BJP V/s Oposition Parties: 2024 ಲೋಕಸಭಾ‌ ಚುನಾವಣೆಗೆ ಬಿಜೆಪಿ V/s ವಿರೋಧ ಪಕ್ಷಗಳು..! ವಿರೋಧ ಪಕ್ಷಗಳನ್ನು ಎದುರಿಸಲು ಮೋದಿ‌-ಶಾ ಜೋಡಿ ಮಾಡಿರುವ ಪ್ಲಾನ್ ಏನು..?

ಭಾರತೀಯ ಜನತಾ ಪಕ್ಷ ವಿರೋಧ ಪಕ್ಷಗಳ ರಣೋತ್ಸಾಹ ಎದುರಿಸಲು ಸಿದ್ಧತೆ ವಿಭಿನ್ನವಾಗಿದೆ. ಪ್ರತಿಪಕ್ಷಗಳ ದೌರ್ಬಲ್ಯವೇ ಬಿಜೆಪಿಗೆ ಅಸ್ತ್ರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡ‌ ಸೇರಿಸಲು ಆ ಪಕ್ಷದ ನಾಯಕರು 5 ಅಂಶಗಳ ಮೇಲೆ‌ ವರ್ಕೌಟ್ ಮಾಡುತ್ತಿದ್ದಾರೆ.

BJP V/s Oposition Parties: 2024 ಲೋಕಸಭಾ‌ ಚುನಾವಣೆಗೆ ಬಿಜೆಪಿ V/s ವಿರೋಧ ಪಕ್ಷಗಳು..! ವಿರೋಧ ಪಕ್ಷಗಳನ್ನು ಎದುರಿಸಲು ಮೋದಿ‌-ಶಾ ಜೋಡಿ ಮಾಡಿರುವ ಪ್ಲಾನ್ ಏನು..?
BJP V/s Opposition Parties
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 08, 2022 | 1:10 PM

ದೆಹಲಿ: ಮುಂದಿನ ಲೋಕಸಭಾ‌ ಚುನಾವಣೆಯ ರಣಕಣದ ಅಖಾಡ ಈಗಿನಿಂದಲೇ‌ ಸಜ್ಜುಗೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ‌ ಅವರ ನೇತೃತ್ವದಲ್ಲಿ ಐತಿಹಾಸಿಕ ‘ಭಾರತ್ ಜೋಡೋ ಯಾತ್ರೆ‘ ಆರಂಭಿಸಿದೆ. ಇನ್ನೊಂದೆಡೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೂಡ ಭಾರತೀಯ ಜನತಾ ಪಕ್ಷದ ವಿರುದ್ಧ ವಾತಾವರಣವನ್ನು ಸೃಷ್ಟಿಸಲು ತೊಡಗಿದ್ದಾರೆ.

ಪ್ರತಿಪಕ್ಷಗಳ ಇಷ್ಟೆಲ್ಲಾ ತಯಾರಿ ನೋಡಿಕೊಂಡು ಬಿಜೆಪಿ ನಾಯಕರು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸದಾ‌ ಚುನಾವಣೆಯನ್ನೇ‌ ಉಸಿರಾಡುವ ಬಿಜೆಪಿ ನಾಯಕರು ಪ್ರತಿಪಕ್ಷಗಳನ್ನು ಎದುರಿಸಲು ತಯಾರಿ ಆರಂಭಿಸಿ ಮೂರು ವರ್ಷಗಳು ಕಳೆದಿವೆ. 2019ರ ಲೋಕಸಭಾ ಚುನಾವಣೆ ಗೆದ್ದ ಮರುದಿನವೆ 2024ರ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ತಂತ್ರಗಾರಿಕೆ‌ ಹೆಣೆಯುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ವಿರೋಧ ಪಕ್ಷಗಳ ರಣೋತ್ಸಾಹ ಎದುರಿಸಲು ಸಿದ್ಧತೆ ವಿಭಿನ್ನವಾಗಿದೆ. ಪ್ರತಿಪಕ್ಷಗಳ ದೌರ್ಬಲ್ಯವೇ ಬಿಜೆಪಿಗೆ ಅಸ್ತ್ರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡ‌ ಸೇರಿಸಲು ಆ ಪಕ್ಷದ ನಾಯಕರು 5 ಅಂಶಗಳ ಮೇಲೆ‌ ವರ್ಕೌಟ್ ಮಾಡುತ್ತಿದ್ದಾರೆ. ಬಿಜೆಪಿಯ ಆ 5 ಅಂಶಗಳು ಏನು ಅಂತಾ ನೋಡೊದಾದ್ರೆ..

ಸರ್ಕಾರದಲ್ಲಿ ಸಂಘಟನೆ ಮತ್ತು ಕಾರ್ಯಕರ್ತರಿಗೆ ಗೌರವ..!

ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಂಘಟನಾ ಸಚಿವ ಬಿಎಲ್ ಸಂತೋಷ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಸಂಪೂರ್ಣ ಗೌರವ ನೀಡಬೇಕು ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಯಕರ್ತರು ಮತ್ತು ಸಂಘಟನೆಗಳಿಗಿಂತ ಮಿಗಿಲಾದ ಸರ್ಕಾರವಿಲ್ಲ. ಕಾರ್ಯಕರ್ತರು ಮತ್ತು ಸಂಘಟನೆಯಿಂದಾಗಿ ಸರ್ಕಾರ ರಚನೆಯಾಗಿದೆ. ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಸರ್ಕಾರಗಳು ಮತ್ತು ಮಂತ್ರಿಗಳಿಗೆ ಈ ವಿಷಯ ತಿಳಿದಿರಬೇಕು. ಕಾರ್ಯಕರ್ತನಿಗಿಂದ ತಾನು ದೊಡ್ಡವನಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆದ್ದರಿಂದ ಕಾರ್ಯಕರ್ತರ ಪ್ರತಿಯೊಂದು ಸಮಸ್ಯೆಯನ್ನು ಆಲಿಸಿ ಪರಿಹರಿಸಿ ಎಂದು ಅಮಿತ್ ಶಾ ಸೂಚನೆ‌ ನೀಡಿದ್ದಾರೆ.

ದಲಿತ-ಒಬಿಸಿ ವರ್ಗದತ್ತ ಬಿಜೆಪಿ ಹೆಚ್ಚು ಗಮನ

ಒಂದು ಕಾಲದಲ್ಲಿ ಕೆಲವೇ ಕೆಲವು ಮೇಲ್ಜಾತಿ ಜಾತಿಗಳಿಗೆ ಸೀಮಿತ ಎಂಬ ಹಣಪಟ್ಟಿ ಹೊತ್ತಿದ್ದ ಬಿಜೆಪಿ ಪಕ್ಷ ಇಂದು ದಲಿತ ಹಾಗೂ ಹಿಂದುಳಿದ ವರ್ಗಗಳ ದೊಡ್ಡ ಬೆಂಬಲವನ್ನು ಪಡೆಯುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ವರ್ಗಕ್ಕೆ ಒತ್ತು ನೀಡಲು ಬಿಜೆಪಿ ಪ್ಲಾನ್ ಮಾಡಿದೆ. ಮೊಟ್ಟಮೊದಲ ಬಾರಿಗೆ ಬಿಜೆಪಿಯು ದ್ರೌಪದಿ ಮುರ್ಮು ಅವರ ರೂಪದಲ್ಲಿ ಬುಡಕಟ್ಟು ಜನಾಂಗದ ರಾಷ್ಟ್ರಪತಿಯವರನ್ನು ದೇಶಕ್ಕೆ ನೀಡಿದೆ ಎಂದು ಪ್ರಚಾರ ನಡೆಸುತ್ತಿದೆ. ಇದಲ್ಲದೇ ದಲಿತ ಮತ್ತು ಒಬಿಸಿ ಸಂಸದರು, ಪಕ್ಷದ ಮುಖಂಡರನ್ನು ಪ್ರಸ್ತಾಪಿಸಿ, ಬಿಜೆಪಿಯಲ್ಲಿ ಬಡವರು, ಹಿಂದುಳಿದವರು ಮತ್ತು ವಂಚಿತ ವರ್ಗದವರ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ಸೋತ ಕ್ಷೇತ್ರಗಳತ್ತ ಬಿಜೆಪಿ ಚಿತ್ತ..!

543 ಸದಸ್ಯ ಬಲದ ಲೋಕಸಭೆಯಲ್ಲಿ ಸದ್ಯ ಬಿಜೆಪಿ 303 ಸದಸ್ಯರನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 150 ಸ್ಥಾನಗಳಲ್ಲಿ ಬಿಜೆಪಿ ಎರಡನೇ‌ ಸ್ಥಾನದಲ್ಲಿದೆ. ಈಗ ಪಕ್ಷವು ಈ 150 ಸ್ಥಾನಗಳ ಮೇಲೆ ಕೇಂದ್ರೀಕರಿಸಿದೆ. ಕಳೆದ ಬಾರಿ ಸೋಲಿಗೆ ಕಾರಣವಾದ ಅಂಶಗಳನ್ನು ಕೇಂದ್ರಿಕರಿಸಿ ವರ್ಕೌಟ್ ಮಾಡುವ ಪ್ರಯತ್ನ ಶುರುಮಾಡಿದ್ದಾರೆ. ಕಾರ್ಯಕರ್ತನಿಂದ‌ ನಾಯಕನವರೆಗೆ ಗ್ರೌಂಡ್ ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಕ್ಷೇತ್ರದ ಜನರೊಂದೊಗೆ ನಿರಂತರ ಸಂಪರ್ಕ‌ ಸಾಧಿಸಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯದ ಸಚಿವರಿಗೆ ಚುನಾವಣಾ ಜವಾಬ್ದಾರಿ..!

ಕಳೆದ ಭಾರಿ ಸೋತಿರುವ ಕ್ಷೇತ್ರಗಳಲ್ಲಿ ಹಾಗೆಯೇ ಗೆದ್ದಿರುವ ಕ್ಷೇತ್ರಗಳಲ್ಲಿ ಬಿಜೆಪಿ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಬಿಜೆಪಿ ಗೆಲುವಿಗೆ ವ್ಯತಿರಿಕ್ತವಾಗಿ ಇರುವ ಕ್ಷೇತ್ರಗಳಲ್ಲಿ‌ ಹೆಚ್ಚಿನ ಸಂಘಟನೆ ಮಾಡಲು ಪ್ಲಾನ್ ಮಾಡುತ್ತಿದೆ. ಬಿಜೆಪಿಯನ್ನು ಬಲಪಡಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಚಿವರಿಗೆ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಆಗಾಗ ಬಿಜೆಪಿ ನಾಯಕರು ಅಥವಾ ಸಚಿವರ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಬಿಜೆಪಿ ನೇರವಾಗಿ ಇಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲಿದೆ. ಸಚಿವರು ಗ್ರಾಮದಲ್ಲಿ ಜನರನ್ನು ಭೇಟಿ ಮಾಡುವಂತೆ ಸೂಚಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಚಾರ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಾಧ್ಯವಾದಷ್ಟು ಪ್ರಚಾರ ಮಾಡಬೇಕು. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬ ಮತದಾರರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ. ಯೋಜನೆಗಳ ಮಾಹಿತಿ ತಲುಪಿಸುವ ಜವಾಬ್ದಾರಿಯನ್ನು ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಯೋಜನೆಗಳ ಲಾಭವನ್ನು ಅರ್ಹರಿಗೆ ಒದಗಿಸುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗಿದೆ.

ಹರೀಶ್ ಜಿ.ಆರ್, ಹಿರಿಯ ವರದಿಗಾರ ನವದೆಹಲಿ, ಟಿವಿ9

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ