Kannada News National 140 police officers 5 from Karnataka selected for Union Home Minister’s Medal for Excellence in Investigation
140 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ; ಆಯ್ಕೆಯಾದವರಲ್ಲಿ 5 ಮಂದಿ ಕರ್ನಾಟಕದವರು
ಕರ್ನಾಟಕದಿಂದ ಶಂಕರ್ ಎಂ ರಾಗಿ, ಡಿ.ಎಸ್.ಪಿ, ರಾಮಪ್ಪ ಬಿ ಗುತ್ತೇದಾರ್, ನಿರೀಕ್ಷಕರು ತಾವರೆಕೆರೆ ಪೊಲೀಸ್ ಠಾಣೆ, ರಾಮನಗರ , ಶಿವಸ್ವಾಮಿ ಸಿ ಬಿ, ಪೊಲೀಸ್ ಇನ್ಸ್ಪೆಕ್ಟರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆ. ಬೆಂಗಳೂರು , ರುದ್ರೇಗೌಡ ಆರ್ ಪಾಟೀಲ್, ಪೊಲೀಸ್ ಇನ್ಸ್ಪೆಕ್ಟರ್ ವಿನೋಬ್ ನಗರ ಶಿವಮೊಗ್ಗ ಮತ್ತು ಪಿ.ಸುರೇಶ್ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಂ ಸಿ ಯಾರ್ಡ್ , ಬೆಂಗಳೂರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
Updated on:
Aug 12, 2023 | 1:43 PM
ದೆಹಲಿ ಆಗಸ್ಟ್ 12: 2023ನೇ ಸಾಲಿನ “ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ”ಕ್ಕೆ (Union Home Minister’s Medal for Excellence in Investigation)140 ಪೊಲೀಸ್ ಅಧಿಕಾರಿಗಳು (Police officers) ಆಯ್ಕೆಯಾಗಿದ್ದಾರೆ. ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ ಈ ಪದಕವನ್ನು 2018 ರಲ್ಲಿ ಆರಂಭಿಸಿದ್ದು ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ.
ಈ ಪ್ರಶಸ್ತಿಗಳನ್ನು ಸ್ವೀಕರಿಸುವ ಸಿಬ್ಬಂದಿಗಳಲ್ಲಿ 15 ಸಿಬಿಐ, 12 ಎನ್ಐಎ, ಉತ್ತರ ಪ್ರದೇಶದಿಂದ 10, ಕೇರಳ ಮತ್ತು ರಾಜಸ್ಥಾನದಿಂದ 9, ತಮಿಳುನಾಡಿನಿಂದ 8, ಮಧ್ಯಪ್ರದೇಶದಿಂದ 7, ಗುಜರಾತ್ನಿಂದ 6 ಮತ್ತು ಕರ್ನಾಟಕದಿಂದ 5 ಮಂದಿ ಇದ್ದಾರೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಲ್ಲಿದ್ದವರು. ಅಧಿಕೃತ ಹೇಳಿಕೆಯ ಪ್ರಕಾರ ಪ್ರಶಸ್ತಿ ಪುರಸ್ಕೃತರಲ್ಲಿ 22 ಮಹಿಳಾ ಅಧಿಕಾರಿಗಳು ಇದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕ ಪೊಲೀಸ್ ಅಧಿಕಾರಿಗಳಿವರು
ಶಂಕರ್ ಎಂ ರಾಗಿ, ಡಿ.ಎಸ್.ಪಿ, ರಾಮಪ್ಪ ಬಿ ಗುತ್ತೇದಾರ್, ನಿರೀಕ್ಷಕರು ತಾವರೆಕೆರೆ ಪೊಲೀಸ್ ಠಾಣೆ, ರಾಮನಗರ , ಶಿವಸ್ವಾಮಿ ಸಿ ಬಿ, ಪೊಲೀಸ್ ಇನ್ಸ್ಪೆಕ್ಟರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆ. ಬೆಂಗಳೂರು , ರುದ್ರೇಗೌಡ ಆರ್ ಪಾಟೀಲ್, ಪೊಲೀಸ್ ಇನ್ಸ್ಪೆಕ್ಟರ್ ವಿನೋಬ್ ನಗರ ಶಿವಮೊಗ್ಗ ಮತ್ತು ಪಿ. ಸುರೇಶ್ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಂ ಸಿ ಯಾರ್ಡ್ , ಬೆಂಗಳೂರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Sat, 12 August 23
Rashmi Kallakatta
ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ