AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿ ಅವಘಡಗಳಾದರೆ ಚಿಕಿತ್ಸೆಗೆ ಸಿದ್ಧತೆ; ಆದ್ರೆ ಪಟಾಕಿ ತಂಟೆಗೆ ಹೋಗಬೇಡಿ: ಮಿಂಟೋ ಆಸ್ಪತ್ರೆ ವೈದ್ಯರ ಕಾಳಜಿ, ಸಿದ್ಧತೆ ಹೀಗಿದೆ

ಪಟಾಕಿ ಅವಘಡಗಳ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆಯಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದ್ದು 94808 32430 ಮತ್ತು 92817 40137 ಸಂಖ್ಯೆಗೆ ಮೊಬೈಲ್​ ಕರೆ ಮಾಡಬಹುದಾಗಿದೆ. ಪಟಾಕಿ ಸಿಡಿತದಿಂದ ಗಾಯಗಳಾದರೆ ಕರೆ ಮಾಡಿ ಬರಬಹುದು ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ತಿಳಿಸಿದ್ದಾರೆ.

ಪಟಾಕಿ ಅವಘಡಗಳಾದರೆ ಚಿಕಿತ್ಸೆಗೆ ಸಿದ್ಧತೆ; ಆದ್ರೆ ಪಟಾಕಿ ತಂಟೆಗೆ ಹೋಗಬೇಡಿ: ಮಿಂಟೋ ಆಸ್ಪತ್ರೆ ವೈದ್ಯರ ಕಾಳಜಿ, ಸಿದ್ಧತೆ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಸಾಧು ಶ್ರೀನಾಥ್​|

Updated on:Oct 28, 2021 | 1:30 PM

Share

ಬೆಂಗಳೂರು: ಸರ್ವವ್ಯಾಪಿಯಾಗಿ ಆಚರಿಸುವ ಜನ ಮೆಚ್ಚಿನ ದೀಪಾವಳಿ ಹಬ್ಬ ನವೆಂಬರ್ ಮೊದಲ ವಾರದಲ್ಲಿ ಆಚರಿಸಲಿದ್ದೇವೆ. ಈ ವೇಳೆ ಪಟಾಕಿ ದುರಂತಗಳು ಸಂಭವಿಸದಿದ್ದರೆ ಸಾಕಪ್ಪಾ ಎಂಬುದು ಎಲ್ಲರ ಕಾಳಜಿ. ಆದರೂಪಟಾಕಿ ದುರಂತಗಳು ಘಟಿಸುತ್ತಲೇ ಇರುತ್ತವೆ. ಸಮಾಧಾನಕರ ಸಂಗತಿಯೆಂದರೆ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಪಟಾಕಿ ಅವಾಂತರಗಳಿಗೆ ಬ್ರೇಕ್​ ಬಿದ್ದಿದೆ. ಅದರಲ್ಲೂ ಈಗ ಕೊರೊನಾದಿಂದಾಗಿ ಪಟಾಕಿ ಹಚ್ಚುವುದು ಕಡಿಮೆಯಾಗಿದೆ ಅನ್ನಬಹುದು. ಏನೇ ಆದರೂ ಆಸ್ಪತ್ರೆಗಳು ಮತ್ತು ವೈದ್ಯರು ಪಟಾಕಿ ಅವಘಡಗಳಾದರೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳಾದರೆ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ತಿಳಿಸಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಅವಘಡಗಳ ಚಿಕಿತ್ಸೆಗೆ ವ್ಯವಸ್ಥೆ ಹೀಗಿದೆ: ಮಿಂಟೋ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 90 ಬೆಡ್​ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳಿಗಾಗಿಯೇ ಪ್ರತ್ಯೇಕ ಬೆಡ್ ವ್ಯವಸ್ಥೆಯಿದೆ. ಮಿಂಟೋ ಆಸ್ಪತ್ರೆಯಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದ್ದು 94808 32430 ಮತ್ತು 92817 40137 ಸಂಖ್ಯೆಗೆ ಮೊಬೈಲ್​ ಕರೆ ಮಾಡಬಹುದಾಗಿದೆ. ಪಟಾಕಿ ಸಿಡಿತದಿಂದ ಗಾಯಗಳಾದರೆ ಕರೆ ಮಾಡಿ ಬರಬಹುದು ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ತಿಳಿಸಿದ್ದಾರೆ.

ಮಹಿಳೆಯರು ಮತ್ತು ಪುರುಷರು ಮತ್ತೆ ಮಕ್ಕಳಿಗೆ ಅಂತಾ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡ್ತೇವೆ. 90 ಬೆಡ್ ಆದರೂ ವ್ಯವಸ್ಥೆ ಮಾಡ್ತೇವೆ. ಆದರೆ ಅಷ್ಟೊಂದು ಜನ ಅನಾಹುತ ಆಗೋದು ಬೇಡ ಅನ್ನೋದು ನಮ್ಮ ಆಶಯ ಎಂದು ಮಿಂಟೋ ಆಸ್ಫತ್ರೆ ನಿರ್ದೇಶಕಿ ಡಾ. ಸುಜಾತ ಕಳಕಳಿ ವ್ಯಕ್ತಪಡಿಸಿದ್ದಾರೆ.

ಅಚಾನಕ್ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು? – ಪಟಾಕಿ ಸಿಡಿಸುವಾ ಫಸ್ಟ್ ಆ್ಯಡ್ ಬಾಕ್ಸ್ ರೆಡಿ ಇಟ್ಟುಕೊಳ್ಳಿ – ಉದ್ದದ ಅಗರ್ಬತ್ತಿ ಇಟ್ಟುಕೊಂಡು ಪಟಾಕಿ ಹಚ್ಚಿ – ಜಾಸ್ತಿ ಬೆಂಕಿ‌ ಉಗುಳುವ ಪಟಾಕಿ ಬಳಸ ಬೇಡಿ – ಹೂವಿನ ಪಾಟ್ ಎತ್ತರದ ಜಾಗದಲ್ಲಿ ಪಟಾಕಿ‌ ಇಟ್ಟು ಸಿಡಿಸಬೇಡಿ – ಸಾಧ್ಯವಾದಷ್ಟು ತೆರೆದ ಜಾಗದಲ್ಲಿ ಪಟಾಕಿ ಸಿಡಿಸಿ – ಅಕಸ್ಮಾತ್ ಕಣ್ಣಿಗೆ ಗಾಯವಾದರೆ ಒದ್ದೆ ಬಟ್ಟೆ ಕಣ್ಣಿನ ಮೇಲೆ ಇಡಿ – ವಿಳಂಬ ಮಾಡದೆ ತಕ್ಷಣವೇ ಆಸ್ಪತ್ರೆ ಸೇರಿಸಿ – ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ ‌ಕಣ್ಣನ್ನು ಉಜ್ಜಬಾರದು – 90 ಬೆಡ್ ಗಳು ಮಿಂಟೋ ಆಸ್ಪತ್ರೆಯಲ್ಲಿ ಮೀಸಲು

ಪಟಾಕಿ ಸುಡುವಾಗ ಏನು ಮಾಡಬಾರದು..? – 5 ವರ್ಷದೊಳಗಿನ‌ ಮಕ್ಕಳನ್ನು ಪಟಾಕಿ ಸಿಡಿಸಲು ಬಿಡಬಾರದು – ಮನೆಯೊಳಗೆ ಮತ್ತು ಪಾರ್ಕಿಂಗ್ ಜಾಗದಲ್ಲಿ ಪಟಾಕಿ ಸಿಡಿಸಬಾರದು – ಸುಟ್ಟ ಪಟಾಕಿಯನ್ನು ಕಂಡಕಂಡಲ್ಲಿ ಎಸೆಯಬಾರದು – ಸುಟ್ಟ ಪಟಾಕಿಯನ್ನು ಮತ್ತೆ ಮತ್ತೆ ಸುಡಬಾರದು – ತೆಳು ಬಟ್ಟೆಗಳನ್ನು ಧರಿಸಿ ಪಟಾಕಿ ಸಿಡಿಸಬಾರದು – ವಿದ್ಯುತ್ ಸೆಂಟರ್ ಪಾಯಿಂಟ್ ಗಳಿಂದ ದೂರ ಇರುವುದು ಕಡ್ಡಾಯ

(Dont burst crackers deepavali crackers accidents bangalore minto hospital gets ready for treatment and service)

Published On - 1:26 pm, Thu, 28 October 21