ಒಟ್ಟಿಗೇ ಮದ್ಯಪಾನ ಮಾಡಲು ಲಿಕ್ಕರ್​ ಶಾಪ್​​​ಗೆ ಹೋದ ಸ್ನೇಹಿತರು; 10 ರೂ.ಗಾಗಿ ನಡೆದೇ ಹೋಯ್ತು ಭೀಕರ ಕೊಲೆ

ತಲೆಗೆ ತೀವ್ರವಾದ ಗಾಯವಾದ ಕಾರಣ ತೀವ್ರ ರಕ್ತಸ್ರಾವವಾಗಿ ಭಗವತ್​ ಸೀತಾರಾಮ್​ ಮೃತಪಟ್ಟಿದ್ದಾರೆ.   ಘಟನೆ ನಡೆದ ಒಂದೇ ತಾಸಿನಲ್ಲಿ ಇಬ್ಬರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

ಒಟ್ಟಿಗೇ ಮದ್ಯಪಾನ ಮಾಡಲು ಲಿಕ್ಕರ್​ ಶಾಪ್​​​ಗೆ ಹೋದ ಸ್ನೇಹಿತರು; 10 ರೂ.ಗಾಗಿ ನಡೆದೇ ಹೋಯ್ತು ಭೀಕರ ಕೊಲೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 28, 2021 | 2:37 PM

ಅಲ್ಕೋಹಾಲ್​​ನಿಂದ ನಡೆಯುವ ಕ್ರೈಂಗಳು ಒಂದೆರಡಲ್ಲ. ಮದ್ಯದ ಅಮಲಿನಲ್ಲಿ ನಡೆಯುವ ಅಪರಾಧಗಳು ಒಂದಷ್ಟಾದರೆ, ಈ ಮದ್ಯಕ್ಕಾಗಿ ನಡೆಯುವ ಕ್ರೈಂಗಳು ಮತ್ತೊಂದಷ್ಟು. ಇದೀಗ ಮದ್ಯಪಾನ ಮಾಡುವ ವಿಚಾರಕ್ಕೆ 50 ವರ್ಷದ ವ್ಯಕ್ತಿಯೊಬ್ಬರನ್ನು ಅವರ ಇಬ್ಬರು ಸ್ನೇಹಿತರೇ ಹತ್ಯೆ ಮಾಡಿರುವ ದುರ್ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ.  ಮೃತ ವ್ಯಕ್ತಿಯನ್ನು ಭಗವತ್​ ಸೀತಾರಾಮ್​ ಫೇಸ್​​ ಎಂದು ಗುರುತಿಸಲಾಗಿದೆ. ಹಾಗೇ ಕೊಲೆ ಮಾಡಿದ ಆರೋಪಿಗಳನ್ನು ವಿನೋದ್​ ಲಕ್ಷ್ಮಣ್​ ವಾಂಖೆಡೆ (40) ಮತ್ತು ದಿಲೀಪ್​ ತೃಯಂಬಕ ಬೊಡ್ಡೆ ಎಂದು ಹೇಳಲಾಗಿದೆ.  

ಈ ಮೂವರು ಮದ್ಯಪಾನ ಮಾಡುವ ಯೋಜನೆ ಹಾಕಿಕೊಂಡು ಒಂದು ಲಿಕ್ಕರ್ ಶಾಪ್​ಗೆ ಹೋಗಿದ್ದರು. ಅಲ್ಲಿ ಭಗವತ್​ ಸೀತಾರಾಮ್​ ಅವರ ಬಳಿ 10 ರೂಪಾಯಿ ಕೊಡುವಂತೆ ಉಳಿದಿಬ್ಬರು ಕೇಳಿದ್ದಾರೆ. ಆದರೆ ಅಷ್ಟು ಹಣ ನೀಡಲು ಅವರು ನಿರಾಕರಿಸಿದ್ದಾರೆ ಮತ್ತು ಆ ಅಂಗಡಿಯಿಂದ ಹೊರಟಿದ್ದಾರೆ. ಕೋಪಗೊಂಡ ವಿನೋದ್​ ಮತ್ತು ದಿಲೀಪ್​ ಹಿಂದಿನಿಂದ ಹೋಗಿ ಭಗವತ್​ ಅವರ ತಲೆಗೆ ಮರದ ಕೋಲಿನಿಂದ ಹೊಡೆದಿದ್ದಾರೆ.  ತಲೆಗೆ ತೀವ್ರವಾದ ಗಾಯವಾದ ಕಾರಣ ರಕ್ತಸ್ರಾವವಾಗಿ ಭಗವತ್​ ಮೃತಪಟ್ಟಿದ್ದಾರೆ.

ಘಟನೆ ನಡೆದ ಒಂದೇ ತಾಸಿನಲ್ಲಿ ಇಬ್ಬರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಲಿಕ್ಕರ್​ ಶಾಪ್​ವೊಂದರ ಬಳಿ ವ್ಯಕ್ತಿಯೊಬ್ಬ ರಕ್ತದ ಮಡುವಲ್ಲಿ ಬಿದ್ದಿದ್ದಾಗಿ ನಮಗೆ ಮಾಹಿತಿ ಬಂತು.  ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್​ ಅಧಿಕಾರಿ ಪ್ರಲ್ಹಾದ್ ಕಟ್ಕರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಯಕ್ತ ಸಿದ್ದಗಂಗಾ ಮಠದ ಹತ್ತು ಸಾವಿರ ಮಕ್ಕಳಿಂದ ಕನ್ನಡ ಹಾಡುಗಳ ಗಾಯನ‌

ಪಟಾಕಿ ಅವಘಡಗಳಾದರೆ ಚಿಕಿತ್ಸೆಗೆ ಸಿದ್ಧತೆ; ಆದ್ರೆ ಪಟಾಕಿ ತಂಟೆಗೆ ಹೋಗಬೇಡಿ: ಮಿಂಟೋ ಆಸ್ಪತ್ರೆ ವೈದ್ಯರ ಕಾಳಜಿ, ಸಿದ್ಧತೆ ಹೀಗಿದೆ