Yakub Memon: 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಗೆ ದೀಪಾಲಂಕಾರ, ಇದು ಯಾರ ಕೈವಾಡ?
1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿ ಸುತ್ತ ಮಾರ್ಬಲ್ ಅಳವಡಿಸಲಾಗಿದ್ದು, ದೀಪಾಲಂಕಾರ ಕೂಡ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಆತಂಕ ಸೃಷ್ಟಿಯಾಗಿದೆ.
1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿ ಸುತ್ತ ಮಾರ್ಬಲ್ ಅಳವಡಿಸಲಾಗಿದ್ದು, ದೀಪಾಲಂಕಾರ ಕೂಡ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಆತಂಕ ಸೃಷ್ಟಿಯಾಗಿದೆ. ಐದು ತಿಂಗಳ ಹಿಂದೆ ಸಮಾಧಿಗೆ ಅಮೃತಶಿಲೆ ಹಾಕಿ ದೀಪಾಲಂಕಾರ ಮಾಡುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ನಾಯಕ ರಾಮ್ ಕದಮ್ ದೂರಿನ ಮೇಲೆ ಮುಂಬೈ ಪೊಲೀಸರ ತಂಡವು ಸ್ಮಶಾನವನ್ನು ತಲುಪಿದಾಗ ಅವರಿಗೆ ನಿಜವಾಗಿಯೂ ಅಚ್ಚರಿ ಕಾದಿತ್ತು. ತಕ್ಷಣವೇ ಲೈಟಿಂಗ್ ಅನ್ನು ತೆಗೆದುಹಾಕಲಾಯಿತು. ಇದಕ್ಕೆ ಹಿಂದಿನ ಉದ್ಧವ್ ಠಾಕ್ರೆಯ ಮಹಾ ವಿಕಾಸ್ ಅಘಾಡಿ ಸರ್ಕಾರವೇ ಕಾರಣ ಎಂದು ಬಿಜೆಪಿ ನೇರವಾಗಿ ಆರೋಪಿಸಿದೆ.
ಮುಂಬೈ ಪೊಲೀಸರು ಮಾರ್ಚ್‌ನಲ್ಲಿ ಲೈಟಿಂಗ್ ಅನ್ನು ತೆಗೆದುಹಾಕಿದರು, ಈಗ ಬಿಜೆಪಿಯು ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ದೂರಿದೆ. ಅದೇ ಸಮಯದಲ್ಲಿ, ಈ ಸುದ್ದಿಯ ಬಗ್ಗೆ ಮಾಹಿತಿ ಪಡೆದ ಮುಂಬೈ ಪೊಲೀಸ್ ತಂಡವು ಸ್ಥಳವನ್ನು ಪರಿಶೀಲಿಸಿತು ಮತ್ತು ಸಮಾಧಿಯ ಬಳಿ ದೀಪವನ್ನು ತೆಗೆದುಹಾಕಿದರು. ಇದರೊಂದಿಗೆ ಮುಂಬೈ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್‌ನಲ್ಲಿ ಶಾಬ್-ಎ-ಬರಾತ್ ಸಮಯದಲ್ಲಿ ಯಾಕೂಬ್ ಸಮಾಧಿಯ ಮೇಲೆ ಈ ದೀಪವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಉದ್ಧವ್ ಠಾಕ್ರೆ ಸಿಎಂ ಆಗಿದ್ದಾಗ ಸಮಾಧಿಯನ್ನು ಅಲಂಕರಿಸುವ ಕೆಲಸ ನಡೆದಿದೆ ಎಂದು ಬಿಜೆಪಿ ಹೇಳುತ್ತಿದೆ.
ಈ ವಿಚಾರದಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು. ಮತ್ತೊಂದೆಡೆ, ಯಾಕೂಬ್ ಮೆಮನ್‌ನ ಸಮಾಧಿಯನ್ನು ಕೆಡವಬೇಕು ಎಂದು ವಿಎಚ್‌ಪಿ ವಕ್ತಾರ ಶ್ರೀರಾಜ್ ನಾಯರ್ ಒತ್ತಾಯಿಸಿದ್ದಾರೆ. ಭಯೋತ್ಪಾದಕರ ಸಮಾಧಿಯ ಮೇಲೆ ದೀಪಗಳನ್ನು ಹಾಕುವುದು ಭಯೋತ್ಪಾದನೆಯನ್ನು ಬೆಂಬಲಿಸಿದಂತೆ.
ಯಾಕೂಬ್ ಮೆಮನ್ ಸಮಾಧಿಯಲ್ಲಿ ಈ ವರ್ಷದ ಮಾರ್ಚ್‌ಗಿಂತ ಮೊದಲು ಹ್ಯಾಲೊಜೆನ್ ದೀಪಗಳನ್ನು ಅಳವಡಿಸಲಾಗಿತ್ತು. ಈಗ ಸಮಾಧಿಯಿಂದ ದೀಪವನ್ನು ತೆಗೆದುಹಾಕಲಾಗಿದೆ. ಈ ಸ್ಮಶಾನವು ಬಡಾ ಸ್ಮಶಾನ ಎಂದು ಕರೆಯಲ್ಪಡುವ ಮೆರೈನ್ ಲೈನ್ಸ್ ನಿಲ್ದಾಣದ ಬಳಿ ಇದೆ. ಸಮಾಧಿಯ ಚಿತ್ರಗಳನ್ನು ನೋಡಿದರೆ ಸುತ್ತಲೂ ಮಾರ್ಬಲ್ ಲೇಪನ ಮಾಡಲಾಗಿದೆ ಎಂದು ಹೇಳಬಹುದು.
ಸಮಾಧಿ ಬಳಿ ದೊಡ್ಡ ದೀಪಗಳನ್ನು ಅಳವಡಿಸಲಾಗಿದೆ. ಈ ಚಿತ್ರಗಳು ಹಳೆಯದಾದರೂ ಅದನ್ನು ಹಾಕಲು ಅನುಮತಿ ನೀಡಿದವರು ಯಾರು ಎಂಬುದು ಪ್ರಶ್ನೆ. ಯಾಕೂಬ್ ನಂತರ, ಅವನ ಸಂಬಂಧಿಕರನ್ನು ಸಹ ಇಲ್ಲಿ ಸಮಾಧಿ ಮಾಡಲಾಗಿದೆ.
2015ರಲ್ಲಿ ಗಲ್ಲಿಗೇರಿಸಿದ ನಂತರ ಯಾಕೂಬ್ ಮೆಮನ್‌ನನ್ನು ಮುಂಬೈನ ಬಡಾ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಯಾಕೂಬ್ ಸ್ಫೋಟದ ಎರಡನೇ ಆರೋಪಿ ಟೈಗರ್ ಮೆಮನ್‌ನ ಸಹೋದರ. ಇತ್ತೀಚೆಗೆ ಎನ್‌ಐಎ ಟೈಗರ್ ಮೆಮನ್‌ಗೆ 15 ಲಕ್ಷ ಬಹುಮಾನ ಘೋಷಿಸಿತ್ತು. ಅದೇ ವೇಳೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೇಲೆ 25 ಲಕ್ಷ ಬಹುಮಾನ ಘೋಷಿಸಲಾಗಿದೆ.
ಭದ್ರತಾ ಏಜೆನ್ಸಿಗಳ ಪ್ರಕಾರ, ಟೈಗರ್ ಮೆಮನ್ ಪ್ರಸ್ತುತ ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹಿಂ ಜೊತೆ ವಾಸಿಸುತ್ತಿದ್ದಾರೆ. ದಾವೂದ್ ಸೂಚನೆ ಮೇರೆಗೆ ಮೆಮನ್ ಸಹೋದರರು ಸ್ಫೋಟದ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ