ಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ, ಹೆಚ್​ಡಿ ರೇವಣ್ಣ ದಂಪತಿ; ಗರ್ಭಗುಡಿಯಲ್ಲಿ ಕುಳಿತು ಧ್ಯಾನ

ಸಾರ್ವಜನಿಕ ದರ್ಶನದ ಮೊದಲ ದಿನವೇ ಪತ್ನಿ ಭವಾನಿ ರೇವಣ್ಣ ಜತೆ ಆಗಮಿಸಿದ ಹೆಚ್​ಡಿ ರೇವಣ್ಣ ಹಾಸನಾಂಬೆ ಗರ್ಭಗುಡಿಯಲ್ಲಿ ಕುಳಿತು ದ್ಯಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ, ಹೆಚ್​ಡಿ ರೇವಣ್ಣ ದಂಪತಿ; ಗರ್ಭಗುಡಿಯಲ್ಲಿ ಕುಳಿತು ಧ್ಯಾನ
ಶತಾಯುಷಿ ಸಾಲುಮರದ ತಿಮ್ಮಕ್ಕ
Follow us
TV9 Web
| Updated By: ಆಯೇಷಾ ಬಾನು

Updated on: Oct 29, 2021 | 10:35 AM

ಹಾಸನ: ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ ಪ್ರಸಿದ್ಧ ಹಾಸನಾಂಬ ದೇವಿಯ ಮಹೋತ್ಸವ ಆರಂಭವಾಗಿದ್ದು ಹಾಸನಾಂಬೆಯ ದರ್ಶನ ಪಡೆಯಲು ಹೆಚ್ಡಿ ರೇವಣ್ಣ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಭವಾನಿ ರೇವಣ್ಣ ಜತೆ ಆಗಮಿಸಿ ಹೆಚ್​ಡಿ ರೇವಣ್ಣ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಗರ್ಭಗುಡಿಯಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ.

ಸಾರ್ವಜನಿಕ ದರ್ಶನದ ಮೊದಲ ದಿನವೇ ಪತ್ನಿ ಭವಾನಿ ರೇವಣ್ಣ ಜತೆ ಆಗಮಿಸಿದ ಹೆಚ್​ಡಿ ರೇವಣ್ಣ ಹಾಸನಾಂಬೆ ಗರ್ಭಗುಡಿಯಲ್ಲಿ ಕುಳಿತು ದ್ಯಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಶತಾಯುಷಿ ಸಾಲುಮರದ ತಿಮ್ಮಕ್ಕ ತನ್ನ ಪುತ್ರನ ಜೊತೆಗೆ ಆಗಮಿಸಿ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ ವರ್ಷಕ್ಕೊಮ್ಮೆ‌ ದರ್ಶನ ಕೊಡುವ ಅಧಿದೇವತೆ ಆಶೀರ್ವಾದ ಪಡೆದು ಗರ್ಭಗುಡಿಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಹಾಸನಾಂಬೆ ದೇವಾಲಯದ ಬಳಿ ಭಕ್ತರ ತೀವ್ರ ಆಕ್ರೋಶ ಗಣ್ಯರು ಬಂದಾಗ ದರ್ಶನ ಬಂದ್ ಮಾಡ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡದಂತೆ ಒತ್ತಾಯಿಸಿ ಹಾಸನಾಂಬೆ ದೇವಾಲಯದ ಬಳಿ ಭಕ್ತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಗಣ್ಯರು ಬಂದಾಗ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡುವುದರಿಂದ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರು ಸುಸ್ತಾಗುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಸದ್ಯ ಹೆಚ್​ಡಿ ರೇವಣ್ಣ ದಂಪತಿ ದೇವಿಯ ದರ್ಶನಕ್ಕೆ ಬಂದ ಹಿನ್ನೆಲೆ ದೇವಾಲಯ ಆಡಳಿತ ಮಂಡಳಿ ಸುಮಾರು 20 ನಿಮಿಷ ಭಕ್ತರಿಗೆ ದರ್ಶನ ಸ್ಥಗಿತಗೊಳಿಸಿದ್ದರು. ಇದರಿಂದ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ. ಮೂರ್ನಾಲ್ಕು ಗಂಟೆಯಿಂದ ಕಾದು ರೇವಣ್ಣ ಬಂದರೆಂದು ನಮ್ಮನ್ನ ನಿಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

hasanamba temple

ಪ್ರಸಿದ್ಧ ಹಾಸನಾಂಬ ದೇವಿ

ಎರಡು ವರ್ಷಗಳ ಬಳಿಕ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಭಾಗ್ಯ ದೊರೆತಿದೆ. ಭಕ್ತರಿಗೆ ಹಾಸನಾಂಬೆಯ ಮೊದಲ‌ ದಿನದ ದರ್ಶನೋತ್ಸವ ಇಂದು (ಅಕ್ಟೋಬರ್ 29) ಆರಂಭವಾಗಿದ್ದು, ಬೆಳಿಗ್ಗೆಯೇ ದೇವಾಲಯ ದತ್ತ ಸಹಸ್ರಾರು ಭಕ್ತರು ಲಗ್ಗೆಯಿಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. ನೆನ್ನೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ. ಆ ನಂತರ ಮಧ್ಯಾಹ್ನ 3 ಗಂಟೆಯಿಂದ 7 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಿ ದರ್ಶನಕ್ಕೆ ಬರುವ ಭಕ್ತರು ಲಸಿಕೆ ಪಡೆದ ಪ್ರಮಾಣ ಪತ್ರ, ಐಡಿ ಕಾರ್ಡ್ ತೋರಿಸಬೇಕಿದೆ. ಕೋವಿಡ್ ಲಸಿಕೆ ಪ್ರಮಾಣ ಪತ್ರ ಪರಿಶೀಲನೆಗೆ 14 ಕೌಂಟರ್ ತೆರೆಯಲಾಗಿದ್ದು, ಕೋವಿಡ್ ನಿಯಮ ಪಾಲನೆಗಾಗಿ ತಂಡಗಳನ್ನ ರಚಿಸಲಾಗಿದೆ. ಹಾಗೇ ನೇರ ದರ್ಶನ ಬಯಸೋ ಭಕ್ತರಿಗೆ 300 ರೂಪಾಯಿ ಹಾಗೂ 1000 ರೂಪಾಯಿಯ ವಿಶೇಷ ಟಿಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಹಾಸನಾಂಬೆಯ ಮೊದಲ‌ ದಿನದ ದರ್ಶನೋತ್ಸವ ಆರಂಭ; ಬೆಳಿಗ್ಗೆಯೇ ದೇವಾಲಯ ದತ್ತ ಲಗ್ಗೆಯಿಟ್ಟ ಸಹಸ್ರಾರು ಭಕ್ತರು