ಮಹಾರಾಷ್ಟ್ರ: ಔರಂಗಾಬಾದ್ ಜಿಲ್ಲೆ ಕಾರ್ಮಡ್ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಔರಂಗಾಬಾದ್‌ನ ಜಲ್ನಾ ರೈಲ್ವೆ ಮಾಗರ್ದ ಟ್ರ್ಯಾಕ್ ಬಳಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹಾದುಹೋಗಿ 17 ವಲಸೆ ಕಾರ್ಮಿಕರ ಮೃತಪಟ್ಟಿದ್ದಾರೆ. ಹಾಗೂ ಐವರಿಗೆ ಗಂಭೀರ ಗಾಯಗಳಾಗಿವೆ.
ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೆ ಊರುಗಳಿಗೆ ಹೊರಟಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಸ್ವಗ್ರಾಮಗಳಿಗೆ ಹೊರಟಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿ ರೈಲು ಹಳಿ ಮೇಲೆ ಮಲಗಿದ್ದ ಬಡಪಾಯಿಗಳ ಮೇಲೆ ಗೂಡ್ಸ್ ರೈಲು ಹರಿದಿದೆ. ಈ ಪರಿಣಾಮ 17 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತಪಟ್ಟ 17 ಮಂದಿಯಲ್ಲಿ ಮಕ್ಕಳು ಕೂಡ ಇದ್ದರು. ಮೃತರೆಲ್ಲ ಛತ್ತೀಸ್ ಗಢಕ್ಕೆ ಸೇರಿದ ಕಾರ್ಮಿಕರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.