್ತಾದರೆ ನಾನು ಇಲಾಖೆಯಿಂದ ತನಿಖೆ ಆದೇಶಿಸುವೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಪೊಲೀಸರು ಮಹಿಳೆಯಲ್ಲಿ ಯಾಕೆ ಕೇಳಿಲ್ಲ. ಇದರ ಬದಲು ಅವರ ಗಂಡನ ತಂದೆ ಮತ್ತು ಸಹೋದರನನ್ನು ಬಂಧಿಸಲು ಧಾವಿಸಿದರು ಎಂದು ನ್ಯಾಯಾಲಯವು ಆಘಾತವನ್ನು ವ್ಯಕ್ತಪಡಿಸಿತು. ಮಹಿಳೆ 21 ವರ್ಷ ವಯಸ್ಸಿನವಳು ಮತ್ತು ಅಪ್ರಾಪ್ತಳಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. “ಅಗರ್ ಆಪ್ಕೋ ಔರ್ ಆಪ್ಕೆ IO [ತನಿಖಾ ಅಧಿಕಾರಿ] ಕೋ ಫೈಲ್ ಪಡ್ನೇ ನಹೀ ಆತಿ, ತೌ ಮೇರೆ ಪಾಸ್ ಇಸ್ಕಾ ಕೋಯಿ ಇಲಾಜ್ ನಹೀ ಹೈ (ನಿಮಗೆ ಮತ್ತು ನಿಮ್ಮ ತನಿಖಾ ಅಧಿಕಾರಿಗೆ ಫೈಲ್ ಓದಲು ಬರುವುದಿಲ್ಲವೆಂದಾದರೆ ಇದಕ್ಕೆ ನಮ್ಮಲ್ಲಿ ಯಾವುದೇ ಮದ್ದು ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಹೇಳಿಕೆಯನ್ನು ತಕ್ಷಣವೇ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ಆಕೆಯನ್ನು ತನ್ನ ವ್ಯಾಪ್ತಿಯಿಂದ ಹೊರಗೆ ಕರೆದೊಯ್ಯಲು ಬಿಡುವುದಿಲ್ಲ ಎಂದು ಹೇಳಿದೆ. “ಆಪ್ ವಹಾನ್ (ಯುಪಿ) ಲೇಜಾಕೆ ಹರಾಸ್ ನಹೀ ಕರ್ ಸಖ್ತೆ. ಮೇನ್ ಉಂಕೋ ಯಹಾನ್ ದಿಲ್ಲಿ ಕಿ ನ್ಯಾಯವ್ಯಾಪ್ತಿ ಸೆ ನಹೀ ಜಾನೇ ದುಂಗಿ ( ನೀವು ಯುಪಿಗೆ ಕರೆದುಕೊಂಡು ಹೋಗಿ ಪೀಡಿಸಬಾರದು. ನಾನು ಅವರನ್ನು ದಿಲ್ಲಿಯ ನ್ಯಾಯವ್ಯಾಪ್ತಿಯಿಂದ ಹೊರ ಹೋಗಲು ಬಿಡುವುದಿಲ್ಲ) ” ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡದೆ ಪ್ರಕರಣದಲ್ಲಿ ಬಂಧಿಸಿದ್ದಕ್ಕಾಗಿ ಯುಪಿ ಪೊಲೀಸರನ್ನು ಟೀಕಿಸಿದ್ದು, ಮಂಗಳವಾರ ನ್ಯಾಯಾಲಯವು ಯುಪಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಾಮ್ಲಿ ಅವರನ್ನು ಪ್ರಕರಣದ ಫೈಲ್‌ನೊಂದಿಗೆ ಗುರುವಾರ ಹಾಜರಾಗುವಂತೆ ಕೇಳಿದೆ. ಅಧಿಕಾರಿಗಳನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಮಹಿಳೆ ಮೇಜರ್ ಆಗಿದ್ದು ಆಕೆತನ್ನ ಸ್ವಂತ ಇಚ್ಛೆಯ ಮೇರೆಗೆ ತನ್ನ ಪೋಷಕರ ಮನೆಯನ್ನು ತೊರೆದು [ಪುರುಷನನ್ನು] ಮದುವೆಯಾಗಿದ್ದಾಳೆ ಮತ್ತು ಸೆಕ್ಷನ್ 366 IPC ಅಡಿಯಲ್ಲಿ ಅಪರಾಧ ಮತ್ತು ಸೆಕ್ಷನ್ 368 IPC ಅಡಿಯಲ್ಲಿ ಪರಿಣಾಮವಾಗಿ ಅಪರಾಧವನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ವಿಫಲರಾಗಿದ್ದೀರಿ. ಮಹಿಳೆ ದೊಡ್ಡವಳು ಅಥವಾ ಚಿಕ್ಕವಳು ಎಂದು ಕಂಡುಹಿಡಿಯದೆ ಮತ್ತು ಅವಳಿಂದ ಸರಿಯಾದ ಮಾಹಿತಿ ಪಡೆಯದೆ ಎಫ್‌ಐಆರ್‌ನಿಂದ ಬಂಧನಗಳನ್ನು ಮಾಡಿರುವುದು ದುರದೃಷ್ಟಕರ,” ಎಂದು ಅಕ್ಟೋಬರ್ 26 ರ ಆದೇಶದಲ್ಲಿ ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.
ವ್ಯಕ್ತಿಯ ತಂದೆ ಮತ್ತು ಸಹೋದರನನ್ನು ಯುಪಿ ಪೊಲೀಸರು ಬಂಧಿಸಲು ಮತ್ತು ದೆಹಲಿ ಪೊಲೀಸರಿಗೆ ತಿಳಿಸದೆ ದೆಹಲಿಯಿಂದ ಕರೆದೊಯ್ದಿರುವುದು “ಕಾನೂನು ಉಲ್ಲಂಘನೆ” ಎಂದು ನ್ಯಾಯಾಲಯ ಹೇಳಿದೆ.