ಪಾಕ್, ಚೀನಾವನ್ನು ಎದುರಿಸಲು ಶ್ರೀನಗರದಲ್ಲಿ ಹೊಸ MiG-29 ಫೈಟರ್ ಜೆಟ್‌ ನಿಯೋಜಿಸಿದ ಭಾರತ

ಭಾರತೀಯ ಸೇನೆಯು ಶ್ರೀನಗರದ ವಾಯುನೆಲೆಯಲ್ಲಿ ಪಾಕಿಸ್ತಾನಿ ಮತ್ತು ಚೀನಾದ ಸೇನಾ ಬೆದರಿಕೆಯನ್ನು ಎದುರಿಸಲು ಹೊಸ MiG-29 ಫೈಟರ್ ಜೆಟ್‌ಗಳನ್ನು ಸ್ಕ್ವಾಡ್ರನ್​​ ನಿಯೋಜಿಸಿದೆ.

ಪಾಕ್, ಚೀನಾವನ್ನು ಎದುರಿಸಲು ಶ್ರೀನಗರದಲ್ಲಿ ಹೊಸ MiG-29 ಫೈಟರ್ ಜೆಟ್‌ ನಿಯೋಜಿಸಿದ ಭಾರತ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Aug 12, 2023 | 11:29 AM

ಶ್ರೀನಗರ, ಆ12 : ಗಡಿ ವಿಚಾರದಲ್ಲಿ ಭಾರತದ ಜತೆಗೆ ಪದೇ ಪದೇ ಕಿರಿಕ್​​ ಮಾಡಿಕೊಳ್ಳುತ್ತಿದ್ದ ಪಾಕ್​​-ಚೀನಾಕ್ಕೆ, ಭಾರತೀಯ ಸೇನೆ, ಸೈನ್ಯದ ಮೂಲಕವೇ ಖಡಕ್​​ ಉತ್ತರ ನೀಡಲು ಮುಂದಾಗಿದೆ. ಇದೀಗ ಭಾರತೀಯ ಸೇನೆಯು ಶ್ರೀನಗರದ ವಾಯುನೆಲೆಯಲ್ಲಿ ಪಾಕಿಸ್ತಾನಿ ಮತ್ತು ಚೀನಾದ ಸೇನಾ ಬೆದರಿಕೆಯನ್ನು ಎದುರಿಸಲು ಹೊಸ MiG-29 ಫೈಟರ್ ಜೆಟ್‌ಗಳನ್ನು ಸ್ಕ್ವಾಡ್ರನ್​​ ನಿಯೋಜಿಸಿದೆ. “ಉತ್ತರದ ರಕ್ಷಕ” ಎಂದೂ ಕರೆಯಲ್ಪಡುವ ಟ್ರೈಡೆಂಟ್ಸ್ ಸ್ಕ್ವಾಡ್ರನ್​​ನ ಮಿಗ್ -21 ಬದಲು ಮಿಗ್ -29ನ್ನು ಶ್ರೀನಗರದ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗಿದ್ದು, ಇದಕ್ಕೆ ಪಾಕ್​​ -ಚೀನಾದ ಬೆದರಿಕೆಯನ್ನು ಎದುರಿಸುವ ಜಬಾಬ್ದಾರಿಯನ್ನು ನೀಡಲಾಗಿದೆ.

ಶ್ರೀನಗರವು ಕಾಶ್ಮೀರ ಕಣಿವೆಯ ಮಧ್ಯಭಾಗದಲ್ಲಿದೆ. ಇದು ಬಯಲು ಪ್ರದೇಶಕ್ಕಿಂತ ಎತ್ತರದಲ್ಲಿದ್ದು, ಹೆಚ್ಚಿನ ತೂಕ, ಅನುಪಾತ ಮತ್ತು ಕಡಿಮೆ ಪ್ರತಿಕ್ರಿಯೆ ಸಮಯವನ್ನು ಹೊಂದಿರುವ ಹಾಗೂ ಯುದ್ಧ ವಿಮಾನವನ್ನು ಲ್ಯಾಂಡ್ ಅಥವಾ ನಿಲ್ಲಿಸಲು ಉತ್ತಮ ಪ್ರದೇಶದ ಎಂದು ಸೇನೆ ಹೇಳಿದೆ. ಮಿಗ್ -29 ದೀರ್ಘ-ಶ್ರೇಣಿಯ ಕ್ಷಿಪಣಿ ಮತ್ತು ಎಲ್ಲ ಮಾನದಂಡಗಳನ್ನು ಪೂರೈಸುವ ಕಾರ್ಯತಂತ್ರವನ್ನು ಹೊಂದಿದೆ. ಇದರಿಂದಾಗಿ ನಾವು ಎರಡೂ ರಂಗಗಳಲ್ಲಿ ಶತ್ರುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

MiG 29, MiG-21s ಗಿಂತ ಹೆಚ್ಚು ಬಲಶಾಲಿ ಮತ್ತು ಶೀಘ್ರ ಪ್ರಕ್ರಿಯೆ ಶಕ್ತಿಯನ್ನು ಹೊಂದಿದೆ. ಹಲವು ವರ್ಷಗಳಿಂದ ಇದು ಕಾಶ್ಮೀರ ಕಣಿವೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನಮ್ಮ ದೇಶಕ್ಕೆ ರಕ್ಷಣಾ ಕವಚವಾಗಿರಲು ಸಮರ್ಥವಾಗಿವೆ. 2019ರಲ್ಲಿ ಬಾಲಾಕೋಟ್ ವಾಯುದಾಳಿ ನಂತರ ಇದು ಪ್ರತಿಯುತ್ತರವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ F-16ನ್ನು ಹೊಡೆದುರುಳಿಸಿದ್ದವು.

ಇದನ್ನೂ ಓದಿ: 2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್

ಇನ್ನು ನವೀಕರಿಸಲಾದ ಮಿಗ್ -29ನ್ನು ಯುದ್ಧ ಸಮಯದಲ್ಲಿ ಶತ್ರುಗಳ ಯುದ್ಧ ವಿಮಾನ ಸಮಾರ್ಥ್ಯವನ್ನು ಕ್ಷೀಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಂ ರಾಣಾ ಅವರ ಪ್ರಕಾರ ಇದು ಹೆಚ್ಚು ಹೊತ್ತು ಆಕಾಶದಲ್ಲಿ ಹಾರಡುವ ಸಮಾರ್ಥ್ಯವನ್ನು ಹೊಂದಿದ್ದು, ರಾತ್ರಿ ಹೊತ್ತಿನಲ್ಲು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ. ಮಿಗ್ -29ನ್ನು ಈ ವರ್ಷ ಅಂದರೆ 2023 ಜನವರಿಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ನಿಯೋಜನೆ ಮಾಡಲಿದೆ. ಒಂದು ವೇಳೆ ಚೀನಾ ಅಥವಾ ಪಾಕ್ ಗಡಿ ನಿಯಮವನ್ನು ಉಲ್ಲೆಂಘನೆ ಮಾಡಿದರೆ ತಕ್ಷಣ ಮಿಗ್ -29 ಪ್ರತಿಕ್ರಿಯೆ ನೀಡುತ್ತದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್