ಲಕ್ನೋ: ಸ್ಮಶಾನದಲ್ಲಿನ ಕಟ್ಟಡದ ಮೇಲ್ಛಾವಣಿ ಕುಸಿದು ಜನ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಮುರಾದ್ ನಗರದಲ್ಲಿ ನಡೆದಿದೆ. ಅವಘಡದಲ್ಲಿ 18 ಜನ ದುರ್ಮರಣ ಹೊಂದಿದ್ದಾರೆ.
ಇನ್ನು, ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಾಮ ಧನ್ ಎಂಬುವ ವ್ಯಕ್ತಿಯ ಅಂತ್ಯಕ್ರಿಯೆಗೆ ಆತನ ಸಂಬಂಧಿಕರು ಸ್ಮಶಾನಕ್ಕೆ ಆಗಮಿಸಿದ್ದರು. ಶವಸಂಸ್ಕಾರದ ವೇಳೆ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ಸ್ಮಶಾನದಲ್ಲಿದ್ದ ಕಟ್ಟಡದ ಕೆಳಗೆ ನಿಂತಿದ್ದಾಗ ಮೇಲ್ಚಾವಣಿ ಕುಸಿದಿದೆ.
ಸಿಲಿಕಾನ್ ಸಿಟಿಯಲ್ಲಿ ಸದ್ದು ಮಾಡಿದ ಖಾಕಿ ಗನ್: ಚಾಕು ತೋರಿಸಿ ಸುಲಿಗೆ ಮಾಡಿದವನ ಕಾಲು ಪಂಚರ್!