ಗುಜರಾತ್: ಕೆಮ್ಮು ವಾಸಿಯಾಗಲು 2 ತಿಂಗಳ ಬಾಲೆಗೆ ಕಬ್ಬಿಣದ ರಾಡ್ ಕಾಯಿಸಿಟ್ಟ ಢೋಂಗಿ ವೈದ್ಯ

| Updated By: ರಶ್ಮಿ ಕಲ್ಲಕಟ್ಟ

Updated on: Feb 12, 2023 | 6:20 PM

ಒಂದು ವಾರದ ಹಿಂದೆ ಮಗುವಿಗೆ ಕೆಮ್ಮು ಮತ್ತು ಕಫದಿಂದ ಬಳಲುತ್ತಿದ್ದು, ಆಕೆಯ ಪೋಷಕರು ಮನೆಯಲ್ಲಿ ಸ್ಥಳೀಯ ಚಿಕಿತ್ಸೆಗೆ ಪ್ರಯತ್ನಿಸಿದರು. ಆದರೆ ಆಕೆಗೆ ಪರಿಹಾರ ಸಿಕ್ಕಿಲ್ಲ. ಅದರ ನಂತರ, ಮಗುವಿನ ತಾಯಿ ಅವಳನ್ನು ದೇವರಾಜಭಾಯ್ ಕತಾರಾ ಬಳಿ ಕರೆದೊಯ್ದರು ಎಂದು ಮಹೇದು ಹೇಳಿದ್ದಾರೆ

ಗುಜರಾತ್: ಕೆಮ್ಮು ವಾಸಿಯಾಗಲು 2 ತಿಂಗಳ ಬಾಲೆಗೆ ಕಬ್ಬಿಣದ ರಾಡ್ ಕಾಯಿಸಿಟ್ಟ ಢೋಂಗಿ ವೈದ್ಯ
ಗುಜರಾತ್ ಪೊಲೀಸ್
Follow us on

ಪೋರಬಂದರ್: ಗುಜರಾತಿನ (Gujarat) ಪೋರಬಂದರ್ (Porbandar) ಜಿಲ್ಲೆಯಲ್ಲಿ ಎರಡು ತಿಂಗಳ ಹೆಣ್ಣು ಮಗುವಿನ ಕೆಮ್ಮು ವಾಸಿ ಮಾಡುತ್ತೇನೆಂದು ಢೋಂಗಿ ವೈದ್ಯ ಬಿಸಿ ಕಬ್ಬಿಣದ ರಾಡ್‌ನಿಂದ ಕಾಯಿಸಿಟ್ಟ ಘಟನೆ ವರದಿ ಆಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈ ರೀತಿ ಸಲಹೆ ನೀಡಿದ ಢೋಂಗಿ ವೈದ್ಯನನ್ನು ಭಾನುವಾರ ಬಂಧಿಸಲಾಗಿದ್ದು, ಆತನ ಮತ್ತು ಮಗುವಿನ ತಾಯಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಮಹೇದು ತಿಳಿಸಿದ್ದಾರೆ.ಮಗುವನ್ನು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಆಕೆಯನ್ನು ನಿಗಾದಲ್ಲಿರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಒಂದು ವಾರದ ಹಿಂದೆ ಮಗುವಿಗೆ ಕೆಮ್ಮು ಮತ್ತು ಕಫದಿಂದ ಬಳಲುತ್ತಿದ್ದು, ಆಕೆಯ ಪೋಷಕರು ಮನೆಯಲ್ಲಿ ಸ್ಥಳೀಯ ಚಿಕಿತ್ಸೆಗೆ ಪ್ರಯತ್ನಿಸಿದರು. ಆದರೆ ಆಕೆಗೆ ಪರಿಹಾರ ಸಿಕ್ಕಿಲ್ಲ. ಅದರ ನಂತರ, ಮಗುವಿನ ತಾಯಿ ಅವಳನ್ನು ದೇವರಾಜಭಾಯ್ ಕತಾರಾ ಬಳಿ ಕರೆದೊಯ್ದರು ಎಂದು ಮಹೇದು ಹೇಳಿದ್ದಾರೆ.

ಕತಾರಾ ಮಗುವಿನ ಎದೆ ಮತ್ತು ಹೊಟ್ಟೆಯ ಮೇಲೆ ಬಿಸಿಯಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದು, ಅದರಲ್ಲಿಯೂ ಗುಣವಾಗದೇ ಇದ್ದಾಗ, ಪೋಷಕರು ಮಗುವನ್ನು ಪೋರಬಂದರ್‌ನ ಭಾವಸಿಂಹಜಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿಂದ ವಿಷಯ ಬೆಳಕಿಗೆ ಬಂದಿದೆ.ಪೋರಬಂದರ್‌ನ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Delhi Mumbai Expressway: ರಾಜಸ್ಥಾನದ ದೌಸಾದಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತಕ್ಕೆ ಮೋದಿ ಚಾಲನೆ

ಫೆಬ್ರವರಿ 9 ರಂದು ಉಸಿರಾಟದ ತೊಂದರೆಯೊಂದಿಗೆ ಮಗುವನ್ನು ವೈದ್ಯಕೀಯ ಸೌಲಭ್ಯಕ್ಕೆ ತರಲಾಯಿತು ಎಂದು ಜನರಲ್ ಆಸ್ಪತ್ರೆಯ ಡಾ ಜೈ ಬದಿಯಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಅವಳನ್ನು ICU ನಲ್ಲಿ ಆಮ್ಲಜನಕ ಸಪೋರ್ಟ್ ನೀಡಿ ಇರಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅವಳು ಎದೆಯ ಮೇಲೆ ಸುಟ್ಟ ಗಾಯ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ .ಇದು ಗಂಭೀರವಾಗುವಂತೆ ಮಾಡಿದೆ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಮಗುವಿಗೆ ವಾಮಾಚಾರ ಮಾಡುವವ 50 ಕ್ಕೂ ಹೆಚ್ಚು ಬಾರಿ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದು ಮಗು ಸಾವಿಗೀಡಾಗಿದೆ. 3 ತಿಂಗಳ ಹೆಣ್ಣು ಮಗುವಿಗೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದ ಮತ್ತೊಂದು ಪ್ರಕರಣವೂ ಶಾಹದೋಲ್‌ನಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ