ಆಂಧ್ರಪ್ರದೇಶ: ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಆಂಧ್ರಪ್ರದೇಶದ ಬಸ್ ಶನಿವಾರ ಕೇರಳದ ಪತ್ತನಂತಿಟ್ಟ ಬಳಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 18 ಜನರು ಗಾಯಗೊಂಡಿದ್ದಾರೆ.
ಬಸ್ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪ್ರಯಾಣಿಕರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಗೊಂಡ ಎಲ್ಲ ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
Kerala | A bus, carrying 44 Sabarimala pilgrims from Andhra, met with an accident near Laha in Pathanamthitta. All injured have been admitted to hospital. Three people, including an 8-yr-old boy, shifted to Kottayam Medical College hospital. Health min Veena George is at the spot pic.twitter.com/8HXeU91JDa
— ANI (@ANI) November 19, 2022
ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ವಾರದಿಂದ ಪ್ರಾರಂಭವಾದ ಶಬರಿಮಲೆ ಯಾತ್ರೆಯು ಪ್ರತಿ ವರ್ಷ ಸುಮಾರು 50 ಮಿಲಿಯನ್ ಭಕ್ತರನ್ನು ಆಕರ್ಷಿಸುತ್ತದೆ.