ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್, ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ

ಆಧಿಚುಂಚನಗಿರಿ ಶ್ರೀಗಳಾದ ಡಾ.ನಿರ್ಮಲಾನಂದನಾಥ ಸ್ವಾಮಿಜಿಯವರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಕೆಗೋಪಾಲಯ್ಯನವರ ನೇತೃತ್ವದಲ್ಲಿ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್, ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ
ಹಾಸನಾಂಬೆ ದೇವಸ್ಥಾನ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Oct 28, 2021 | 12:59 PM

ಹಾಸನ: ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಭೆಯ ದರ್ಶನಕ್ಕೆ ಬಾಗಿಲುಗಳು ಓಪನ್ ಆಗಿವೆ. ಅರ್ಚಕರು ಪೂಜೆ ಸಲ್ಲಿಸಿ ಹಾಸನದ ಹಾಸನಾಂಬೆ ದೇಗುಲದ ಬಾಗಿಲು ಓಪನ್ ಮಾಡಿದ್ದಾರೆ. ಮೊದಲ ದಿನ ಆಹ್ವಾನಿತ ಗಣ್ಯರು, ಶಾಸಕರು, ಸಂಸದರು, ನಗರಸಭೆ ಸದಸ್ಯರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದ್ದು, ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೂ ಸಹ ಸರತಿ ಸಾಲಿನಲ್ಲಿ ಭಕ್ತರು ನಿಂತು ದೇವಿಯ ದರ್ಶನಕ್ಕಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.

12 ಗಂಟೆ 17 ನಿಮಷಕ್ಕೆ ಉಗೇ ಉಗೇ ಹಾಸನಾಂಬೆ ಘೋಷಣೆ ನಡುವೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಓಪನ್ ಮಾಡಲಾಗಿದೆ. ಬನ್ನಿ ಕಡಿದು ಶುಭ ಮುಹೂರ್ತ ದಂದು ದರ್ಶನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಆಧಿಚುಂಚನಗಿರಿ ಶ್ರೀಗಳಾದ ಡಾ.ನಿರ್ಮಲಾನಂದನಾಥ ಸ್ವಾಮಿಜಿಯವರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಕೆಗೋಪಾಲಯ್ಯನವರ ನೇತೃತ್ವದಲ್ಲಿ ದೇಗುಲದ ಬಾಗಿಲು ತೆರೆಯಲಾಗಿದೆ.

ಪ್ರಸಿದ್ಧ ಹಾಸನಾಂಬ ದೇವಿಯ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ನವೆಂಬರ್ 6ರವರೆಗೂ ಈ ಅದ್ಧೂರಿ ಉತ್ಸವ ನಡೆಯಲಿದೆ. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು ಹಾಸನಾಂಬೆ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕಾರಣಕ್ಕೆ 2 ವರ್ಷಗಳಿಂದ ಹಾಸನಾಂಬೆ ದರ್ಶನ ಇಲ್ಲದೆ ನಿರಾಸೆಗೊಂಡಿದ್ದ ಭಕ್ತರಿಗೆ ಇಂದಿನಿಂದ ದೇವಿ ದರ್ಶನ ಸಿಗಲಿದೆ. ವರ್ಷದ ಬಳಿಕ ಹಾಸನಾಂಬೆ ದರ್ಶನಕ್ಕೆ ಮುಕ್ತವಾಗಲಿದ್ದು, ಕಳೆದ ವರ್ಷ ಕೊರೊನಾ ಕಾರಣಕ್ಕೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನಿರಾಕರಿಸಿ ಆನ್ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕೊವಿಡ್ ಲಸಿಕೆ ಪಡೆದವರಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 5ರ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಸಿಗಲಿದೆ ದೇವಿ ದರ್ಶನಕ್ಕೆ ಬರುವ ಭಕ್ತರು ಲಸಿಕೆ ಪಡೆದ ಪ್ರಮಾಣ ಪತ್ರ, ಐಡಿ ಕಾರ್ಡ್ ತೋರಿಸಬೇಕಿದೆ. ಕೋವಿಡ್ ಲಸಿಕೆ ಪ್ರಮಾಣ ಪತ್ರ ಪರಿಶೀಲನೆಗೆ 14 ಕೌಂಟರ್ ತೆರೆಯಲಾಗಿದ್ದು, ಕೋವಿಡ್ ನಿಯಮ ಪಾಲನೆಗಾಗಿ ತಂಡಗಳನ್ನ ರಚಿಸಲಾಗಿದೆ. ಹಾಗೇ ನೇರ ದರ್ಶನ ಬಯಸೋ ಭಕ್ತರಿಗೆ 300 ರೂಪಾಯಿ ಹಾಗೂ 1000 ರೂಪಾಯಿಯ ವಿಶೇಷ ಟಿಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ