ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ 2 ಸೇನಾ ಅಧಿಕಾರಿಗಳು, ಯೋಧ ಹುತಾತ್ಮ

|

Updated on: Nov 22, 2023 | 8:05 PM

ಎನ್‌ಕೌಂಟರ್‌ ವೇಳೆ ಒಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಸೇನೆಯ ವಿಶೇಷ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಎನ್‌ಕೌಂಟರ್ ಪ್ರಾರಂಭವಾಯಿತು.

ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ 2 ಸೇನಾ ಅಧಿಕಾರಿಗಳು, ಯೋಧ ಹುತಾತ್ಮ
Follow us on

ಶ್ರೀನಗರ ನವೆಂಬರ್ 22: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ (Rajouri) ಜಿಲ್ಲೆಯ ಕಲಕೋಟ್ ಅರಣ್ಯದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಎನ್‌ಕೌಂಟರ್‌ (Encounter) ವೇಳೆ ಒಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಸೇನೆಯ ವಿಶೇಷ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಎನ್‌ಕೌಂಟರ್ ಪ್ರಾರಂಭವಾಯಿತು.

ಜಮ್ಮು ಮತ್ತು ಕಾಶ್ಮೀರದ ಪಿರ್ ಪಂಜಾಲ್ ಅರಣ್ಯವು ಕಳೆದ ಕೆಲವು ವರ್ಷಗಳಲ್ಲಿ ಸರಣಿ ಎನ್‌ಕೌಂಟರ್‌ಗಳ ನಂತರ ಭದ್ರತಾ ಪಡೆಗಳಿಗೆ ಸವಾಲಾಗಿದೆ. ಹುತಾತ್ಮರನ್ನು  63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂವಿ ಪ್ರಾಂಜಲ್ ಮತ್ತು 9 ಪಿಎಆರ್‌ಎಯ ಕ್ಯಾಪ್ಟನ್ ಶುಭಂ ಮತ್ತು ಹವಾಲ್ದಾರ್ ಮಜೀದ್ ಎಂದು ಗುರುತಿಸಲಾಗಿದೆ. 9 ಪ್ಯಾರಾ ಸೈನಿಕರು ಕ್ಯಾಪ್ಟನ್ ಪ್ರಾಂಜಲ್ ಅವರನ್ನು ಸ್ಥಳಾಂತರಿಸಲು ಅರಣ್ಯಕ್ಕೆ ತೆರಳಿದ್ದರು, ಆದರೆ ಅವರು ಭಾರೀ ಗುಂಡಿನ ದಾಳಿಗೆ ಒಳಗಾದರು ಎಂದು ಮೂಲಗಳು ತಿಳಿಸಿವೆ.

ಐದರಿಂದ ಆರು ಮಂದಿಯೆಂದು ನಂಬಲಾದ ಉಗ್ರಗಾಮಿಗಳು ಇನ್ನೂ ಗುಂಡಿನ ದಾಳಿ ನಡೆಸುತ್ತಿದ್ದು, ಸಂಜೆಯವರೆಗೂ ಕನಿಷ್ಠ ಇಬ್ಬರು ಸೈನಿಕರ ಮೃತದೇಹಗಳನ್ನು ಸ್ಥಳಾಂತರಿಸಲಾಗಿಲ್ಲ.

ಗಾಯಗೊಂಡ 9 ಪಿಎಆರ್‌ಎ ಮೇಜರ್‌ನನ್ನು ಉಧಮ್‌ಪುರದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆವರ  ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನ ಹತ್ಯೆಯಾಗಿರುವುದಾಗಿ  ಎಂದು ವರದಿಯಾಗಿದೆ, ಆದರೂ ಆತನ ದೇಹವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ.

ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿರುವ ಅಧಿಕಾರಿಗಳು, ಕಲಕೋಟೆಯ ಬಾಜಿ ಮಲ್ ಮೇಲಿನ ಅರಣ್ಯದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಎನ್‌ಕೌಂಟರ್ ಪ್ರಾರಂಭವಾಯಿತು, ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಶೋಧ ಆರಂಭಿಸಿದ ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದರು.

ದಾಳಿಕೋರರು ಇತ್ತೀಚೆಗಷ್ಟೇ ಗಡಿ ನಿಯಂತ್ರಣ ರೇಖೆಯಿಂದ ನುಸುಳಿರುವ ಹೊಸ ಗುಂಪಿನಂತೆ ತೋರುತ್ತಿದ್ದಾರೆ, ಪೊಲೀಸರು ಮತ್ತು ಭದ್ರತಾ ಪಡೆಗಳು ಈಗಾಗಲೇ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿKulgam Encounter: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಎನ್​ಕೌಂಟರ್​, ಮೂವರು ಲಷ್ಕರ್ ಉಗ್ರರ ಹತ್ಯೆ

ಇದಕ್ಕೂ ಮುನ್ನ, ಶುಕ್ರವಾರ, ರಜೌರಿ ಜಿಲ್ಲೆಯ ಬುಧಾಲ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬನನ್ನು ಕೊಲ್ಲಲಾಯಿತು. ಹತ್ಯೆಗೀಡಾದ ಉಗ್ರನಿಂದ ಎಕೆ-47 ರೈಫಲ್, ಮೂರು ಮ್ಯಾಗಜೀನ್‌ಗಳು, ಮೂರು ಗ್ರೆನೇಡ್‌ಗಳು ಮತ್ತು ಒಂದು ಚೀಲವನ್ನು ವಶಪಡಿಸಿಕೊಳ್ಳಲಾಗಿದೆ, ಅವರ ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯರನ್ನು ಉಲ್ಲೇಖಿಸಿ, ಮೂಲಗಳು ಹೇಳುವಂತೆ ಭಾನುವಾರ ಇಬ್ಬರು ಉಗ್ರರು ಕೇರಿ ಚದ್ದಾರ್ ಗ್ರಾಮದ ಬಳಿಯ ಮನೆಗೆ ಭೇಟಿ ನೀಡಿ ಆಹಾರ ಕೇಳಿದ್ದಾರೆ. ಭದ್ರತಾ ಪಡೆಗಳು ಪ್ರದೇಶವನ್ನು ತಲುಪಿದವು ಆದರೆ ಉಗ್ರರು ಅಷ್ಟರಲ್ಲಿ ಪರಾರಿಯಾಗಿದ್ದರು.

ಮಂಗಳವಾರ, ಉಗ್ರರು ಆಹಾರ ನೀಡಲು ನಿರಾಕರಿಸಿದ ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆ. ಅವರು ಕೂಡ ಘಟನೆಯನ್ನು ಭದ್ರತಾ ಪಡೆಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Wed, 22 November 23